ಕೊರೋನಾ ಲಾಕ್ಡೌನ್ ವೇಳೆ ಬಡವರನ್ನು ಆರ್ಥಿಕವಾಗಿ ಸಹಾಯ ಮಾಡುವುದಕ್ಕಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ಕೇಂದ್ರ ಸರ್ಕಾರ ಇನ್ನಷ್ಟು ವಿಸ್ತರಣೆ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಚಿತ ಮೂರು ಅಡುಗೆ ಅನಿಲ ಸಿಲೆಂಡರ್‌ಗಳ (ಎಲ್‌ಪಿಜಿ) ಕೊಡುಗೆಯನ್ನು ಸೆಪ್ಟೆಂಬರ್ ಕೊನೆಯವರೆಗೂ ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿದೆ.
ಉಜ್ವಲ ಫಲಾನುಭವಿಗಳಿಗೆ 14.2 ಕೆ.ಜಿಯ ಮೂರು ಎಲ್‌ಪಿಜಿ ಸಿಲೆಂಡರ್‌ಗಳನ್ನು ಉಚಿತವಾಗಿ ಸೆಪ್ಟೆಂಬರ್ ವರೆಗೆ ನೀಡುವುದಾಗಿ ಸರ್ಕಾರವು ಮಾರ್ಚ್‌ನಲ್ಲಿ ಪ್ರಕಟಿಸಿತ್ತು. ಯೋಜನೆಯ ಮುಖ್ಯ ಫಲಾನುಭವಿಗಳಾದ ಗ್ರಾಮೀಣ ಪ್ರದೇಶದ ಹೆಚ್ಚಿನ ಬಡ ಕುಟುಂಬಗಳು ತಿಂಗಳಿಗೆ ಒಂದು ಸಿಲೆಡರ್ ಬಳಸುತ್ತಿಲ್ಲ. ಹಾಗಾಗಿ ಸರ್ಕಾರದ ಕೊಡುಗೆಯನ್ನು ಪೂರ್ಣವಾಗಿ ಬಳಸಿಕೊಳ್ಳಲು ಈ ಕುಟುಂಬಗಳಿಗೆ ಸಾಧ್ಯವಾಗಿಲ್ಲ. ಮೂರು ಸಿಲೆಂಡರ್ ಪಡೆದುಕೊಂಡಿಲ್ಲದ ಕುಟುಂಬಗಳು ಅವುಗಳನ್ನು ಸೆಪ್ಟೆಂಬರ್ ಕೊನೆಯವರೆಗೆ ಪಡೆದುಕೊಳ್ಳಲು ಈಗ ಅವಕಾಶ ನೀಡಲಾಗಿದೆ.