News

ಕಬ್ಬನ್‌ ಪಾರ್ಕ್‌ನಲ್ಲಿ ಬರಲಿದೆ ಸುರಂಗ ಅಕ್ವೇರಿಯಂ! ಸುರಂಗ ಅಕ್ವೇರಿಯಂನ ವಿಶೇಷತೆಗಳೇನು ಗೊತ್ತೆ ?

04 December, 2022 11:39 AM IST By: Hitesh
Tunnel Aquarium coming in Cubbon Park! Do you know the special features of the tunnel aquarium?

ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಕಬ್ಬನ್ ಪಾರ್ಕ್‌ ಮತ್ತಷ್ಟು ಆಕರ್ಷಣಿವಾಗಲಿದ್ದು, ಸುರಂಗ ಅಕ್ವೇರಿಯಂ ಪ್ರಾರಂಭವಾಗಲಿದೆ.

ಕಬ್ಬನ್ ಪಾರ್ಕ್‌ ಮತ್ಸ್ಯಾಲಯ ಮತ್ತಷ್ಟು ಆಕರ್ಷಣಿಯವಾಗಲಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವ  ಮಾದರಿಯಲ್ಲಿ ಮತ್ಸಾಲಯವನ್ನು

ಅಭಿವೃದ್ದಿಪಡಿಸಲು ಬಂದರು ಹಾಗೂ ಮೀನುಗಾರಿಕಾ ಇಲಾಖೆ ಮುಂದಾಗಿದೆ.

ಕಬ್ಬನ್ ಪಾರ್ಕ್ ನಲ್ಲಿ ಸುದೀರ್ಘ ಸುರಂಗ ಅಕ್ವೇರಿಯಂ ನಿರ್ಮಿಸಲು ಇಲಾಖೆ ಮುಂದಾಗಿದ್ದು, ಮೀನುಗಾರಿಕೆ ಇಲಾಖೆಯು ಬೆಂಗಳೂರು

ಮೂಲದ ಏಜೆನ್ಸಿಯ ಸಹಯೋಗದೊಂದಿಗೆ ಅಕ್ವೇರಿಯಂ ಅಭಿವೃದ್ಧಿ ಮಾಡುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅವರು ಜುಲೈ 4ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಕಬ್ಬನ್‌ಪಾರ್ಕ್‌ನ ಮತ್ಸ್ಯಾಲಯಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ವಾರ್ಷಿಕವಾಗಿ 1.20 ಲಕ್ಷ ಪ್ರವಾಸಿಗರು ಮತ್ಸ್ಯಾಲಯಕ್ಕೆ ಭೇಟಿ ನೀಡುತ್ತಾರೆ.

ಪ್ರತಿವರ್ಷ 12 ಲಕ್ಷ ಆದಾಯವೂ ಪ್ರವಾಸಿಗರಿಂದ ಸಂಗ್ರಹವಾಗುತ್ತದೆ.

ಇದೀಗ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಇಲಾಖೆ ಸುರಂಗ ಮತ್ಸ್ಯಾಲಯ ಅಭಿವೃದ್ಧಿಪಡಿಸಲು ಮುಂದಾಗಿದೆ.  

ಈಗಾಗಲೇ ಟೆಂಡರ್‌ ಪ್ರಕ್ರಿಯೆಯೂ ನಡೆದಿದ್ದು, bloo aqua studio ಬೆಂಗಳೂರು ಸಂಸ್ಥೆ ಹದಿನೈದು

ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ಸ್ಯಾಲಯವನ್ನು ಅಭಿವೃದ್ದಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.

Tunnel Aquarium coming in Cubbon Park! Do you know the special features of the tunnel aquarium?

ಮತ್ಸ್ಯಾಲಯದ ಪ್ರಸ್ತಕ ವಿನ್ಯಾಸವನ್ನು ಉಳಿಸಿಕೊಳ್ಳುವ ಮೂಲಕ  2 ಅಂತಸ್ತಿನಲ್ಲಿ ವಿವಿಧ ಟ್ಯಾಂಕ್‌ಗಳನ್ನು ಇರಿಸಿ ಅಲಂಕರಿಸಲಾಗುತ್ತದೆ.

ಇಲ್ಲಿ ಮೆರೈನ್‌ ಅಕ್ವೇರಿಯಂ, ಜೆಲ್ಲಿ ಅಕ್ವೇರಿಯಂ ಹಾಗೂ ಸಿಹಿ ನೀರಿನ ಅಲಂಕಾರಿಕ 150 ಕ್ಕೂ ಹೆಚ್ಚು ಮೀನು ತಳಿಗಳನ್ನು ಪ್ರದರ್ಶಿಸಲಾಗುತ್ತದೆ.

Tunnel Aquarium coming in Cubbon Park! Do you know the special features of the tunnel aquarium?

ಸಿಂಗಾಪುರ, ದುಬೈ ಮತ್ತು ಚೀನಾದಲ್ಲಿ ಇದೇ ರೀತಿಯ ಸುರಂಗ ಅಕ್ವೇರಿಯಂಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಗುಜರಾತಿನಲ್ಲಿ ಒಂದಿದೆ. ಆದರೆ ಇದು ಕರ್ನಾಟಕದಲ್ಲಿ ಇದೇ ಮೊದಲು ಎನ್ನಲಾಗಿದೆ.   

Tunnel Aquarium coming in Cubbon Park! Do you know the special features of the tunnel aquarium?

ಇನ್ನು ಅಕ್ವೇರಿಯಂನ ಟಿಕೆಟ್ ದರವನ್ನು ವಯಸ್ಕರಿಗೆ ರೂ 80 ಮತ್ತು ಮಕ್ಕಳಿಗೆ ರೂ 25 ನಿಗದಿಪಡಿಸುವ ಸಾಧ್ಯತೆಯಿದೆ.

ವಾರಾಂತ್ಯದಲ್ಲಿ ಕ್ರಮವಾಗಿ ರೂ 100 ಮತ್ತು ರೂ 40 ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಟಿಕೆಟ್ ದರವನ್ನು ಹೆಚ್ಚಿಸಲು  ಮುಂದಿನ ದಿನಗಳಲ್ಲಿ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.