News

ಎತ್ತುಗಳ ಭಾರ ಕಡಿಮೆ ಮಾಡಲು ಭರ್ಜರಿ ಐಡಿಯಾ..ಹೇಗಿದೆ ನೋಡಿ

18 July, 2022 10:04 AM IST By: Maltesh
Unique bullock cart maharashtra

ನೀವು ನಿಮ್ಮ ಜೀವನದಲ್ಲಿ ಎಲ್ಲಾದರೂ ಕೂಡ ಅಥವಾ ಸಿನಿಮಾದಲ್ಲಾದರು ಕೊನೆ ಪಕ್ಷ ಎತ್ತಿನ ಬಂಡಿಯನ್ನು ನೋಡಿರಬಹುದು. ಹಾಗೂ ನೋಡಿಯೇ ಇರುತ್ತೀರು ಎಂದಿಟ್ಟುಕೊಳ್ಳೋಣ. ಸದ್ಯ ಒಂದು ಎತ್ತಿನ ಬಂಡಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಾವಾ ಸೃಷ್ಟಿಸಿದೆ ಅಂದ್ರೆ ನೋಈವು ನಂಬಲೆಬೇಕು.

ಅರೇ ಇದೇನಿದು ಇಂಟರ್‌ನೆಟ್‌, ಸ್ಟೇಟಸ್‌, ರೀಲ್ಸ್‌ ಅನ್ನೋ ಈ ಯುಗದಲ್ಲಿ ಎತ್ತುನ ಬಂಡೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿ ಎಂಬುದರ ಕುರಿತು ನಾವು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಯೆಸ್‌ ಸಾಮಾನ್ಯವಾಗಿ ಎತ್ತಿನ ಬಂಡಿಗಳನ್ನು ರೈತರು ಉಪಯೋಗಿಸುತ್ತಾರೆ. ಋತನ ಜೀವನಾಡಿ ಅಂದ್ರೆ ಅದು ಎತ್ತಿನ ಬಂಡಿ ಹಾಗೂ ಎತ್ತುಗಳು.

ಮೂಲಗಳ ಪ್ರಕಾರ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ರಾಜಾರಾಂಬಾಪು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ಯ ವಿದ್ಯಾರ್ಥಿಗಳು ಒಂದು ಹೊಸ ಡತ್ತಿನ ಬ<ಡಿಯನ್ನು ವಿನ್ಯಾಸಗೊಳಿಸಿದ್ದು ಅದು ಇದೀಗ ಟ್ರೆಂಡಿಗ್‌ ಆಗಿದೆ.

ಇದನ್ನೂ ಓದಿರಿ: ರೈತರಿಗೆ ಬಂಪರ್‌ ಸುದ್ದಿ: ಕೇಂದ್ರ ಕೃಷಿ ಸಚಿವರಿಂದ 30,000 ಕೋಟಿ ಕೃಷಿ ಸಾಲ ವಿತರಣೆಗೆ ಗುರಿ! ಯಾರು ಅರ್ಹರು ಗೊತ್ತೆ?

ಈಗ ವೈರಲ್ ಆಗಿರುವ ಚಿತ್ರದಲ್ಲಿ, ಎರಡು ಸಾಮಾನ್ಯ ಚಕ್ರಗಳೊಂದಿಗೆ ಎತ್ತಿನ ಬಂಡಿಯನ್ನು ಕಾಣಬಹುದು. ಆದಾಗ್ಯೂ, ಈ ವಿಶಿಷ್ಟ ಕಾರ್ಟ್ ಪೋರ್ಟಬಲ್ ಚಕ್ರವನ್ನು ಸೇರಿಸುವುದರೊಂದಿಗೆ ಈ ವಿನ್ಯಾಸ ರೂಪುಗೊಂಡಿದೆ. ಇದು ರೋಲಿಂಗ್ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚುವರಿ ಟೈರ್‌ನಿಂದಾಗಿ, ಎತ್ತುಗಳು ಹೊತ್ತೊಯ್ಯುವ ಭಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ಸಮವಾಗಿ ಬೇರ್ಪಡಿಸುತ್ತದೆ ಏಂಬುದು ಇದರ ವಿಶೇಷವಾಗಿದೆ.

ಇನ್ನು ಈ ವಿಭಿನ್ನ ತಂತ್ರಗಾರಿಕೆಯಿಂದ ರೂಪುಗೊಂಡಿರುವ ಈ ಬಂಡಿಯ ಚಿತ್ರವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟರ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದು ಪೋಸ್ಟ್‌ ಆಗಿದ್ದೆ ತಡ್‌ ಸಾವಿರಾರು ಜನರು ಇದನ್ನು ಗಮನಿಸಿದ್ದು ವಿದ್ಯಾರ್ಥಿಗಳ ವಿಭಿನ್ನ ಪ್ರಯತ್ನಕ್ಕೆ ಶಬ್ಬಾಷ್‌ ಎಂದಿದ್ದಾರೆ.

37 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಪೋಸ್ಟ್ ವೇಗವಾಗಿ ವೈರಲ್ ಆಗಿದ್ದು, ಇದನ್ನ ಕಂಡ ನೆಟಿಜೆನ್ಸ್‌ ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆಗಸ್ಟ್‌ 5ರಿಂದ ಲಾಲ್‌ಬಾಗ್‌ ಫ್ಲಾವರ್‌ ಶೋ ಆರಂಭ

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದವ ಬೆಂಗಳೂರಿನ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಮತ್ತೆ ಆರಂಭಗೊಳ್ಳಲಿದೆ. ಹೌದು ಕೋವಿಡ್‌ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಈ ಫ್ಲವರ್ ಶೋವನ್ನು ಇದೇ ಆಗಸ್ಟ್‌ 5ರಿಂದ ಆರಂಭಿಸಲಾಗುವುದು ಹಾಗೂ ಕೋವಿಡ್ ನಿಯಮಾವಳಿಗಳು ಸಡಿಲವಾಗಿರುವ ಕಾರಣದಿಂದ ಪ್ರತಿ ವರ್ಷಕ್ಕಿಂತಲೂ ಈ ಸಲ ಅದ್ದೂರಿಯಾಗಿ ನಡೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

ನಗರದ ಲಾಲ್‌ಬಾಗ್‌ ಉದ್ಯಾನದಲ್ಲಿ ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ  ಆಯೋಜಿಸುವ ಫ್ಲವರ್‌ ಶೋ ಅನ್ನು ಸ್ಯಾಂಡಲ್‌ವುಡ್‌ನ ದಿವಗಂತ ನಟ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಈ ಪ್ರದರ್ಶನವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಆಗಸ್ಟ್ 5 ಕ್ಕೆ ಉದ್ಘಾಟಿಸಲಿದ್ದು, ಆಗಸ್ಟ್‌ 15ರವರೆಗೆ ಲಾಲ್‌ಬಾಗ್‌ ಉದ್ಯಾನದಲ್ಲಿ ಈ ಶೋ ನಡೆಯಲಿದೆ.

ಇಂತಹ ಹೆಚ್ಚಿನ ಕೃಷಿ ಸಂಬಂಧಿತ ಸುದ್ದಿಗಳು ಹಾಗೂ ಮಾಹಿತಿಗಾಗಿ www.kannada.krishijagran.com ಭೇಟಿ ನೀಡಿ.. ನಿರಂತರ ಸಂಪರ್ಕಕ್ಕಾಗಿ ನಮ್ಮ ವೆಬ್‌ಸೈಟ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿ. ಇನ್ನು ನೀವು ಕೃಷಿ ಸಂಬಧಿತ ಲೇಖನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ kannada@krishijagran.com. ಇಮೇಲ್ ಮಾಡಿ. ನಿಮ್ಮ ಮಾಹಿತಿಯುಕ್ತ ಬರಹಗಳಿಗೆ ನಾವು ವೇದಿಕೆಯೊದಗಿಸುತ್ತೇವೆ.