ಮಧ್ಯ ಟರ್ಕಿಯಲ್ಲಿ ಸೋಮವಾರ ಬೆಳಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಾವು ಸಂಭವಿಸಿದ ಕುರಿತು ವರದಿಯಾಗಿದೆ.
ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಸಾಧ್ಯತೆ! ಎಷ್ಟು? ಏನು? ಇಲ್ಲಿದೆ ವಿವರ
Turkey Earthquake: ಇಂದು ಸೋಮವಾರ ಟರ್ಕಿಗೆ ಭಯಾನಕ ದಿನವಾಗಿದೆ. ಸೋಮವಾರ ಬೆಳಗ್ಗೆ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಡೀ ದೇಶ ತತ್ತರಿಸಿದೆ.
ಈ ಭೂಕಂಪದ ತೀವ್ರ ಕಂಪನಕ್ಕೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವು ಕಟ್ಟಡಗಳು ಕುಸಿದು ಬಿದ್ದಿವೆ. ಭೂಕಂಪವು ಬೆಳಿಗ್ಗೆ 04:17 ಕ್ಕೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸದ್ಯ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ.
ಪಿಂಚಣಿದಾರರೇ ಗಮನಿಸಿ : ಫೆಬ್ರವರಿ 20ರೊಳಗೆ ಈ ಕೆಲಸ ಮಾಡುವಂತೆ ಸರ್ಕಾರದ ಸೂಚನೆ!
ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ
ವರದಿಗಳ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.8 ಎಂದು ಅಳೆಯಲಾಗಿದೆ. 7.8 ತೀವ್ರತೆಯ ಭೂಕಂಪವು ಟರ್ಕಿಯನ್ನು ನಡುಗಿಸಿದೆ. ಅನೇಕ ಕಟ್ಟಡಗಳು ಕುಸಿದಿವೆ.
US ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಗಾಜಿಯಾಂಟೆಪ್‌ನಿಂದ ಸುಮಾರು 33 ಕಿಲೋಮೀಟರ್ (20 ಮೈಲಿ) ಮತ್ತು ನೂರ್ಡಗಿ ನಗರದಿಂದ ಸುಮಾರು 26 ಕಿಲೋಮೀಟರ್ (16 ಮೈಲಿ) ದೂರದಲ್ಲಿದೆ.
US ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ , ಇದು 18 kilometres (11 mi) ಆಳದಲ್ಲಿ ಕೇಂದ್ರೀಕೃತವಾಗಿತ್ತು.
ಸರ್ಕಾರದಿಂದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಘೋಷಣೆ..ಏನಿದು?
ಟರ್ಕಿ ಭೂಕಂಪಕ್ಕೆ ಸಾಕಷ್ಟು ಜನ ಬಲಿ (Magnitude 7.8 Earthquake in Turkey)
ಆಗ್ನೇಯ ಟರ್ಕಿಯಲ್ಲಿ ಈ ಭೂಕಂಪದಿಂದಾಗಿ ಭಾರೀ ಹಾನಿಯ ಸುದ್ದಿ ಇದೆ. ಇದರಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿರುವ ಸುದ್ದಿ ಇದೆ.
ಇದರೊಂದಿಗೆ ಭೂಕಂಪದಿಂದಾಗಿ ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಅದೇ ಸಮಯದಲ್ಲಿ, ಸಿರಿಯಾದಲ್ಲಿ, ಭೂಕಂಪದಿಂದ ಅನೇಕ ಕಟ್ಟಡಗಳು ಕುಸಿದಿರುವ ಸುದ್ದಿ ಮುನ್ನೆಲೆಗೆ ಬಂದಿದೆ.