ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ತೊಗರಿ ಕಾಳು ಪ್ರತಿ ಕ್ವಿಂಟಾಲ್‍ಗೆ 6000 ರೂಪಾಯಿಗಳ ದರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಂದ ಖರೀದಿಸಲು ಒಟ್ಟು 153 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ತೊಗರಿ ಬೆಳೆದ ರೈತರು ಅವಶ್ಯಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ತೆರಳಿ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷರಾದ ವಿ.ವಿ. ಜ್ಯೋತ್ಸ್ನಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹತ್ತಿಗೆ ಬೆಂಬಲ ಬೆಲೆ 5265 ದಿಂದ 6225 ರೂಪಾಯಿ ಘೋಷಣೆ- ಡಿ. 17 ರಿಂದ ಖರೀದಿ ಆರಂಭ
ಪ್ರತಿ ಎಕರೆಗೆ 7.5 ಕ್ವಿಂಟಲ್‍ನಂತೆ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ತೊಗರಿ ಉತ್ಪನ್ನ ಖರೀದಿ ಮಾತ್ರ ಖರೀದಿಸಲಾಗುತ್ತದೆ. ತೊಗರಿ ಉತ್ಪನ್ನ ಬೆಳೆದ ರೈತರು ಹತ್ತಿರದ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ತೆರಳಿ ಆನ್‍ಲೈನ್‍ನಲ್ಲಿ 2020ರ ಡಿಸೆಂಬರ್ 30 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ರೈತರಿಂದ ತೊಗರಿ ಕಾಳು ಖರೀದಿಯ ಕಾಲಾವಧಿಯನ್ನು 2021ರ ಜನವರಿ 1 ರಿಂದ 30 ವರೆಗೆ ನಿಗದಿಪಡಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ 113 ಖರೀದಿ ಕೇಂದ್ರಗಳನ್ನು ಹಾಗೂ ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ 43 ಸೇರಿದಂತೆ ಒಟ್ಟು 153 ತೊಗರಿ ಖರೀದಿ ಕೇಂದ್ರಗಳ್ನು ಸ್ಥಾಪಿಸಲಾಗಿದೆ.
ಕಲಬುರಗಿ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಭೀಮಳ್ಳಿ, ಬೆಲೂರ (ಕೆ), ಅವರಾದ (ಬಿ), ಹಾಗರಗಾ, ಫೀರೋಜಾಬಾದ, ಹರಸೂರ, ಕುಮಸಿ, ಡೊಂಗೂರಗಾಂವ್, ಸಾವಳಗಿ (ಬಿ), ಕವಲಗಾ (ಬಿ), ಶರಣಸಿರಸಗಿ (ಹಡಗಿಲ್ ಹಾರುತಿ), ಹೊನಕಿರಣಗಿ, ಜಂಬಗಾ, ಪಟ್ಟಣ, ನಾಗೂರ, ಕಲಮೊಡ, ಭೂಪಾಲ ತೇಗನೂರ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಮಹಾಗಾಂವ್, ಹಾಗರಗುಂಡಗಿ, ಮಿಣಜಗಿ, ಸಣ್ಣೂರ, ಓಕಳಿ, ಮೇಳಕುಂದಾ (ಬಿ)ಯ ನೇಗಿಲಯೋಗಿ ರೈತ ಸಂಘ, ಕಮಲಾಪೂರದ ಗ್ರಾಮೀಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ಕಮಲಾಪೂರದ ದೇವರ ದಾಸಿಮಯ್ಯಾ ರೈತ ಉತ್ಪಾದಕರ ಕಂಪನಿ ಹಾಗೂ ಶ್ರೀನಿವಾಸ ಸರಡಗಿ.
ಸೇಡಂ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಕಾನಾಗಡ್ಡಾ, ಕೋಳಕುಂದಾ, ಸಿಂಧನಮಡು, ಕುರಕುಂಟಾ, ನಾಡೆಪಲ್ಲಿ, ಮೇದಕ್, ಹಾಬಾಳ (ಟಿ), ರಂಜೋಳ, ಹೊಡೆಬೀರನಹಳ್ಳಿ,
ಕೊಳಕುಂದಾ ಗ್ರಾಮೀಣ (ದುಗನೂರ) ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಚಂದಾಪೂರ, ಅಡಕಿ, ಮುಧೋಳ, ಕೋಡ್ಲಾ ಹಾಗೂ ಸೂರವಾರ ಕಾಗೇಣಾ ರೈತ ಉತ್ಪಾದಕರ ಸಂಸ್ಥೆ.
ಅಫಜಲಪೂರ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಮಣ್ಣೂರ, ಮಾಶಾಳ್, ಅತನೂರ್, ಕಲ್ಲೂರ್ (ಡಿ), ದೇವಲಗಾಣಗಾಪುರ, ಬೈರಾಮಡಗಿ, ಬಂದರವಾಡ್, ಗಬ್ಬೂರ್ (ಬಿ), ಮಲ್ಲಾಬಾದ, ಬೋಸಗಾ, ಗೌರ(ಬಿ), ಬಳ್ಳುರಗಿ, ರೇವೂರ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಕರಜಗಿ, ಚಿಣಮಗೇರಾ, ಹಸರಗುಂಡಗಿ ಹಾಗೂ ಸ್ಟೇಶನ್ ಗಾಣಗಾಪೂರದ ಸಂಗಮನಾಥ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ.
ಆಳಂದ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಕಡಗಂಚಿ, ನಿಂಬಾಳ್, ಮುನ್ನಳಿ, ಕಮಲಾನಗರ, ಖಜೂರಿ, ಯಳಸಂಗಿ, ಅಂಬಲಗಾ, ರುದ್ರವಾಡಿ, ಸನಗುಂದ (ಬೆಳಮಗಿ), ಜಂಬಗಾ (ಜೆ), ಮಾದನಹಿಪ್ಪರಗಾ, ಪಡಸಾವಳಗಿ, ಆಳಂದ ಪ್ಯಾಕ್ಸ್, ಸಂಗೋಳಗಿ (ಬಿ), ಹಿರೊಳ್ಳಿ, ಹೋದಲೂರ, ವಿ.ಕೆ.ಸಲಗರ, ನರೋಣ, ಏಲೆನಾವದಗಿ, ಕೊಡಲಹಂಗರಗಾ, ಚಿಂಚನಸೂರ(ಕೆರೆಅಂಬಲಗಾ), ನಿರಗುಡಿ, ಬೂಸನೂರ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ನಿಂಬರ್ಗಾ, ಸರಸಂಬಾ, ತಡಕಲ್, ಕವಲಗಾ ಹಾಗೂ ಮೋಘಾ (ಕೆ).
ಚಿಂಚೋಳಿ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ನಿಡಗುಂದಾ, ಸುಲೇಪೇಟ್, ಕನಕಪುರ, ಶಾದಿಪುರ, ಸಾಲೆಬೀರನಳ್ಳಿ, ಚಂದನಕೇರಾ, ಪೋಲಕಪಳ್ಳಿ, ಕೋಡ್ಲಿ, ಚೇಂಗಟಾ, ಚಿಂತಪಲ್ಲಿ, ಗರಗಪಳ್ಳಿ, ಮಿರಿಯಾಣ, ರಟಕಲ್, ರುದ್ನುರ, ಕೆರಳ್ಳಿ, ಗಡಿನಿಂಗದಳ್ಳಿ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಐನೋಳಿ, ಐನಾಪೂರ, ಹಸರಗುಂಡಗಿ, ಚಿಮ್ಮನಚುಡ, ಮೊಘಾ.
ಚಿತ್ತಾಪೂರ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಕೊಳ್ಳುರ, ಭೀಮನಳ್ಳಿ, ರಾವೂರ್, ಗುಂಡಗುರ್ತಿ, ದಂಡೋತಿ, ಮರತೂರ್, ಟೆಂಗಳಿ, ಬಂಕೂರ, ಪೇಟಶಿರೂರ್, ಕಮರವಾಡಿ, ಕುಂದನೂರ್, ಬಾಗೋಡಿ, ಹಲಚೇರಾ, ಕೊಡದೂರ, ಗೊಟುರ್, ಆಲೂರ (ಬಿ), ಹೆಬ್ಬಾಳ್, ಕುಂದಗೋಳ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಹೆರೂರ, ಮಂಗಲಗಿ, ಅರಣಕಲ್, ಕಾಳಗಿ, ಹಳಕಟ್ಟ, ನಾಲವಾರ, ಚಿತ್ತಾಪುರ ತಾಲೂಕಿನ ಚಿಂಚೋಳಿ ಕಾಯಕ ರೈತ ಉತ್ಪಾದಕರ ಸಂಸ್ಥೆ, ಡೋಣಗಾಂವ್, ಕರದಾಳ.
ಜೇವರ್ಗಿ ತಾಲೂಕು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಖರೀದಿ ಕೇಂದ್ರಗಳಾದ ಮಳ್ಳಿ, ಬಳಬಟ್ಟಿ, ಕಲ್ಲೂರ್ (ಕೆ), ಮಂದೇವಾಲ್, ಗುಡೂರ್ ಎಸ್.ಎ., ಸುಂಬಡ್, ಕೋಳಕೋರ್ (ಜೇವರ್ಗಿ), ಅಂಕಲಗಾ, ಹರನೂರ್, ಇಜೆರಿ (ಯಳವಾರ), ಆಲೂರು, ಗಂವ್ಹಾರ, ಹರವಾಳ, ಕುಕನೂರ, ನರಿಬೊಳಿ, ಯಡ್ರಾಮಿ, ಬೀಳವಾರ ಹಾಗೂ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಖರೀದಿ ಕೇಂದ್ರಗಳಾದ ಅರಳಗುಂಡಗಿ, ಆಂದೋಲಾ, ಜೇರಟಗಿ, ಕೆಲ್ಲೂರ, ಕುರಳಗೇರಾ, ಕುಮ್ಮನ ಸಿರಸಗಿ.
ವಿಜಯಪುರ ಜಿಲ್ಲೆಯಲ್ಲಿ 111 ಖರೀದಿ ಕೇಂದ್ರ ಸ್ಥಾಪನೆ
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ, ವಿಜಯಪುರ ಜಿಲ್ಲೆಯಲ್ಲಿ 111 ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಕೇಂದ್ರಗಳ ಸ್ಥಾಪನೆಗೂ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2020–21ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ತೊಗರಿ ಖರೀದಿಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‍ಗೆ 6 ಸಾವಿರ ಬೆಂಬಲ ಬೆಲೆ ದರ ಘೋಷಿಸಿದ್ದು, ಪ್ರತಿ ಎಕರೆಗೆ 7.5 ಕ್ವಿಂಟಲ್ ಹಾಗೂ ಗರಿಷ್ಠ 20 ಕ್ವಿಂಟಲ್ ತೊಗರಿಯನ್ನು ಮಾತ್ರ ಖರೀದಿಸಲಾಗುತ್ತದೆ ಎಂದರು.
ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಸದೃಢ ಪಿಎಸಿಎಸ್, ಎಫ್‍ಪಿಒ, ಟಿಎಪಿಸಿಎಂಎಸ್, ಎಫ್‍ಸಿಐ ಸಂಸ್ಥೆಗಳ ಮೂಲಕ ತೊಗರಿ ಖರೀದಿಸಲು ಕೇಂದ್ರಗಳನ್ನು ತೆರೆಯಲು ಆಯ್ಕೆ ಹಾಗೂ ಜಿಲ್ಲಾವಾರು ಉತ್ಪಾದನಾ ಆಧಾರ, ರೈತರ ನೋಂದಣಿ ಆಧಾರದ ಮೇಲೆ ಕನಿಷ್ಠ ಖರೀದಿ ಕೇಂದ್ರಗಳ ಸಂಖ್ಯೆಯನ್ನು ನಿಗದಿಪಡಿಸಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.