News

ರಾಜ್ಯದಲ್ಲಿ ಒಂದೇ ದಿನ 43,438 ಮಂದಿಗೆ ಸೋಂಕು 239 ಸಾವು

03 May, 2021 9:10 PM IST By:

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಏರುತ್ತಲೇ ಇದೆ. ಕೊರೋನಾ ಸೋಂಕಿತರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದ್ದರಿಂದ ಜನತೆಯಲ್ಲಿ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಸೋಮವಾರ ಒಂದೇ ದಿನ 44,438 ಮಂದಿಗೆ ಹೊಸ ಸೋಂಕು‌‌ ತಗುಲಿದ್ದು 239 ಜನರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು‌ ಒಂದೇ ದಿನ 115 ಜನರು ಸೋಂಕಿಗೆ ಬಲಿಯಾಗಿದ್ದಾರೆ. 31544‌ ಜನರಿಗೆ ವೈರಾಣು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 819404 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವೆಲ್ ಬುಲೆಟಿನ್ ತಿಳಿಸಿದೆ.
ರಾಜ್ಯದಲ್ಲಿ 20901 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇದುವರೆಗೆ 1185299 ಮಂದಿ ಗುಣಮುಖರಾಗಿದ್ದಾರೆ. ಮೃತರ‌ ಸಂಖ್ಯೆ 16250 ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1646303. ಹೆಚ್ಚಳವಾಗಿದೆ. ಖಚಿತ ಪ್ರಕರಣಗಳ ಸಂಖ್ಯೆ ಶೇ 29.80 ರಷ್ಷಿದ್ದರೆ,ಮೃತರ ಸಂಖ್ಯೆ 0.33 ರಷ್ಷಿದೆ ಎಂದು ಅಂಕಿ ಅಂಶ ತಿಳಿಸಿದೆ.
ಬಾಗಲಕೋಟೆ 569, ಬಳ್ಳಾರಿ 990, ಬೆಳಗಾವಿ 559, ಬೆಂಗಳೂರು ಗ್ರಾಮಾಂತರ 815, ಬೆಂಗಳೂರು ನಗರ 22,112, ಬೀದರ್ 396, ಚಾಮರಾಜನಗರ 724, ಚಿಕ್ಕಬಳ್ಳಾಪುರ 886, ಚಿಕ್ಕಮಗಳೂರು 206, ಚಿತ್ರದುರ್ಗ 151, ದಕ್ಷಿಣ ಕನ್ನಡ 793, ದಾವಣಗೆರೆ 104, ಧಾರವಾಡ 1021, ಗದಗ 191, ಹಾಸನ 1673, ಹಾವೇರಿ 330, ಕಲಬುರಗಿ 1083, ಕೊಡಗು 628, ಕೋಲಾರ 656, ಕೊಪ್ಪಳ 617, ಮಂಡ್ಯ 1367, ಮೈಸೂರು 2685, ರಾಯಚೂರು 529, ರಾಮನಗರ 492, ಶಿವಮೊಗ್ಗ 584, ತುಮಕೂರು 2361, ಉಡುಪಿ 529, ಉತ್ತರ ಕನ್ನಡ 779,, ವಿಜಯಪುರ 274, ಮತ್ತು ಯಾದಗಿರಿಯಲ್ಲಿ 337 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಆಮ್ಲಜನಕ ಅಭಾವ : 24 ರೋಗಿಗಳ ಸಾವು

ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ 24 ಮಂದಿ ಸಾವನ್ನಪ್ಪಿರುವ ಮನಕಲಕುವ ಘಟನೆ ಸಂಭವಿಸಿದೆ. ತಮ್ಮವರನ್ನು ಕಳೆದುಕೊಂಡ ಕುಟಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಭಾನುವಾರ ರಾತ್ರಿ ಏಕಾಏಕಿ ಆಕ್ಸಿಜನ್ ಕೊರತೆ ಉಂಟಾಗಿ ರೋಗಿಗಳು ನರಳಾಡಿದ್ದಾರೆ. ಮೃತಪಟ್ಟವರಲ್ಲಿ ಸೋಂಕು ತಗುಲಿದವರು, ಕೋವಿಡ್ ಅಲ್ಲದ ರೋಗಿಗಳು ಸಾವನ್ನಪ್ಪಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ 50 ವೆಂಟಿಲೇಟರ್‌ಗಳು, 50 ಆಕ್ಸಿಜನ್ ಬೆಡ್‌ಗಳು ಇವೆ. ಈಗ ಆಮ್ಲಜನಕ ಕೊರತೆಯಾಗಿರುವುದರಿಂದ ರೋಗಿಗಳ ನರಳಾಟ ಹೇಳತೀರದಾಗಿದೆ. ಆಕ್ಸಿಜನ್ ಪೂರೈಕೆಯಾಗದೆ 50ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ.