News

Coal Production: ಕಲ್ಲಿದ್ದಲು ಉತ್ಪಾದನೆಯು 11.37% ದಿಂದ 60.42 ದಶಲಕ್ಷ ಟನ್‌ಗೆ ಏರಿಕೆ!

11 August, 2022 5:47 PM IST By: Kalmesh T
Total Coal Production Goes up by 11.37 % to 60.42 Million Ton in July

ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು ಜುಲೈ 2021 ಕ್ಕೆ ಹೋಲಿಸಿದರೆ ಜುಲೈ 2022 ರಲ್ಲಿ 54.25 ದಶಲಕ್ಷ ಟನ್ನಿಂದ 60.42 ದಶಲಕ್ಷ ಟನ್ಗೆ 11.37%ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿರಿ: Breaking News: IT ದಾಳಿಯಲ್ಲಿ ಬರೋಬ್ಬರಿ 390 ಕೋಟಿ ಮೌಲ್ಯದ ಅಕ್ರಮ ಹಣ, ಬಂಗಾರ, ವಜ್ರ ಪತ್ತೆ!

ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಜುಲೈನಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ (CIL) , ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (SCL) ಮತ್ತು ಕ್ಯಾಪ್ಟಿವ್ ಮೈನ್ಸ್ / ಇತರ ಸಂಸ್ಥೆಗಳು  ಕ್ರಮವಾಗಿ 47.33 ದಶಲಕ್ಷ ಟನ್ ಮತ್ತು 9.80 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸುವ ಮೂಲಕ 11.12% ಮತ್ತು 44.37% ನಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಆದರೂ, ಎಸ್ಸಿಸಿಎಲ್ ತಿಂಗಳ ಅವಧಿಯಲ್ಲಿ 32.51% ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

ಪ್ರಮುಖ 37 ಕಲ್ಲಿದ್ದಲು ಗಣಿಗಳಲ್ಲಿ, 24 ಗಣಿಗಳ ಉತ್ಪಾದನೆಯ ಪ್ರಮಾಣವು ಈ ವರ್ಷದ ಜುಲೈನಲ್ಲಿ ಶೇಕಡಾ 100 ಕ್ಕಿಂತ ಹೆಚ್ಚಾಗಿದೆ.  ಇನ್ನೂ ಏಳು ಗಣಿಗಳ ಉತ್ಪಾದನೆಯು ಶೇಕಡಾ 80 ರಿಂದ 100 ರ ನಡುವೆ ಇವೆ.

ಗುಡ್‌ನ್ಯೂಸ್‌: SSLC - PUC ವಿದ್ಯಾರ್ಥಿಗಳಿಗೆ ಇಲ್ಲಿದೆ ಬರೋಬ್ಬರಿ ₹1,25,000 ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಕೆ ಹೇಗೆ ಗೊತ್ತೆ?

ಅದೇ ಸಮಯದಲ್ಲಿ, ಕಲ್ಲಿದ್ದಲು ಸಾಗಾಣಿಕೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಜುಲೈ 2022 ರಲ್ಲಿ 62.49 ದಶಲಕ್ಷ ಟನ್ ನಿಂದ 67.81 ದಶಲಕ್ಷ ಟನ್ ಗೆ 8.51% ರಷ್ಟು ಹೆಚ್ಚಾಗಿದೆ.

ಜುಲೈ 2022 ರಲ್ಲಿ, ಸಿಐಎಲ್  ಮತ್ತು ಖಾಸಗಿ ಗಣಿಗಳು / ಇತರ ಸಂಸ್ಥೆಗಳು ಕ್ರಮವಾಗಿ 54.54 ಮತ್ತು 9.91 ದಶಲಕ್ಷ ಟನ್ ರವಾನೆ ಮಾಡುವ ಮೂಲಕ 8.17% % ಮತ್ತು 40.78% ಬೆಳವಣಿಗೆಯನ್ನು ದಾಖಲಿಸಿವೆ.

ರೈತರಿಗೆ ಸಿಹಿಸುದ್ದಿ: “ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ; 5 ಲಕ್ಷ ಬಹುಮಾನ! ಈಗಲೇ ಅರ್ಜಿ ಸಲ್ಲಿಸಿ..

ವಿದ್ಯುತ್ ಬೇಡಿಕೆಯ ಹೆಚ್ಚಳದಿಂದಾಗಿ ಜುಲೈ 2021 ರಲ್ಲಿ 49.92 ದಶಲಕ್ಷ ಟನ್ ಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ 58.45 ದಶಲಕ್ಷ ಟನ್ ಗೆ 17.09% ರಷ್ಟು ವಿದ್ಯುತ್ತಿನ ರವಾನೆಯಾಗಿದೆ.

ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಜುಲೈ 2022 ರಲ್ಲಿ 4.76% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಜುಲೈ 2022 ರಲ್ಲಿ ಒಟ್ಟಾರೆ ವಿದ್ಯುತ್ ಉತ್ಪಾದನೆಯು ಜುಲೈ 2021 ಕ್ಕಿಂತ 4.29% ಹೆಚ್ಚಾಗಿದೆ.