News

ಕೇಂದ್ರ ಬಜೆಟ್ ಜನಸಾಮಾನ್ಯರಿಗೆ ಯಾವುದು ಅಗ್ಗ. ಯಾವುದು ದುಬಾರಿ ಗೊತ್ತಾ...ಇಲ್ಲಿದೆ ಮಾಹಿತಿ

01 February, 2021 6:39 PM IST By:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ (ಜ.1) ಲೋಕಸಭೆಯಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಇಡೀ ಜಗತ್ತನ್ನೇ ಕಾಡಿದ ಕೊರೊನಾವೈರಸ್ ಸಾಂಕ್ರಾಮಿಕ ರೋಗಗಳ ನಡುವೆ ಈ ಬಜೆಟ್ ಮಂಡನೆಯಾಗುತ್ತಿರುವುದರಿಂದ ಈ ಬಜೆಟ್ ಹಲವು ರೀತಿಯಲ್ಲಿ ವಿಶೇಷವಾಗಿತ್ತು.

ಕೊರೋನಾದಿಂದಾಗಿ ಕಂಗೆಟ್ಟಿರುವ ಜನರಿಗೆ ಹೊರೆಯಾಗದಂತೆ ಬಜೆಟ್ ಮಂಡನೆಯಾಗಬೇಕೆಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಯಾರಿಗೂ ಹೊರೆಯಾಗದಂತೆ ಮತ್ತು ಸಂತೋಷಪಡುವಂತಹ ಉಡುಗೋರೆಯೂ ಇಲ್ಲದಂತೆ ಕೇಂದ್ರ ಹಣಕಾಸಿನ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.

ಸ್ವದೇಶಿ ಉತ್ಪನ್ನಗಳಿಗೆ ಒತ್ತು ಕೊಡುವುದಕ್ಕಾಗಿ ಸ್ವದೇಶಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದೆ. ಇನ್ನೂ ಮುಂದೆ ಕಸ್ಟಮ್ಸ್ ಶುಲ್ಕ ಕಡಿತದಿಂದ ಚಿನ್ನ, ಬೆಳ್ಳಿ ಅಗ್ಗವಾಗಲಿದೆ. ವಿದೇಶಿ ಮೊಬೈಲ್, ಚಾರ್ಜರ್, ವಿದೇಶಿ ಟೀವಿ, ಪ್ರಿಡ್ಜ್, ದುಬಾರಿಯಾಗಲಿದೆ

ಯಾವ್ಯಾವ ಉಪಕರಣಗಳು ಅಗ್ಗವಾಗಲಿವೆ

ಕಬ್ಬಿಣ, ತಾಮ್ರ, ಸ್ಟೀಲ್, ಉಕ್ಕು, ನೈಲಾನ್ ಬಟ್ಟೆ, ಶೂ, ಇನ್ಸೂರೆನ್ಸ್, ಚಿನ್ನ, ಬೆಳ್ಳಿ

ಯಾವ್ಯಾವ ಉಪಕರಣಗಳು ದುಬಾರಿಯಾಗಲಿವೆ

ಪೆಟ್ರೋಲ್, ಡೀಸೆಲ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ರತ್ನ, ಬಿಡಿ ಭಾಗಗಳು, ಮೊಬೈಲ್ ಫೋನ್ ಗಳು, ಚಾರ್ಜರ್ಸ್, ವಿದೇಶದಿಂದ ಬರುವ ವಾಹನ ಬಿಡಿಭಾಗಗಳು, ವಿದೇಶದಿಂದ ಆಮದು ಆಗುವ ವಸ್ತುಗಳು, ಮದ್ಯ, ಪ್ಲಾಸ್ಟಿಕ್ ಸಾಮಾನುಗಳು