News

109 ಜೀವಂತ ಪ್ರಾಣಿಗಳ ಕಳ್ಳಸಾಗಣೆ ಮಾಡುತ್ತಿದ್ದ ಭಾರತೀಯ ಮಹಿಳೆಯರ ಬಂಧನ!

04 July, 2022 10:28 AM IST By: Kalmesh T
Trafficking of 109 live animals detected..!

ಬ್ಯಾಂಕಾಕ್‌ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಜೀವಂತ ಪ್ರಾಣಿಗಳನ್ನ ಕಳ್ಳ ಸಾಗಾಟ ಮಾಡುತ್ತಿದ್ದ ಮಹಿಳೆಯರನ್ನು ಬಂಧಿಸಲಾಗಿದೆ.

ಇದನ್ನೂ ಓದಿರಿ: ರೈತರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆ!

ಬಂಧಿತ ಮಹಿಳೆಯರ ಲಗೇಜ್‌ನಲ್ಲಿ 109 ಜೀವಂತ ಪ್ರಾಣಿಗಳು ಪತ್ತೆಯಾದ ನಂತರ ಕಳ್ಳಸಾಗಣೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಎಕ್ಸ್-ರೇ ತಪಾಸಣೆಯ ನಂತರ ಎರಡು ಸೂಟ್‌ಕೇಸ್‌ಗಳಲ್ಲಿ ಕಾಡು ಪ್ರಾಣಿಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್‌ನ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಮತ್ತು ಸಸ್ಯ ಸಂರಕ್ಷಣಾ ಇಲಾಖೆ ತಿಳಿಸಿದೆ.

ನಕಲಿ ಬೀಜ, ರಸಗೊಬ್ಬರ ಮಾರಾಟಗಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವ ಬಿ.ಸಿ. ಪಾಟೀಲ್‌ ಖಡಕ್‌ ಸೂಚನೆ

ವನ್ಯಜೀವಿ ಅಧಿಕಾರಿಗಳು ಎರಡು ಬಿಳಿ ಮುಳ್ಳುಹಂದಿಗಳು, ಎರಡು ಆರ್ಮಡಿಲೋಗಳು, 35 ಆಮೆಗಳು, 50 ಹಲ್ಲಿಗಳು ಮತ್ತು 20 ಹಾವುಗಳನ್ನು ಪತ್ತೆ ಮಾಡಿದರು.

ಈ ಸೂಟ್‌ಕೇಸ್‌ಗಳು ಇಬ್ಬರು ಭಾರತೀಯ ಮಹಿಳೆಯರಿಗೆ ಸೇರಿದ್ದು, ಅವರು ಭಾರತದ ಚೆನ್ನೈ ನಗರಕ್ಕೆ ವಿಮಾನವನ್ನು ಹತ್ತಬೇಕಾಗಿತ್ತು ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ.