News

ಜೂ.10ರಂದು ಆನ್ಲೈನ್ ಮೂಲಕ ಸುಧಾರಿತ ಶುಂಠಿ ಬೇಸಾಯ ಕುರಿತು ತರಬೇತಿ

09 June, 2021 8:15 PM IST By:
Ginger

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗ ಹಾಗೂ ಹಾವೇರಿ ಜಿಲ್ಲೆ ದೇವಿಹೊಸೂರಿನ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಜೂನ್ 10ರಂದು ಬೆಳಗ್ಗೆ 10.30ಕ್ಕೆ ‘ಶುಂಠಿ ಬೆಳೆಯಲ್ಲಿ ಸುಧಾರಿತ ಬೇಸಾಯಯ ಪದ್ಧತಿಗಳು’ವಿಷಯ ಕುರಿತು ಅಂತರ್ಜಾಲ ತರಬೇತಿ ಕಕಾರ್ಯಕ್ರಮ ಆಯೋಜಿಸಲಾಗಿದೆ.

ಎಲ್ಲಾ ಶುಂಠಿ ಬೆಳೆಗಾರರು ಹಾಗೂ ಇದೀಗ ಶುಂಟಿ ಬೇಸಾಯದಲ್ಲಿ ತೊಡಗಿಕೊಳ್ಳಲು ಸಿದ್ಧತೆ ನಡೆಸಿರುವ ಆಸಕ್ತ ಕೃಷಿಕರ ಅನುಕೂಲದ ದೃಷ್ಟಿಯಿಂದ ಈ ಅಂತರ್ಜಾಲ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು https://meet.google.com/asg-wwcs-bew ಈ ಲಿಂಕ್ ಮೇಲೆ ಒತ್ತುವ ಮೂಲಕ ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯುವ ತರಬೇತಿಗೆ ಭಾಗವಹಿಸಬಹುದಾಗಿದೆ.

ದಾವಣಗೆರೆ ಜಿಲ್ಲೆಯ ಕೃಷಿ ಸಲಹೆಗಾರರಾಗಿರುವ ನಾಗನಗೌಡ ಎಂ, ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಶುಂಠಿ ಬೆಳೆಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ರೈತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಮಾಹಿತಿಯನ್ನು ನೀಡಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕ, ಹಾವೇರಿ ಜಿಲ್ಲೆ ದೇವಿಹೊಸೂರಿನ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾಗಿರುವ ಕೃಷ್ಣ ಕುರುಬೆಟ್ಟ ಅವರು ಮಾಹಿತಿ ನೀಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ಪ್ರಸೆಂಟ್ ನೌ ಮೇಲೆ ಕ್ಲಿಕ್ ಮಾಡದೆ, ಆಸ್ಕ್ ಟು ಜಾಯಿನ್ ಮೇಲೆ ಒತ್ತಬೇಕು.

ಭಾರತದಲ್ಲೇ ಹೆಚ್ಚು

ಸಾಮಾನ್ಯಯವಾಗಿ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಶುಂಠಿ ಬೆಳೆಯಲಾಗುತ್ತದೆ. ಅದರಲ್ಲೂ ಕರ್ನಾಟಕ, ಒರಿಸ್ಸಾ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿನ ಅತಿ ಹೆಚ್ಚು ಪ್ರದೇಶದಲ್ಲಿ ಶುಂಠಿ ಬೇಸಾಯ ಮಾಡಲಾಗುತ್ತದೆ. ಒಟ್ಟಾರೆ ಜಾಗತಿಕ ಶುಂಠಿ ಉತ್ಪಾದನೆಯಲ್ಲಿ ಶೇ.೬೫ರಷ್ಟು ಶುಂಠಿ ಭಾರತದಲ್ಲೇ ಉತ್ಪಾದನೆಯಯಾಗುತ್ತದೆ ಎಂಬುದು ಹೆಮ್ಮೆಯ ಸಂಗತಿ.

ಹವಾಗುಣ, ಮಣ್ಣು

ಶುಂಠಿ ಬೆಳೆಯು ಬೆಚ್ಚನೆ ಮತ್ತು ಆರ್ಧ್ರ ಹವಾಗುಣವನ್ನು ಬಯಸುತ್ತದೆ. ಸಮುದ್ರ ಮಟ್ಟದಿಂದ ೧೦೦ ಮೀಟರ್ ಎತ್ತರ ಪ್ರದೇಶಗಳಲ್ಲೂ ಶುಂಠಿ ಬೇಸಾಯ ಮಮಾಡಬಹುದಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಮಳೆ ಆಧಾರಿತ ಮತ್ತು ನೀರಾವರಿ ಪ್ರದೇಶ ಎರಡರಲ್ಲೂ ಶುಮಠಿಯನ್ನು ಬೆಳೆಯಲಾಗುತ್ತಿದೆ. ಮರಳು ಮಿಶ್ರಿತ ಗೋಡು ಮಣ್ಣು, ಜೇಡಿ ಮಿಶ್ರಿತ ಗೋಡು ಮಣ್ಣು, ಕಪ್ಪು ಗೋಡು, ಜಂಬಿಟ್ಟು ಇತ್ಯಾದಿ ಮಣ್ಣುಗಳಲ್ಲಿ ಬೇಸಾಯ ಮಾಡಿದಾಗ ಉತ್ತಮ ಇಳುವರಿ ಪಡೆಯಬಹುದಾಗಿದೆ.

ಸಾಮಾನ್ಯ ತಳಿಗಳು

ಭಾರತದಲ್ಲಿ ರೈತರು ಹೆಚ್ಚಾಗಿ ಸ್ಥಳೀಯ ಶುಂಟಿ ತಳಿಗಳನ್ನೇ ಬೆಳೆಯುತ್ತಿದ್ದು, ಪ್ರತಿ ತಳಿಯೂ ಅದನ್ನು ಬೆಳೆಯುತ್ತಿರುವ ಪ್ರದೇಶ ಅಥವಾ ವಲಯವನ್ನು ಸೂಚಿಸುತ್ತದೆ. ಮಾರನ್, ಕುರುಪ್ಪಮಾಡಿ, ಎರ್ನಾಡ್, ವೈನಾಡ್, ಹಿಮಾಚಲ ಮತ್ತು ನಾಡಿಯ ಇವುಗಳು ಪ್ರಮುಖ ಸ್ಥಳೀಯ ತಳಿಗಳಾದರೆ, ರಿಯೋ-ಡಿ-ಜನೈರೋ ತಳಿಯು ಅತ್ಯಂತ ಜನಪ್ಪಿಯವಾಗಿದೆ. ಐಐಎಸ್‌ಆರ್ ವರದ ತಳಿಯ ತಾಜಾ ಶುಂಠಿ, ಒಣ ಶುಂಠಿಯು ಕ್ಯಾಂಡಿ ತಯಾರಿಕೆಗೆ ಬಳಕೆಯಾಗುತ್ತದೆ. ಇನ್ನು ಐಐಎಸ್‌ಆರ್ ರಜತ ತಳಿಯಲ್ಲಿ ಹೆಚ್ಚಿನ ತೈಲಾಂಶವನ್ನು ಕಾಣಬಹುದಾಗಿದೆ.