News

ಫೆಬ್ರುವರಿ 1ರಂದು ಕೇಂದ್ರ ಮುಂಗಡಪತ್ರ ಮಂಡನೆ

19 January, 2021 6:31 AM IST By:

ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮುಂಗಡಪತ್ರ ಮಂಡನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ, ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಗಲಿದೆ, ಮುಖ್ಯವಾಗಿ ನಮ್ಮ ಕೃಷಿ ಕ್ಷೇತ್ರಕ್ಕೆ ರೈತರು ಕೃಷಿ ಮಸೂದೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದು ಅವರಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಕಾದು ನೋಡೋಣ.

ಜನವರಿ 29ರಿಂದ ಸಂಸತ್ತಿನ ಮುಂಗಡಪತ್ರ ಅಧಿವೇಶನ ಪ್ರಾರಂಭವಾಗಲಿದೆ, ಹಾಗೂ ನಮ್ಮ ದೇಶದ ರಾಷ್ಟ್ರಪತಿಗಳಾದ ಅಂತಹ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರುವರಿ 1 ಬೆಳಗ್ಗೆ 11 ಗಂಟೆಗೆ ನಮ್ಮ ದೇಶದ ಹಣಕಾಸು ಸಚಿವರಾದಂತಹ ನಿರ್ಮಲಾ ಸೀತಾರಾಮನ್ ರವರು ಮುಂಗಡಪತ್ರ ಮಂಡಿಸಲಿದ್ದಾರೆ.

ಫೆಬ್ರುವರಿ ಒಂದರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಅಧಿವೇಶನ ನಡೆಯಲಿದೆ,ಇದು ಎರಡನೇ ಹಂತದ ಅಧಿವೇಶನ ಎಪ್ರಿಲ್ ಎಂಟರಿಂದ ಮಾರ್ಚ್ 8ರವರೆಗೆ ನಡೆಯಲಿದೆ. ಕೋವಿಡ್ ಕಾರಣಗಳಿಂದಾಗಿ ಎರಡು ಅಧಿವೇಶನಗಳು ಒಂದೇ ಸಮಯದಲ್ಲಿ ನಡೆಸಲು ತೊಂದರೆಯಾಗುವ ಕಾರಣದಿಂದ ರಾಜ್ಯಸಭೆ ಹಾಗೂ ಲೋಕಸಭೆ ಅಧಿವೇಶನವನ್ನು ಬೇರೆಬೇರೆ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ರಾಜ್ಯಸಭೆ ಅಧಿವೇಶನವು ಬೆಳಗ್ಗೆ ನಡೆದರೆ ಲೋಕಸಭೆ ಅಧಿವೇಶನವು ಸಂಜೆ 4 ರಿಂದ ರಾತ್ರಿ 9ರವರೆಗೆ ನಡೆಯಲಿದೆ.
ಇದೇ ಮೊದಲ ಬಾರಿ ಪೇಪರ್ಲೆಸ್ ಅಂದರೆ ಎಲೆಕ್ಟ್ರಾನಿಕ್ ರೂಪದಲ್ಲಿ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.