News

Rain ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಮಳೆ: ಐಎಂಡಿ

03 January, 2024 4:41 PM IST By: Hitesh
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಹವಾಮಾನ ಇಲಾಖೆ ಮುನ್ಸೂಚನೆ

ರೈತರಿಗೆ ದಿನದ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ನಿತ್ಯ ಪ್ರಮುಖ ಸುದ್ದಿಗಳನ್ನು ನೀಡುತ್ತಿದೆ. 

ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ, ಶ್ರೀಗಂಧದ ಮರಗಳನ್ನು ಬೆಳೆದು ಇನ್ಮುಂದೆ ನೀವು ಸರ್ಕಾರಕ್ಕೆ ಕೊಡಬಹುದು ಅಂತ ಸಿಎಂ ಹೇಳಿದ್ದಾರೆ.

ರೈತರ ಬರ ಪರಿಹಾರಕ್ಕೆ ಆಧಾರ್‌ ಲಿಂಕ್‌ ಮಾಡಿಸ್ಬೇಕು, ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಆಗ್ತಿದೆ. ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದೆ.

ಈ ಎಲ್ಲ ಸುದ್ದಿಗಳನ್ನ ನೋಡೋಣ ಮೊದಲಿಗೆ ಮುಖ್ಯಾಂಶ.     

  1. ಶ್ರೀಗಂಧದ ಮರಗಳ ಖರೀದಿಗೆ ಮುಂದಾದ ರಾಜ್ಯ ಸರ್ಕಾರ
  2. ರೈತರು ಬರ ಪರಿಹಾರ ಹಣಕ್ಕೆ ಆಧಾರ್‌ ಲಿಂಕ್‌ ಮಾಡಬೇಕು: ಸಿ.ಎಂ
  3. ಉತ್ತರ ಭಾರತದ ವಿವಿಧ ಭಾಗದಲ್ಲಿ ಭಾರೀ ಚಳಿ
  4. ಸಾವಯವ ಮತ್ತು ಸಿರಿಧಾನ್ಯ ಉತ್ತೇಜನಕ್ಕೆ ಮುಂದಾದ ಸರ್ಕಾರ
  5. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ

ಈ ಎಲ್ಲ ಸುದ್ದಿಗಳ ಚುಟುಕು ವಿವರ ಇಲ್ಲಿದೆ. ಸುದ್ದಿಗಳ ವಿವರ ಈ ರೀತಿ ಇದೆ. 

1. ಶ್ರೀಗಂಧದ ಮರಗಳನ್ನು ಬೆಳೆಯುವ ರೈತರಿಗೆ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ಸಿಹಿಸುದ್ದಿಯನ್ನು ನೀಡಿದೆ.

ಈಗಾಗಲೇ ರಾಜ್ಯದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಯುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ಪೂರಕ ವಾತಾವರಣ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು.

ಇದೀಗ ಶ್ರೀಗಂಧ ಬೆಳೆಯುವ ಬೆಳೆಗಾರರು ತಮ್ಮ ಜಮೀನು ಅಥವಾ ನಿವೇಶನದಲ್ಲಿ ಸರಾಸರಿ 20 ವರ್ಷ ಮೇಲ್ಪಟ್ಟ ಶ್ರೀಗಂಧದ ಮರಗಳಿದ್ದಲ್ಲಿ

ಸರ್ಕಾರದ ಅರಣ್ಯ ಇಲಾಖೆ ಅಥವಾ ಕರ್ನಾಟಕ ಸೋಪ್ಸ್ ಎಂಡ್ ಡಿಟರ್ಜೆಂಟ್ ಲಿ. ದರದಲ್ಲಿ ಮಾರಾಟ ಮಾಡಬಹುದು.

ಇದಕ್ಕಾಗಿ ರೈತರು ಒಪ್ಪಂದವನ್ನೂ ಮಾಡಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
---------------------------

2. ರೈತರಿಗೆ ಬರ ಪರಿಹಾರ ನೀಡಲು ಸರ್ಕಾರ ಸಿದ್ಧತೆ ಪ್ರಾರಂಭಿಸಿದೆ. ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಅವರು, ರಾಜ್ಯದಲ್ಲಿ ಬರ ಪರಿಹಾರದ ಹಣ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿ

ನೀಡಲಾಗುವುದು ಎಂದಿದ್ದಾರೆ. ರೈತರು ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರ ಖಾತೆಗೆ ಬೀಳಲಿದೆ.

ಆಧಾರ್ ಲಿಂಕ್ ಮಾಡದ ರೈತರು ತಕ್ಷಣ ಆಧಾರ್‌  ಲಿಂಕ್ ಮಾಡಿಸಬೇಕು ಎಂದು ಹೇಳಿದ್ದಾರೆ. 

3. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಚಳಿ ಪ್ರಮಾಣ ತೀವ್ರವಾಗಿ ಹೆಚ್ಚಳವಾಗುತ್ತಿದೆ.

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಮಧ್ಯ ಭಾಗಗಳಲ್ಲಿ ಚಳಿ ಹೆಚ್ಚಳವಾಗುಲಿದ್ದು, ದಟ್ಟವಾದ ಮಂಜು ಆವರಿಸಿದೆ ಎಂದು

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳವಾರ ಸಂಜೆ ಉತ್ತರ ಭಾರತದ ಹಲವು ಭಾಗದಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಗೋಚರತೆ ಸ್ಪಷ್ಟವಾಗಿರಲಿಲ್ಲ.

ಉತ್ತರ ಪ್ರದೇಶದ ಬರೇಲಿಯಲ್ಲಿ ಅತಿ ಕಡಿಮೆ ಗೋಚರತೆ ಕಾಣಿಸಿದ್ದು ವರದಿ ಆಗಿದೆ.

ಇಲ್ಲಿ ಶೇಕಡ 25ರಷ್ಟು ಗೋಚರತೆ ದಾಖಲಾಗಿತ್ತು. ಇನ್ನು ಉತ್ತರ ಭಾರತದ ವಿವಿಧೆಡೆ ಹಾಗೂ ಈಶಾನ್ಯ ಭಾರತದ ವಿವಿಧ ಭಾಗದಲ್ಲಿ

ಸಾಮಾನ್ಯಕ್ಕಿಂತ ಕಡಿಮೆ ಚಳಿ ದಾಖಲಾಗಿರುವುದು ವರದಿ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.   
---------------------------
4. ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಬೇಡಿಕೆ ಮತ್ತು ಬಳಕೆ ಹೆಚ್ಚಿಸುವ ಉದ್ದೇಶವಿದೆ.

ಇದರಿಂದ ಬೆಳೆಗಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡುವುದು ಸಿರಿಧಾನ್ಯ ರಫ್ತಿನ ಉದ್ದೇಶ ಎಂದು

ಕೃಷಿ ಸಚಿವ ಎನ್.ಚಲವರಾಯಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಸಾವಯವ ಕೃಷಿ ಪದ್ಧತಿಗೆ 2 ದಶಕಗಳಿಂದ

ಉತ್ತೇಜನ ನೀಡುತ್ತಿದೆ. ಸಾವಯವ ಮತ್ತು ಸಿರಿಧಾನ್ಯಗಳನ್ನು ಜನಪ್ರಿಯ ಮಾಡುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದಿದ್ದಾರೆ.  

5. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ಹಾಗೂ ಗುರುವಾರ ಕರಾವಳಿ ಹಾಗೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ಮಳೆಯಾಗಲಿದೆ.

ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನು ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು,

ಬೆಳಗಿನ ಜಾವ ದಟ್ಟ ಮಂಜು ಕವಿದಿರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
---------------------
6. ಜಪಾನ್‌ನ ಹೃದಯಭಾಗದಲ್ಲಿ ಸಂಭವಿಸಿದ ಅಪಘಾತದಿಂದ ಇಲ್ಲಿಯ ವರೆಗೆ 48ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ವರದಿ ಆಗಿದೆ.

ಜಪಾನ್‌ನ ಕರಾವಳಿ ಈಶಕಾವ  ಪ್ರಾಂತ್ಯದಲ್ಲಿ ಕಂಪನ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.6  ದಾಖಲಾಗಿದೆ.

ಇನ್ನು ನಿಗಾತ ಹಾಗೂ ತೊಯಾಮಾದಲ್ಲಿ ಸುನಾಮಿ ಮುನ್ನೆಚ್ಚರಿಕೆ ಇಲ್ಲ.

ಪರಿಹಾರ ಕಾರ್ಯಗಳನ್ನು ಯುದ್ಧೋಪಾದಯಲ್ಲಿ ಕೈಗೊಳ್ಳಲಾಗಿದೆ ಎಂದು ಜಪನ್‌ನ  ಪ್ರಧಾನಮಂತ್ರಿ ಫಿಮಿಯೊ ಕಿಶಿದಾ ತಿಳಿಸಿದ್ದಾರೆ.
---------------------  

7. ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ಕನಸಿಗೆ ಸರ್ಕಾರ ಈಗ ಶಕ್ತಿ ತುಂಬಲು ಮುಂದಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನೀವು ಸಹ ಇದರ ಫಲಾನುಭವಿ ಆಗುವ ಅವಕಾಶ ಇದೆ.

ಬೆಂಗಳೂರು ನಗರದಾದ್ಯಂತ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ

ಬಡಾವಣೆಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ನೀವೂ ಸಹ ನೋಂದಣಿ ಮಾಡಿಕೊಂಡು

ಸ್ವಂತ ಸೂರು ಪಡೆಯಿರಿ ಎಂದಿದ್ದಾರೆ ಸಿ.ಎಂ ಸಿದ್ದರಾಮಯ್ಯ ಅವರು.