News

ರಾಜ್ಯದ ದಕ್ಷಿಣ ಭಾಗದಲ್ಲಿ ಧಾರಾಕಾರ ಮಳೆ; ಏ.7ರವರೆಗೂ ಮುಂದುವರೆಯುವ ಸಾಧ್ಯತೆ

04 April, 2023 6:35 PM IST By: Kalmesh T
Torrential rains in the southern part of the karnataka state; It is likely to continue till A.7

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಬಿಸಿಲಿನಿಂದ ಬಳಲುತ್ತಿದ್ದ ಜನಕ್ಕೆ ಮಳೆ ತಂಪೆರೆದಿದೆ. ಇನ್ನೂ ಏಪ್ರಿಲ್‌ 7ರವರೆಗೆ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಇದೆ.

ಈ ರಾಜ್ಯದ ರೈತರಿಗೆ ಸಿಹಿಸುದ್ದಿ: ಸರ್ಕಾರದಿಂದ 2000 ಯೂನಿಟ್ ಉಚಿತ ವಿದ್ಯುತ್ ಘೋಷಣೆ!

ಚಾಮರಾಜನಗರ, ರಾಮನಗರ, ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಕೋಲಾರದಲ್ಲಿ ಮಳೆಯಾಗಿದ್ದು, ಈ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಭಾರೀ ಮಳೆಯಾಗಿರುವ ವರದಿಯಾಗಿದೆ.

ಚಾಮರಾಜನಗರದ ಮಂಬಳ್ಳಿ ಗ್ರಾಮದಲ್ಲಿ 81.5 ಮಿಮೀ ಮಳೆಯಾಗಿದ್ದರೆ, ಕುಣಗಳ್ಳಿಯಲ್ಲಿ 64.5 ಮಿಮೀ ಮಳೆಯಾಗಿದೆ. ರಾಮನಗರದ ಕೋಡಿಹಳ್ಳಿಯಲ್ಲಿ 70.5 ಮಿಮೀ ಮಳೆಯಾಗಿರುವ ವರದಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಹೆಣ್ಣಾಗರದಲ್ಲಿ 67 ಮಿಮೀ ಮಳೆಯಾಗಿದ್ದು, ಥಾರಾಳುವಿನಲ್ಲಿ 64.5 ಮಿಮೀ ಮಳೆಯಾಗಿದೆ.

ವಿದೇಶದಲ್ಲೂ ಸದ್ದು ಮಾಡ್ತಿದೆ ಕನ್ನಡಿಗನ “ವೀಳ್ಯದೆಲೆ ಟೀ”!

ಇನ್ನು, ಮೈಸೂರಿನಲ್ಲಿ 57 ಮಿಮೀ ಮಳೆಯಾಗಿದ್ದು, ಮಂಡ್ಯದಲ್ಲಿ 45.5 ಮಿಮೀ, ಕೋಲಾರದಲ್ಲಿ 35.5 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ವರದಿ (Karnataka Weather Report) ಹೇಳಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ!

ಬೆಂಗಳೂರಿನ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ.

ಕೆಆರ್‌ ಮಾರುಕಟ್ಟೆ, ಕಾರ್ಪೊರೇಷನ್‌, ರಿಚ್ಮಂಡ್‌ ಸರ್ಕಲ್‌ ಸೇರಿ ಹಲವು ಕಡೆಗಳಲ್ ಲಿಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ವಿದ್ಯಾರಣ್ಯಪುರ, ನಾಗಸಂದ್ರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆ ಮತ್ತು ಬಲವಾದ ಗಾಳಿ ಬೀಸಿದೆ.

Jal Jeevan Mission: 60% ಶುದ್ಧ ಕುಡಿಯುವ ನೀರಿನ ಕವರೇಜ್

ಈ ನಡುವೆ, ನಗರದಲ್ಲಿ ಇನ್ನೂ ಎರಡು ದಿನ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್‌ 7ರವರೆಗೂ ಮಳೆ ಮುನ್ಸೂಚನೆ!

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್‌ 5ರವರೆಗೆ ದಕ್ಷಿಣ ಒಳನಾಡಿನಲ್ಲಿ, ಏಪ್ರಿಲ್‌ 6 ಮತ್ತು ಏಪ್ರಿಲ್‌ 7ರಂದು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಏಪ್ರಿಲ್‌ 3ರಂದು ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಕೋಲಾರ ಮತ್ತು ರಾಮನಗರ ಜಿಲ್ಲೆಯಲ್ಲಿ ಮಳೆಯಾಗಿದ್ದರೆ, ಏಪ್ರಿಲ್‌ 4 ಮತ್ತು ಏ.5 ರಂದು ಚಾಮರಾಜನಗರ ಮತ್ತು ಕೋಲಾರದಲ್ಲಿ ಮಳೆಯಾಗಲಿದೆ.

ಏಪ್ರಿಲ್‌ 6ರಂದು ಉತ್ತರ ಒಳನಾಡಿನ ಬೀದರ್‌, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಏಪ್ರಿಲ್‌ 7ರಂದು ಕರಾವಳಿ ಮತ್ತು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.