News

ಉಜ್ವಲ ಉಚಿತ ಯೋಜನೆ: 100 ಜಿಲ್ಲೆಗಳಲ್ಲಿ ಪೈಪ್ ಲೈನ್ ಮೂಲಕ ಅನಿಲ ಪೂರೈಕೆ

02 February, 2021 9:53 AM IST By:
Ujjwala scheme

ಉಜ್ವಲ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಬಡವರಿಗೆ ವಿತರಿಸಲಾಗುತ್ತಿರುವ ಉಜ್ವಲ ಉಚಿತ ಅಡುಗೆ ಅನಿಲ ಯೋಜನೆಯನ್ನು 1  ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿಯೂ ಸಹಿ ಸಹ ಬಳಕೆದಾರರಿಗೆ ತೊಂದರೆಯಾಗಬಾರದೆಂದು ಅಡುಗೆ ಅನಿಲವನ್ನು ಯಶಸ್ವಿಯಾಗಿ ಸರಬರಾಜು ಮಾಡಲಾಗಿದೆ. ದೇಶಾದ್ಯಂತ ಈಗಾಗಲೇ ಉಜ್ವಲ ಉಚಿತ ಯೋಜನೆಯಡಿಯಲ್ಲಿ 8 ಕೋಟಿ ಫಲಾನುಭವಿಗಳಿದ್ದಾರೆ. 2021ನೇ ಸಾಲಿನಲ್ಲಿ 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನಿರಂತರ ಅನಿಲ ಪೂರೈಕೆ

ನೈಸರ್ಗಿಕ ಅನಿಲ ವಿತರಣೆಗಾಗಿ ಸ್ವತಂತ್ರ ಅನಿಲ ಸಾಗಣೆ ವ್ಯವಸ್ಥೆ ಏಜೆನ್ಸಿಯನ್ನು ಸ್ಥಾಪಿಸಿ ಎಲ್ಲರಿಗೂ ಮುಕ್ತವಾಗಿ ನೈಸರ್ಗಿಕ ಅನಿಲ ಸಿಗುವಂತೆ ಮಾಡಲಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ನಗರ ಅನಿಲ ಪೂರೈಕೆ ಜಾಲಕ್ಕೆ 100 ಕ್ಕೂ ಹೆಚ್ಚು ಜಿಲ್ಲೆಗಳ ಸೇರ್ಪಡೆಯಾಗಲಿದೆ. ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಸರಬರಾಜು ಮಾಡಲಾಗವುದು’ ಎಂದು ಹೇಳಿದರು.