News

Aadhaar Card Update: ಆಧಾರ್‌ ಕಾರ್ಡ್‌ ನವೀಕರಣದ ಕುರಿತು ಕೇಂದ್ರ ಸರ್ಕಾರದ ಮಹತ್ವದ ಮಾಹಿತಿ! ನೀವಿದನ್ನು ತಿಳಿದಿರಲೆಬೇಕು

11 November, 2022 2:13 PM IST By: Kalmesh T
UIDAI: Central Government Important Information on Aadhaar Card Update

ಆಧಾರ್‌ ಕಾರ್ಡ್‌ ನವೀಕರಣದ ಕುರಿತಾಗಿ ಕೇಂದ್ರ ಸರ್ಕಾರದಿಂದ ಮಹತ್ವದ ಸುದ್ದಿಯೊಂದು ಬಂದಿದೆ. ಈ ನವೀಕರಣವನ್ನು ಎಲ್ಲರೂ ತಪ್ಪದೇ ಮಾಡಿಸುವುದು ಉತ್ತಮ ಎನ್ನುತ್ತದೆ ಕೇಂದ್ರ ಸರ್ಕಾರ.

Pensioners Welfare: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ರಾಷ್ಟ್ರವ್ಯಾಪಿ ಅಭಿಯಾನ ಆರಂಭ!

ಕಳೆದ ದಶಕದಲ್ಲಿ ಆಧಾರ್ ಸಂಖ್ಯೆಯು ಭಾರತದಲ್ಲಿನ ನಿವಾಸಿಗಳ ಗುರುತಿನ ಪುರಾವೆಯಾಗಿ ಹೊರಹೊಮ್ಮಿದೆ. ಹಲವಾರು ಸರ್ಕಾರಿ ಯೋಜನೆಗಳು ಮತ್ತು ಸೇವೆಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ.

10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದ ನಿವಾಸಿಗಳು ಮತ್ತು ಈ ವರ್ಷಗಳಲ್ಲಿ ಎಂದಿಗೂ ನವೀಕರಿಸದಿರುವವರು, ಅಂತಹ ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ದಾಖಲೆಗಳನ್ನು ನವೀಕರಿಸಲು ಪ್ರೋತ್ಸಾಹಿಸಲಾಗುತ್ತದೆ.

Breaking: ಬರೋಬ್ಬರಿ 10 ಲಕ್ಷ ಜನರ ಪಡಿತರ ಚೀಟಿ ರದ್ದು ಮಾಡಿದ ಸರ್ಕಾರ! ಯಾಕೆ ಗೊತ್ತೆ?

ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಗುರುವಾರ ಕೆಲವು ಸುದ್ದಿ ವರದಿಗಳು ತಪ್ಪಾಗಿ ವರದಿ ಮಾಡಿವೆ. ಈ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಿರ್ಲಕ್ಷಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ಹಿಂದೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಇದು ನಿವಾಸಿಗಳಿಗೆ ತಮ್ಮ ದಾಖಲೆಗಳನ್ನು ನವೀಕರಿಸಲು ಒತ್ತಾಯಿಸುತ್ತಿದೆ ಮತ್ತು ಪ್ರೋತ್ಸಾಹಿಸುತ್ತಿದೆ.

Dearness Allowance: ಡಿಎ ಬಾಕಿ ಕುರಿತಂತೆ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಅಂದಾಜು ₹12,500 ಕೋಟಿ ಮೀಸಲು ಸಾಧ್ಯತೆ!

ಇತ್ತೀಚೆಗೆ ಹೊರಡಿಸಲಾದ ಗೆಜೆಟ್ ಅಧಿಸೂಚನೆಯು ನಿವಾಸಿಗಳು ಪ್ರತಿ 10 ವರ್ಷಗಳಿಗೊಮ್ಮೆ "ಮಾಡಬಹುದು" ಎಂದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.

ಆಧಾರ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಅಪ್‌ಡೇಟ್ ಮಾಡುವುದರಿಂದ ಜೀವನ ನಿರ್ವಹಣೆಗೆ, ಉತ್ತಮ ಸೇವೆಯ ವಿತರಣೆಗೆ ಸಹಾಯ ಮಾಡುತ್ತದೆ ಮತ್ತು ನಿಖರವಾದ ದೃಢೀಕರಣವನ್ನು ಸಕ್ರಿಯಗೊಳಿಸುತ್ತದೆ.

UIDAI ಯಾವಾಗಲೂ ತಮ್ಮ ದಾಖಲೆಗಳನ್ನು ನವೀಕರಿಸಲು ನಿವಾಸಿಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಗೆಜೆಟ್ ಅಧಿಸೂಚನೆಯು ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಸರ್ಕಾರದ ಪ್ರಕಟನೆಯಲ್ಲಿ ತಿಳಿಸಿಲಾಗಿದೆ.

ರೈತರ ಕಬ್ಬು ಬಾಕಿ ಹಣ ಶೀಘ್ರ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಸೂಚನೆ!

ಏನಿದು ಆಧಾರ ಕಾರ್ಡ್‌? What is aadhaar

ಭಾರತ ಸರ್ಕಾರದ ಪರವಾಗಿ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ನೀಡುವ ೧೨ ಅಂಶಗಳ ಒಂದು ವ್ಯಯಕ್ತಿಕ ಗುರುತಿನ ಸಂಖ್ಯೆಯಾಗಿದೆ.

ಇದನ್ನು ಭಾರತದ ಯಾವುದೇ ಸ್ಥಳದಲ್ಲಿ ವ್ಯಕ್ತಿಯ ಗುರುತು ಮತ್ತು ವಿಳಾಸದ ಸಾಕ್ಷಿಯಾಗಿ ಬಳಸಬಹುದಾದ ಯಾವುದೇ, ವಯಸ್ಸು, ಲಿಂಗದ ಭಾರತೀಯರು ಪರಿಶೀಲನಾ ಪ್ರಕ್ರಿಯೆ ಒಳಪಟ್ಟಂತ ದಾಖಲು ಮಾಡಿಕೊಳ್ಳಬಹುದು.

Diesel subsidy: ಅರ್ಜಿ ಸಲ್ಲಿಸಬೇಕಿಲ್ಲ, ಅಲೆದಾಡಬೇಕಿಲ್ಲ ನೇರವಾಗಿ ರೈತರ ಖಾತೆಗೆ ಡೀಸೆಲ್‌ ಸಬ್ಸಿಡಿ- ಬಿ.ಸಿ. ಪಾಟೀಲ್‌

ಪ್ರತಿಯೊಬ್ಬರು ಒಮ್ಮೆ ಮಾತ್ರ ದಾಖಲು ಮಾಡಿಕೊಳ್ಳಬಹುದಾಗಿದ್ದು ಇದು ಉಚಿತವಾಗಿರುತ್ತದೆ. ಪ್ರತಿ ಆಧಾರ್‌ ಸಂಖ್ಯೆ ಆಯಾ ವ್ಯಕ್ತಿ ವಿಶಿಷ್ಟವಾಗಿದ್ದು, ಜೀವನ ಪರ್ಯಂತ ಪರಿಗಣಿತವಾಗಿರುತ್ತದೆ.

ಆಧಾರ್ ಸಂಖ್ಯೆಯನ್ನು ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್, ಮೊಬೈಲ್ ದೂರವಾಣಿ ಸಂಪರ್ಕ ಹಾಗೂ ಇತರ ಸರ್ಕಾರಿ/ಸರ್ಕಾರೇತರ ಸೇವೆಗಳಿಗಾಗಿ ಬಳಸಿಕೊಳ್ಳಬಹುದು.