News

TRAIನಿಂದ ಮೊಬೈಲ್‌ ಬಳಕೆದಾರರಿಗೆ ಎಚ್ಚರಿಕೆ, ಏನದು ?

16 November, 2023 3:09 PM IST By: Hitesh
ನೀವು ಮೊಬೈಲ್‌ ಬಳಸುತ್ತಿದ್ದರೆ ಇದನ್ನು ತಪ್ಪದೇ ಓದಿ !

ಕೇಂದ್ರ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಸಾರ್ವಜನಿಕರಿಗೆ ಒಂದು ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಆದೇನು ಎನ್ನುವುದನ್ನು ಈ ವರದಿಯಲ್ಲಿ ನೋಡೋಣ..

ದೇಶದಲ್ಲಿ ಮೊಬೈಲ್‌ ಪೋನ್‌ ಬಳಸಿ ಮೋಸದ ವ್ಯವಹಾರಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತೀಯ ಟೆಲಿಕಾಂ ನಿಯಂತ್ರಣ

ಪ್ರಾಧಿಕಾರವು ಮಹತ್ವದ ಸಂದೇಶವೊಂದನ್ನು ನೀಡಿದೆ.   

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು, ಕೆಲವು ಕಂಪನಿಗಳು, ಏಜೆನ್ಸಿಗಳು ಹಾಗೂ ಕೆಲವರು

ತಾವು TRAI ನಿಂದ ಕರೆ ಮಾಡುತ್ತಿದ್ದೇವೆ ಎಂದು ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.

ಈ ವಿಷಯವು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಗಮನಕ್ಕೆ ಬಂದಿದೆ.  

ಟ್ರಾಯ್‌ ಹೆಸರಿನಲ್ಲಿ ಕರೆ ಮಾಡುವವರು ಸಾರ್ವಜನಿಕರಿಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಸ್ಥಗಿತ ಮಾಡಲಾಗುವುದು.

ನೀವು ಇನ್ಮುಂದೆ ಈ ದೂರವಾಣಿ ಸಂಖ್ಯೆಯನ್ನು ಬಳಸಲು ಸಾಧ್ಯವಿಲ್ಲ ಎಂದು ನಂಬಿಸುತ್ತಿದ್ದಾರೆ.  

ಸಿಮ್ ಕಾರ್ಡ್‌ಗಳನ್ನು ಪಡೆಯಲು ಸಾರ್ವಜನಿಕರ ಆಧಾರ್ ಸಂಖ್ಯೆಗಳನ್ನು ನೀಡಿದ್ದಾರೆ.

ಈ ಎಲ್ಲವನ್ನೂ ಬಳಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.

ಈ ರೀತಿ ಕರೆ ಮಾಡುವವರು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಉಳಿಸಿಕೊಳ್ಳಬೇಕಾದರೆ ಅಥವಾ ಮೊಬೈಲ್‌ ಸಂಖ್ಯೆ ಉಳಿಸಿಕೊಳ್ಳಬೇಕು

ಎಂದಾದರೆ, ಕೂಡಲೇ ಸ್ಕೈಪ್ ವೀಡಿಯೊ ಕರೆ ಮಾಡುವಂತೆ ಸಾರ್ವಜನಿಕರಿಗೆ ಸೂಚನೆ ನೀಡುತ್ತಿದ್ದಾರೆ.

ಗಾಬರಿಗೆ ಒಳಗಾಗುವ ಗ್ರಾಹಕರು ಕೂಡಲೇ ಸ್ಕೈಪ್‌ ವಿಡಿಯೋ ಮಾಡುತ್ತಿದ್ದಾರೆ.

ಈ ಮೂಲಕ ಗ್ರಾಹಕರನ್ನು ವಿಡಿಯೋ ಕರೆ ಮಾಡುವಂತೆ ಮಾಡಿ, ವಿಡಿಯೋವನ್ನು ಬೇರೆಯ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ಈ ರೀತಿ TRAI ಯಾವುದೇ ವೈಯಕ್ತಿಕ ಟೆಲಿಕಾಂ ಗ್ರಾಹಕರ ಯಾವುದೇ ಮೊಬೈಲ್ ಸಂಖ್ಯೆಯನ್ನು ನಿಲ್ಲಿಸುವುದಿಲ್ಲ

ಅಥವಾ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.  

TRAI ಎಂದಿಗೂ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಅಥವಾ ಮೊಬೈಲ್ ಸಂಖ್ಯೆಗಳ ಸಂಪರ್ಕ

ಕಡಿತಗೊಳಿಸಲು ಯಾವುದೇ ಕರೆಯನ್ನು ಮಾಡುವುದಿಲ್ಲ.

ಅಂತಹ ಚಟುವಟಿಕೆಗಳಿಗಾಗಿ ಗ್ರಾಹಕರನ್ನು ಸಂಪರ್ಕಿಸಲು TRAI ಯಾವುದೇ ಏಜೆನ್ಸಿಗೆ ಅಧಿಕಾರ ನೀಡಿಲ್ಲ ಮತ್ತು ಅಂತಹ ಎಲ್ಲಾ ಕರೆಗಳು

ಕಾನೂನುಬಾಹಿರ ಮತ್ತು ಕಾನೂನಿನ ಪ್ರಕಾರ ವ್ಯವಹರಿಸಬೇಕು. ಆದ್ದರಿಂದ, TRAI ನಿಂದ ಎಂದು ಹೇಳಿಕೊಳ್ಳುವ ಯಾವುದೇ

ಕರೆ ಅಥವಾ ಸಂದೇಶ ಬಂದರೆ ಅದನ್ನು ವಂಚನೆ ಮಾಡುವ ಉದ್ದೇಶದಿಂದಲೇ ಕಳುಹಿಸಲಾಗುತ್ತಿದೆ

ಎಂದು ಪರಿಗಣಿಸಬೇಕು ಎಂದು TRAI ಎಚ್ಚರಿಕೆ ನೀಡಿದೆ.

ಅಲ್ಲದೇ TRAI ನ ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಶನ್ ಗ್ರಾಹಕ ಪ್ರಾಶಸ್ತ್ಯ ನಿಯಂತ್ರಣ (TCCCPR) 2018 ರ ಪ್ರಕಾರ,

ಅಪೇಕ್ಷಿಸದ ಸಂವಹನಗಳನ್ನು ಕಳುಹಿಸುವಲ್ಲಿ ಒಳಗೊಂಡಿರುವ ಮೊಬೈಲ್ ಸಂಖ್ಯೆಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ

ಜವಾಬ್ದಾರಿಯನ್ನು ಪ್ರವೇಶ ಸೇವಾ ಪೂರೈಕೆದಾರರು ಹೊಂದಿರುತ್ತಾರೆ ಎಂದು ಹೇಳಿದೆ.

ಈ ರೀತಿ ಯಾರಾದರೂ ಮೋಸಕ್ಕೆ ಒಳಗಾದರೆ ಕೂಡಲೇ ಗ್ರಾಹಕ ಸೇವಾ ಕೇಂದ್ರದ ದೂರವಾಣಿ ಸಂಖ್ಯೆಗೆ

ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ https://cybercrime.gov.in ನಲ್ಲಿ ನೇರವಾಗಿ ದೂರು ದಾಖಲಿಸಬಹುದಾಗಿದೆ.

ಅಥವಾ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು ಎಂದು TRAI ಮಾಹಿತಿ ನೀಡಿದೆ.