News

Rain ರಾಜ್ಯದಲ್ಲಿ ಎರಡು ದಿನ ಮಳೆ: ಐಎಂಡಿ ವರದಿ

02 January, 2024 5:11 PM IST By: Hitesh
ರಾಜ್ಯದ ವಿವಿಧ ಭಾಗದಲ್ಲಿ ಮಳೆ

ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ. ಇದೀಗ ನೀವು ಪ್ರಮುಖ ಕೃಷಿ ಸುದ್ದಿಗಳನ್ನು ಕೃಷಿ ಜಾಗರಣ ಕನ್ನಡ ಯೂಟ್ಯೂಬ್‌ನಲ್ಲಿ

ನೋಡಬಹುದಾಗಿದೆ. ಇನ್ನು ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಜಾಬ್‌ಗುಡ್‌ನ್ಯೂಸ್‌ವೊಂದನ್ನು ಸರ್ಕಾರ ನೀಡಿದೆ.

ಇನ್ನು ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಸದೃಢತೆ, ಬರದಿಂದ ಕೋಟ್ಯಾಂತರ ನಷ್ಟ ಆಗಿದೆ.

ಈ ಎಲ್ಲ ಸುದ್ದಿಗಳ ವಿವರ ನೋಡೋಣ ಮೊದಲಿಗೆ ಮುಖ್ಯಾಂಶ.

ದೇಶದಲ್ಲಿ ಗ್ಯಾರಂಟಿ ಯೋಜನೆ ಜಾರಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.

ಇದೀಗ ಗ್ಯಾರಂಟಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಸರ್ಕಾರ ಹೇಳಿದೆ.

1. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಶಕ್ತಿ
2. ನಿರುದ್ಯೋಗಿಗಳಿಗೆ ಸರ್ಕಾರದಿಂದ ಜಾಬ್‌ ಗುಡ್‌ನ್ಯೂಸ್‌!
3. ಜನವರಿ 5ರಿಂದ ಸಿರಿಧಾನ್ಯ ಮೇಳ ಆಯೋಜನೆ
4. ದಕ್ಷಿಣ ಕರ್ನಾಟಕದಲ್ಲಿ ಮಳೆ ಸಾಧ್ಯತೆ
5. ಕರ್ನಾಟಕದಲ್ಲಿ ಬರದಿಂದ ಕೋಟ್ಯಾಂತರ ರೂಪಾಯಿ ನಷ್ಟ
ಸುದ್ದಿಗಳ ವಿವರ ಈ ರೀತಿ ಇದೆ

1. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಜನ ಅಭಿವೃದ್ಧಿ ಮತ್ತು ಸದೃಢತೆ ಸಾಧಿಸುತ್ತಿದ್ದಾರೆ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಐದು ಪ್ರಮುಖ ಗ್ಯಾರಂಟಿ ಜಾರಿ ಮಾಡಿದೆ.

ಈ ಯೋಜನೆಗಳಿಂದಾಗಿ ರಾಜ್ಯದಲ್ಲಿ ಬರದ ತೀವ್ರತೆ ಕಡಿಮೆಯಾಗಿದೆ.

ಬಡವರ ಕುಟುಂಬಕ್ಕೆ ಈಗ ಹಣ ದೊರೆಯುತ್ತಿದ್ದು, ಸಾರ್ವತ್ರಿಕ ಮೂಲ ಆದಾಯಕ್ಕೆ ಇದು ಪುಷ್ಠಿ ನೀಡಿದೆ.

ಈ ಮೂಲಕ ಪರೋಕ್ಷವಾಗಿ ಆರ್ಥಿಕ ಚಟುವಟಿಕೆ ಹೆಚ್ಚಳವಾಗಿದೆ ಎಂದಿದ್ದಾರೆ. 
------------------------- 

2. ರಾಜ್ಯದ ನಿರುದ್ಯೋಗಿಗಳಿಗೆ ಸರ್ಕಾರವು ಜಾಬ್‌ ಗುಡ್‌ನ್ಯೂಸ್‌ ನೀಡಿದೆ.

ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲಸ ಹುಡುಕುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ.

ಆದರೆ, ಇದೇ ಸಂದರ್ಭದಲ್ಲಿ ಕೆಲಸ ಸಿಗದೆ ಜನ ಪರದಾಡುವಂತಾಗಿದೆ.

ಇದೀಗ ರಾಜ್ಯ ಸರ್ಕಾರವು ಕೆಲಸ ಹುಡುಕುವವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಉದ್ಯೋಗ ಮೇಳಕ್ಕೆ ಸಚಿವರ ಸಮಿತಿಯನ್ನೂ ಸಹ ರಚಿಸಲಾಗಿದೆ.

ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸುವ ಸಂಬಂಧ ಈಗಾಗಲೇ ಸಚಿವರಾದ ಎಂ.ಬಿ.ಪಾಟೀಲ,

ಪ್ರಿಯಾಂಕ್‌ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಡಾ. ಎಂ.ಸಿ. ಸುಧಾಕರ್‌, ಬಿ. ನಾಗೇಂದ್ರ,

ಸಂತೋಷ್‌ ಲಾಡ್‌ ಹಾಗೂ ದಿನೇಶ್‌ ಗುಂಡೂರಾವ್‌ ಅವರನ್ನೊಳಗೊಂಡ ಸಚಿವರ ತಂಡ  ರಚಿಸಲಾಗಿದೆ.

ಈ ಸಮಿತಿಯು ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಲಿದೆ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.
-------------------------
3. ರಾಜ್ಯದಲ್ಲಿ ಸಿರಿಧಾನ್ಯದ ಉತ್ಪಾದನೆ ಹಾಗೂ ಮಾರಾಟವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.

ಇದರ ಭಾಗವಾಗಿ ಬೆಂಗಳೂರಿನ ಅರಮನೆ ಆವರಣದಲ್ಲಿ ಜನವರಿ 5 ರಿಂದ ಜನವರಿ 7ರವರೆಗೆ ಸಾವಯವ ಸಿರಿಧಾನ್ಯ

ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2024 ಆಯೋಜಿ ಸಲಾಗಿದೆ.

ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. 
------------------------- 
4. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಇರಲಿದೆ.

ಇನ್ನು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

ಬೆಳಗಿನ ಜಾವ ದಂಡ ಮಂಜು ಆವರಿಸಲಿರಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಗರಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 
 -------------------------

5. ಈ ಬಾರಿ ಕರ್ನಾಟಕದಲ್ಲಿ ಬರ ಎದುರಾಗಿರುವುದುರಿಂದ  ಬರೋಬ್ಬರಿ 48 ಲಕ್ಷ ಹೆಕ್ಟೇರ್ ಕೃಷಿ ಭೂ ಪ್ರದೇಶದಲ್ಲಿ

35 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ವೈಪರೀತ್ಯ ಉಂಟಾಗಿದ್ದು, ಕೇಂದ್ರ ಸರ್ಕಾರ ರೈತರ ನೆರವಾಗಬೇಕು ಎಂದಿದ್ದಾರೆ.

ಇನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಬರದ ತೀವ್ರತೆ ಕಡಿಮೆಯಾಗಿದೆ.

ಬಡವರ ಕುಟುಂಬಕ್ಕೆ ಈಗ ಹಣ ದೊರೆಯುತ್ತಿದೆ ಎಂದು ಹೇಳಿದ್ದಾರೆ.
-------------------------