ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನಾಲ್ಕನೇ ಆವೃತ್ತಿ ಸಲುವಾಗಿ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸಮರರ್ಥ ಆಟಗಾರರ ಖರೀದಿ ಸಲುವಾಗಿ ಎಲ್ಲಾ ಎಂಟು ಫ್ರಾಂಚೈಸಿಗಳು ಹಣದ ಹರಿಸುತ್ತಿವೆ.
ಕೊರೋನಾ ಕಾಲದಲ್ಲೂ ಐಪಿಎಲ್ ಆಟಗಾರರ ಹರಾಜಿನಲ್ಲಿ ಲಕ್ಷ್ಮೀ ಕಟಾಕ್ಷ ಜೋರಾಗಿದೆ. ದಾಖಲೆ ಬೆಲೆಗೆ ದಕ್ಷಿಣ ಆಫ್ರಿಕಾದ ಬೌಲಿಂಗ್ ಆಲ್ ರೌಂಡರ್ ಕ್ರಿಸ್ ಮೋರಿಸ್ 16.25 ಕೋಟಿ ರುಪಾಯಿ ಕೊಟ್ಟು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದೆ.
ನಿರೀಕ್ಷೆಯಂತೆ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ 14.25 ಕೋಟಿ ರುಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಕರ್ನಾಟಕ ತಂಡದ ಆಲರೌಂಡರ್ ಗೌತಮ್ ಅವರನ್ನು ಚೆನೈ ಸೂಪರ್ ಕಿಂಗ್ಸ್ 9.25 ಕೋಟಿ ನೀಡಿ ಖರೀದಿಸಿದೆ.
ಈ ಬಾರಿ ಒಟ್ಟು 11 ಆಟಗಾರರು 2 ಕೋಟಿ ರೂ. ಮೂಲ ಬೆಲೆ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಶಕಿಬ್ ಲ್ ಹಸನ್ ಹಾಗೂ ಹರ್ಭಜನ್ ಸಿಂಗ್ ಅವರಂತಹ ಘಟಾನುಘಟಿ ಆಟಗಾರರು ಇದ್ದಾರೆ.
ಐಪಿಎಲ್ 14ನೇ ಆವೃತ್ತಿ- ಅಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರರ ಪಟ್ಟಿ
1.ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ) 16.25 ಕೋಟಿ ರೂಪಾಯಿ (ರಾಜಸ್ಥಾನ ರಾಯಲ್ಸ್ ಖರೀದಿಸಿದೆ)
2.ಗ್ಲೇನ್ ಮ್ಯಾಕ್ಸವೆಲ್ (ಆಸ್ಟ್ರೇಲಿಯಾ) 14.25 ಕೋಟಿ ರೂಪಾಯಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ)
3. ಜಯ್ ರಿಚರ್ಡಸನ್ (ಆಸ್ಟ್ರೇಲಿಯಾ) 14 ಕೋಟಿ (ಪಂಜಾಬ್ ಕಿಂಗ್ಸ್ ಖರೀದಿಸಿದೆ.)
4. ಕೆ. ಗೌತಮ್ (ಭಾರತ) 9.25 ಕೋಟಿ (ಚೆನೈ ಸೂಪರ್ ಕಿಂಗ್ಸ್ ಖರೀದಿಸಿದೆ)
5. ರಿಲೆ ಮೆರಿಡಿತ್ (ಆಸ್ಟ್ರೇಲಿಯಾ) 8 ಕೋಟಿ (ಪಂಜಾಬ್ ಕಿಂಗ್ಸ್ ಖರೀದಿಸಿದೆ)