News

ನಿರುದ್ಯೋಗ ಯುವಕ ಯವತಿಯರಿಗೆ ಸ್ವ ಉದ್ಯೋಗಕ್ಕಾಗಿ ಉಚಿತ ತರಬೇತಿ

20 October, 2020 9:53 AM IST By:

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೆನರಾ ಬ್ಯಾಂಕ್ ನ ಎಡಿಫೈ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವತಿಯರಿಗಾಗಿ 10 ದಿನಗಳ ಉಚಿತ ಹೊಲಿಗೆ ತರಬೇತಿಯನ್ನು ಆಯೋಜಿಸಲಾಗಿದೆ.

ಆಸಕ್ತಯುಳ್ಳವರು ಕನಿಷ್ಟ 7 ತರಗತಿಯವರಿಗೆ ವಿಧ್ಯಾಭ್ಯಾಸ ಮಾಡಿರಬೇಕು. 18 ರಿಂದ 45 ವಯೋಮಾನದವರಿರಬೇಕು.

ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ. ತರಬೇತಿಯ ಮುಖ್ಯ ಉದ್ದೇಶ ಯುವತಿಯವರು ಸ್ವ-ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸಬೇಕು. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಿ ತಮ್ಮ ಹೆಸರನ್ನು ತರಬೇತಿಗೆ ನೋಂದಾಯಿಸಬಹುದು. ತರಬೇತಿ ನವೆಂಬರ್ 2 ರಿಂದ ಆರಂಭವಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್, ಎಡಿಫೈ ಅಭಿವೃದ್ಧಿ ಸಂಸ್ಥೆ ಬೆಂಗಳೂರು-ಮೈಸೂರು ಹೆದ್ದಾರಿಯ ವಾಜರಹಳ್ಳಿ, ಬಿಡದಿ ಹೋಬಳಿ, ರಾಮನಗರ, ತರಬೇತಿ ನಿರ್ದೇಶಕರು 9482682900, ಸಂಯೋಜಕರು 9591752123ಗೆ ಸಂಪರ್ಕಿಸಬಹುದು.

ಸಿಸಿಟಿವಿ ಕ್ಯಾಮರಾ ಉಚಿತ ತರಬೇತಿ ಶಿಬಿರ

ರಾಮನಗರ ಜಿಲ್ಹೆಯ ಬಿಡದಿ ಹೋಬಳಿಯ ಕೆನರಾ ಬ್ಯಾಂಕ್   ಎ.ಡಿ.ಪೈ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಉಚಿತ ಸಿಸಿಟಿವಿ ಕ್ಯಾಮೆರಾ, ಸೆಕ್ಯುರಿಟಿ ಅಲಾರಾಂ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು ಕನಿಷ್ಠ 7 ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರಬೇಕು. 18 ರಿಂದ 45 ವಯೋಮಾನದವರಿರಬೇಕು.

ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ. ತರಬೇತಿಯ ಮುಖ್ಯ ಉದ್ದೇಶ ಯುವಕರು ಸ್ವ-ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸುವುದಾಗಿರುತ್ತದೆ. ಆಸಕ್ತರು ತಮ್ಮ ಇತ್ತೀಚಿನ 3 ಭಾವಚಿತ್ರಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಯೊಂದಿಗೆ ನೇರವಾಗಿ ಅಭ್ಯರ್ಥಿಗಳು ಅರ್ಜಿಗಳನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.  ತರಬೇತಿ ದಿನಾಂಕ ಅಕ್ಟೋಬರ್‌ 26ರಿಂದ ಪ್ರಾರಂಭವಾಗುತ್ತದೆ.

 ಹೆಚ್ಚಿನ ಮಾಹಿತಿಗೆ ಕೆನರಾ ಬ್ಯಾಂಕ್ ಎ.ಡಿ.ಪೈ ಅಭಿವೃದ್ಧಿ ಸಂಸ್ಥೆ ಬೆಂಗಳೂರು –ಮೈಸೂರು ಹೆದ್ದಾರಿ ಯ ವಾಜರಹಳ್ಳಿ, ಬಿಡದಿ ಹೋಬಳಿ,ತರಬೇತಿ ಸಂಯೋಜಕರು: 9591752123 ಗೆ ಸಂಪರ್ಕಿಸಬಹುದು.