News

ರೈತರು ಅವಶ್ಯವಾಗಿ ತಿಳಿದುಕೊಳ್ಳಲೇಬೇಕಾದ 4 ಯೋಜನೆಗಳು ಇವು!

09 May, 2023 12:12 PM IST By: Maltesh
Top 4 Agriculture Schemes in india

ರೈತರು  ತಮ್ಮ ಜಮೀನಿನಲ್ಲಿ ಆಧುನಿಕ ಮತ್ತು ಸುಧಾರಿತ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಉತ್ತಮಗೊಳಿಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರವೂ ಅವರಿಗೆ ಸಂಪೂರ್ಣ ಸಹಾಯ ಮಾಡುತ್ತಿದೆ. ಕೃಷಿಯಲ್ಲಿ ರೈತನಿಗೆ ಆರ್ಥಿಕವಾಗಿ ಸಹಾಯ ಮಾಡಲು ದೇಶದಾದ್ಯಂತ ಹಲವಾರು ರೀತಿಯ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಈ ಸರ್ಕಾರದ ಯೋಜನೆಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಇಂದು ನಾವು ನಿಮಗೆ  ಸರ್ಕಾರದ ಕೆಲವು ಪ್ರಮುಖ ಕೃಷಿ ಯೋಜನೆಗಳನ್ನು ಇಲ್ಲಿ ನೀಡಿದ್ದೇವೆ. ಇದರಿಂದ ರೈತರಿಗೆ ಉತ್ತಮ ಸಬ್ಸಿಡಿ ಪಡೆಯಲು ಮತ್ತು ಆಧುನಿಕ ತಂತ್ರಜ್ಞಾನವನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳಲಿ ಸಹಾಯ ಮಾಡುತ್ತದೆ. ಹಾಗಾದರೆ ಯಾವುವು ಆ ಯೋಜನೆಗಳು ಅವುಗಳವ ಬಗ್ಗೆ ತಿಳಿಯೋಣ...

ಬೆಳೆ ವಿಮಾ ಯೋಜನೆ

ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯು ದೇಶದ ರೈತರ ಹಿತದೃಷ್ಟಿಯಿಂದ ನಡೆಸುತ್ತಿರುವ ಯೋಜನೆಗಳಲ್ಲಿ ಒಂದಾಗಿದೆ, ಈ ಯೋಜನೆಯಡಿಯಲ್ಲಿ, ನೈಸರ್ಗಿಕ ಕಾರಣಗಳಾದ ಪ್ರವಾಹ, ಮಳೆ, ಭೂಕುಸಿತ, ಅನಾವೃಷ್ಟಿ ಇತ್ಯಾದಿ ಅಥವಾ ಕೀಟಗಳಿಂದ ಉಂಟಾಗುವ ನಷ್ಟಗಳಿಗೆ ಸರ್ಕಾರದಿಂದ ಪರಿಹಾರವನ್ನು ನೀಡಲಾಗುತ್ತದೆ. ಇದಕ್ಕಾಗಿ ರೈತರ ವಿಮಾ ಯೋಜನೆಗೆ ನೋಂದಣಿ ಮಾಡುವುದು ಅವಶ್ಯಕ. ಇದಕ್ಕಾಗಿ ರೈತರು  ಅಧಿಕೃತ ವೆಬ್‌ಸೈಟ್ pmfby.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಧಾನ ಮಂತ್ರಿ ಕೃಷಿ ಉಡಾನ್ ಯೋಜನೆ

ರೈತ ಬಂಧುಗಳು ತಮ್ಮ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ದು ಮಾರಾಟ ಮಾಡಬೇಕಾಗಿದೆ. ಈ ಸಮಯದಲ್ಲಿ ಅವರು ಅನೇಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಅವರ ಉತ್ಪನ್ನಗಳು ಮಾರುಕಟ್ಟೆಯನ್ನು ತಲುಪುವ ಮೊದಲು ಹಾಳಾಗುತ್ತವೆ. ರೈತರ ಈ ಸಮಸ್ಯೆಯನ್ನು ಪರಿಹರಿಸಲು ಪ್ರಧಾನ ಮಂತ್ರಿ ಕೃಷಿ ಉಡಾನ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಬಹುದು. ಇದಕ್ಕಾಗಿ ನೀವು ಕೃಷಿ ಸಚಿವಾಲಯದ ಅಧಿಕೃತ ವೆಬ್‌ಸೈಟ್ https://agricoop.nic.in/ ಗೆ ಹೋಗಬೇಕು .

PM Kisan ಯೋಜನೆ

ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯನ್ನು ದೇಶಾದ್ಯಂತ ಗಿ ಜಾರಿಗೊಳಿಸಲಾಗಿದೆ. ದೇಶದ 10 ಕೋಟಿಗೂ ಹೆಚ್ಚು ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಇದುವರೆಗೆ 13 ಕಂತುಗಳಲ್ಲಿ 2000 ರೂ.ಗಳನ್ನು ಸರಕಾರ ರೈತರಿಗೆ ನೀಡಿದ್ದು, ಇದೀಗ ಈ ಯೋಜನೆಯಡಿಯಲ್ಲಿ 14ನೇ ಕಂತಿನ ಶೀಘ್ರ ಘೋಷಣೆ ಮಾಡಲಿದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು, ನೀವು ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಬಹುದು.

ಪಶು ಕಿಸಾನ್ ಕ್ರೆಡಿಟ್ ಕಾರ್ಡ್  ಯೋಜನೆ

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು  ಹಸು, ಎಮ್ಮೆ, ಮೇಕೆ, ಕುರಿ ಮುಂತಾದ ಪ್ರಾಣಿಗಳನ್ನು ಸಾಕುವವರು ಈ ಯೋಜನೆಗೆ ಅರ್ಹರು. ಇಂತಹ ಸಣ್ಣ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗದ ರೈತ ಬಂಧುಗಳಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ನೀಡಲಾಗುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರವು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ಈಗ ಲಕ್ಷಾಂತರ ರೈತರಿಗೆ ಪ್ರಯೋಜನವನ್ನು ನೀಡುತ್ತಿದೆ. ಈ ಯೋಜನೆಗಾಗಿ, ನೀವು ಯೋಜನೆಯ ಅಧಿಕೃತ ವೆಬ್‌ಸೈಟ್ https://dahd.nic.in/kcc ಗೆ ಹೋಗಬೇಕು .