News

ಬಹುರಾಜ್ಯ ಮಟ್ಟದ ಬೀಜ ಸೊಸೈಟಿ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ

12 January, 2023 9:00 PM IST By: Hitesh
Union Cabinet approves establishment of multi-state level seed societies

ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002ರ (ಎಮ್.ಎಸ್.ಸಿ.ಎಸ್.) ಅಡಿಯಲ್ಲಿ ರಾಷ್ಟ್ರಮಟ್ಟದ ಬಹು-ರಾಜ್ಯ ಸಹಕಾರಿ ಬೀಜ ಸೊಸೈಟಿಯನ್ನು ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ. 

Weather Updates| ಉತ್ತರ ಭಾರತದಲ್ಲಿ ತೀವ್ರ ಚಳಿ: ಕಾನ್ಪುರದಲ್ಲಿ 98 ಜನ ಸಾವು ! 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ (ಪಿ.ಎ.ಸಿ.ಎಸ್.) ಎಪೆಕ್ಸ್: ಪ್ರಾಥಮಿಕ ಸೊಸೈಟಿಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಒಕ್ಕೂಟಗಳು ಮತ್ತು ಬಹುರಾಜ್ಯ ಸಹಕಾರಿ ಸಂಘಗಳು ಸೇರಿದಂತೆ ಪ್ರಾಥಮಿಕದಿಂದ ರಾಷ್ಟ್ರಮಟ್ಟದ ಸಹಕಾರಿ ಸಂಘಗಳು ಅದರ ಸದಸ್ಯರಾಗಬಹುದು. ಈ ಎಲ್ಲಾ ಸಹಕಾರಿಗಳು ಅದರ ಉಪವಿಧಿಗಳ ಪ್ರಕಾರ ಸೊಸೈಟಿಯ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತಾರೆ.  

ಗುಣಮಟ್ಟದ ಬೀಜಗಳ ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ಬ್ರಾಂಡಿಂಗ್, ಲೇಬಲಿಂಗ್ ಪ್ಯಾಕೇಜಿಂಗ್, ಸಂಗ್ರಹಣೆ, ಮಾರುಕಟ್ಟೆ ಮತ್ತು ವಿತರಣೆಗೆ ಅತ್ಯುನ್ನತ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ವ್ಯೂಹಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ; ಮತ್ತು ಸ್ಥಳೀಯ ನೈಸರ್ಗಿಕ ಬೀಜಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.

ಇದು ಬೀಜ ಬದಲಿ ದರ (ಎಸ್.ಆರ್.ಆರ್.) ಮತ್ತು ತಳಿ ಬದಲಿ ದರವನ್ನು (ವಿ. ಆರ್.ಆರ್.) ಉತ್ತೇಜಿಸುತ್ತದೆ. ಇದು ಇಳುವರಿಯ ಅಂತರವನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಸಹಕಾರಿ ಸಂಘಗಳ ಅಂತರ್ಗತ ಬೆಳವಣಿಗೆಯ ಮಾದರಿಯ ಮೂಲಕ ಸಹಕಾರದಿಂದ ಸಮೃದ್ಧಿಯ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

pm kisan update| ಪಿ.ಎಂ ಕಿಸಾನ್‌ 13ನೇ ಕಂತಿಗೆ ಮೊದಲು ಈ ಅಪ್ಡೇಟ್‌ ಮಾಡಿ 

ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002ರ (ಎಮ್.ಎಸ್.ಸಿ.ಎಸ್.) ಅಡಿಯಲ್ಲಿ ರಾಷ್ಟ್ರಮಟ್ಟದ ಬಹು-ರಾಜ್ಯ ಬೀಜ ಸಹಕಾರಿ ಸಂಘವನ್ನು ಸ್ಥಾಪಿಸುವ ಮತ್ತು ಉತ್ತೇಜಿಸುವ ಐತಿಹಾಸಿಕ ನಿರ್ಧಾರಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ಬ್ರ್ಯಾಂಡಿಂಗ್, ಲೇಬಲ್, ಪ್ಯಾಕೇಜಿಂಗ್, ಸಂಗ್ರಹಣೆ, ಮಾರುಕಟ್ಟೆ ಮತ್ತು ಗುಣಮಟ್ಟದ ಬೀಜಗಳ ವಿತರಣೆ; ವ್ಯೂಹಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ; ಮತ್ತು ಸ್ಥಳೀಯ ನೈಸರ್ಗಿಕ ಬೀಜಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಸಂಬಂಧಿತ ಸಚಿವಾಲಯಗಳು, ವಿಶೇಷವಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್) ಮತ್ತು ರಾಷ್ಟ್ರೀಯ ಬೀಜ ನಿಗಮ (ಎನ್.ಎ.ಸ್. ಸಿ) ಗಳ ಬೆಂಬಲದೊಂದಿಗೆ ದೇಶಾದ್ಯಂತ ವಿವಿಧ ಸಹಕಾರ ಸಂಘಗಳ ಮೂಲಕ  ಸಂಪೂರ್ಣ ಸರ್ಕಾರಿ ವಿಧಾನವನ್ನು ಅನುಸರಿಸಿ ತಮ್ಮ ಯೋಜನೆಗಳು ಮತ್ತು ಏಜೆನ್ಸಿಗಳ ಮೂಲಕ ಅತ್ಯುನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

18 ವರ್ಷದವರೂ ಇನ್ಮುಂದೆ ಮದ್ಯ ಖರೀದಿಸಬಹುದು: ಹೊಸ ಮದ್ಯದಂಗಡಿಗೂ ಅಸ್ತು!

ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರ ಸಂಘಗಳು ದೇಶದಲ್ಲಿ ಗ್ರಾಮೀಣ ಆರ್ಥಿಕ ಪರಿವರ್ತನೆಯ ಕೀಲಿಕೈಯನ್ನು ಹೊಂದಿರುವುದರಿಂದ ಸಹಕಾರದಿಂದ ಸಮೃದ್ಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಕಾರ ಸಂಘಗಳ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಅವುಗಳನ್ನು ಯಶಸ್ವಿ ಮತ್ತು ರೋಮಾಂಚಕ ವ್ಯಾಪಾರ ಉದ್ಯಮಗಳಾಗಿ ಪರಿವರ್ತಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

 ಈ ಉದ್ದೇಶಿತ ಸಹಕಾರ ಸಂಘವು ಬೀಜ ಬದಲಿ ದರ (ಎಸ್.ಆರ್.ಆರ್.) ಮತ್ತು ತಳಿ ಬದಲಿ ದರವನ್ನು (ವಿ. ಆರ್.ಆರ್.) ಹೆಚ್ಚಿಸಲು, ಗುಣಮಟ್ಟದ ಬೀಜ ಬೇಸಾಯ ಮತ್ತು ಬೀಜ ವೈವಿಧ್ಯ ಪ್ರಯೋಗಗಳಲ್ಲಿ ರೈತರ ಪಾತ್ರವನ್ನು ಖಚಿತಪಡಿಸಿಕೊಳ್ಳಲು, ಒಂದೇ ಬ್ರಾಂಡ್ ನ ಅಡಿಯಲ್ಲಿ ಪ್ರಮಾಣೀಕೃತ ಬೀಜಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ರೈತರ ಪಾತ್ರವನ್ನು ಖಾತರಿಪಡಿಸಿಕೊಳ್ಳಲು, ಎಲ್ಲಾ ಹಂತದ ಸಹಕಾರಿಗಳ ಜಾಲವನ್ನು ಬಳಸಿಕೊಳ್ಳುವ ಮೂಲಕ ಸಹಾಯ ಮಾಡುತ್ತದೆ. ಉತ್ತಮ ಗುಣಮಟ್ಟದ ಬೀಜಗಳ ಲಭ್ಯತೆಯು ಆಹಾರ ಭದ್ರತೆಯನ್ನು ಬಲಪಡಿಸುವಲ್ಲಿ ಮತ್ತು ರೈತರ ಆದಾಯವನ್ನು ಹೆಚ್ಚಿಸುವಲ್ಲಿ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ತಮ ಗುಣಮಟ್ಟದ ಬೀಜಗಳ ಉತ್ಪಾದನೆಯಿಂದ ಉತ್ತಮ ಬೆಲೆಗಳ ಲಭಿಸುವಿಕೆ, ಅಧಿಕ ಇಳುವರಿ ನೀಡುವ ತಳಿಯ (ಎಚ್.ವೈ.ವಿ) ಬೀಜಗಳ ಬಳಕೆಯಿಂದ ಬೆಳೆಗಳ ಹೆಚ್ಚಿನ ಉತ್ಪಾದನೆ ಮತ್ತು ಸಹಕಾರ ಸಂಘದಿಂದ ಉತ್ಪತ್ತಿಯಾಗುವ ಹೆಚ್ಚುವರಿಯಿಂದ ವಿತರಿಸಲಾಗುವ ಲಾಭಾಂಶದ ಮೂಲಕ ಸದಸ್ಯರಿಗೆ ಲಾಭವಾಗಲಿದೆ.

ಬೀಜ ಸಹಕಾರ ಸಂಘಗಳ ಗುಣಮಟ್ಟದ ಬೀಜ ಬೇಸಾಯ ಮತ್ತು ಬೀಜ ತಳಿ ಪ್ರಯೋಗಗಳು, ಒಂದೇ ಬ್ರಾಂಡ್ ಹೆಸರಿನಲ್ಲಿ ಪ್ರಮಾಣೀಕೃತ ಬೀಜಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ರೈತರ ಪಾತ್ರವನ್ನು ಖಚಿತಪಡಿಸಿಕೊಳ್ಳುವ ಮೂಲಕ ಬೀಜ ಬದಲಿ ದರ (ಎಸ್.ಆರ್.ಆರ್.) ಮತ್ತು ತಳಿ ಬದಲಿ ದರವನ್ನು (ವಿ. ಆರ್.ಆರ್.) ಹೆಚ್ಚಿಸಲು ಎಲ್ಲಾ ರೀತಿಯ ಸಹಕಾರಿ ರಚನೆಗಳು ಮತ್ತು ಇತರ ಎಲ್ಲಾ ವಿಧಾನಗಳನ್ನು ಅಳವಡಿಸಿಕೊಳ್ಳಲಿದೆ.

ಈ ರಾಷ್ಟ್ರಮಟ್ಟದ ಬೀಜ ಸಹಕಾರ ಸಂಘಗಳ ಮೂಲಕ ಗುಣಮಟ್ಟದ ಬೀಜಗಳ ಉತ್ಪಾದನೆಯು ದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ, ಆ ಮೂಲಕ ಕೃಷಿ ಮತ್ತು ಸಹಕಾರಿ ವಲಯದಲ್ಲಿ ಹೆಚ್ಚಿನ ಉದ್ಯೋಗಕ್ಕೆ ನಿರ್ಮಾಣಕ್ಕೆ ಕಾರಣವಾಗುತ್ತದೆ; ಆಮದು ಮಾಡಿದ ಬೀಜಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಿ, "ಮೇಕ್ ಇನ್ ಇಂಡಿಯಾವನ್ನು" ಉತ್ತೇಜಿಸಿ ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡುವತ್ತ ಹೆಜ್ಜೆ ಹಾಕಲಿದೆ.

ಆಕಾಶವಾಣಿಯ ಎಫ್‌ಎಂ ಪ್ರಚಾರಕ್ಕೆ ಕೇಂದ್ರ ಸರ್ಕಾರದಿಂದ ಕ್ರಮ