ಇದೀಗ ತೊಗರಿ ಬೆಲೆ ಬೆಲೆ ಏರಿಕೆಯಾಗುತ್ತಿದ್ದ್ದು , ರೈತರ ಮೊಗದಲ್ಲಿ ಮಂದಹಾಸ ಮೂಡಿದೆ . ರೈತರು ಇದೀಗ ಮತ್ತೆ ತೊಗರಿ ಬೆಳೆಯಲು ಪ್ರಾಂಭಿಸಿದ್ದಾರೆ .
ಇದೀಗ ಸರ್ಕಾರ ತೊಗರಿ ಕೃಷಿಕರ ಸಹಾಯಕ್ಕೆ ನಿಂತಿದ್ದು, ತೊಗರಿ ಬೆಳೆಗಾರರಿಗೂ ಮತ್ತೆ ಮರಳಿ ತೊಗರಿ ಬೆಳೆಯತ್ತ ಮುಖ ಮಾಡುವಂತೆ ಮಾಡಿದೆ. ಕಲಬುರಗಿಯ ಎಪಿಎಂಸಿ ಅಡತ್ ಮಾಲೀಕರು ರೈತರಿಗೆ ತೊಗರಿ ಮೇಲೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ
ಕಲ್ಬುರ್ಗಿ ಎ ಪಿ ಎಮ್ ಸಿ ಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 8,400 ರೂಪಾಯಿ ದರ ನಿಗದಿ ಮಾಡಲಾಗಿದ್ದು, ಇದರಿಂದ ರೈತರು ಇದೀಗ ತಾವು ಬೆಳೆದ ತೊಗರಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕ್ವಿಂಟಲ್ ತೊಗರಿಗೆ ಸರ್ಕಾರ ನಿಗದಿಪಡಿಸಿದ ಎಂಎಸ್ಪಿ ದರ 6,600 ರೂಪಾಯಿ ಮಾತ್ರ. ಆದರೆ ಎಪಿಎಂಸಿ ಅಡತ್ಗಳಲ್ಲಿ 8,400 ರೂ. ಸಿಗುತ್ತಿದ್ದು, ರೈತರು ನೆಮ್ಮದಿಯಾಗಿ ನಿಟ್ಟುಸಿರು ಬಿಡುವಂತಾಗಿದೆ.
2. ರಾಜ್ಯದಾದ್ಯಂತ ಸುಮಾರು 2.6 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ (ಐಪಿ ಸೆಟ್ ಗಳು) ಶಕ್ತಿ ತುಂಬಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಶೀಘ್ರದಲ್ಲೇ ಸೌರಶಕ್ತಿಯನ್ನು ಬಳಸಿಕೊಳ್ಳಲಿದೆ.
ಈ ಯೋಜನೆಯನ್ನುಪಿಎಂ-ಕುಸುಮ್ ಯೋಜನೆಯಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು,ಬೆಸ್ಕಾಂ ವ್ಯಾಪ್ತಿಯಲ್ಲಿ ಸಬ್ ಸ್ಟೇಷನ್ ಮಟ್ಟದಲ್ಲಿ ಗ್ರಿಡ್ ಸಂಪರ್ಕಿತ ವಿತರಣಾ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಏಜೆನ್ಸಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್‍ಸೆಟ್‍ಗಳನ್ನು ನೀಡಲಾಗುತ್ತಿದ್ದು, ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಕೃಷಿ ಕೆಲಸಗಳಿಗೆ ಸೌರಚಾಲಿತ ಕೃಷಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣದಲ್ಲಿ ಮಾತ್ರ ಲಭ್ಯವಾಗುವ ಲಿಂಕ್ ಮೂಲಕವೇ ನೊಂದಾಯಿಸಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ :5 ದಿನದಲ್ಲಿ ಪ್ಯಾನ್- ಆಧಾರ್ ಲಿಂಕ್ ಮಾಡದಿದ್ದರೆ ಬೀಳಲಿದೆ 10,000 ಸಾವಿರ ದಂಡ!
3. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ರೈತರು ಪಾವತಿಸಿದ ಪ್ರತಿ 100 ರೂ ಪ್ರೀಮಿಯಂಗೆ ಸುಮಾರು 514 ರೂಗಳನ್ನು ಕ್ಲೈಮ್‌ಗಳಾಗಿ ಸ್ವೀಕರಿಸಿದ್ದಾರೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸತ್ತಿಗೆ ತಿಳಿಸಿದ್ದಾರೆ. 2016 ರಲ್ಲಿ ಪಿಎಂಎಫ್‌ಬಿವೈ ಅನುಷ್ಠಾನಗೊಂಡ ನಂತರ, ಸುಮಾರು 38 ಕೋಟಿ ರೈತ ಅರ್ಜಿದಾರರು ದಾಖಲಾಗಿದ್ದಾರೆ ಮತ್ತು 12.37 ಕೋಟಿ (ತಾತ್ಕಾಲಿಕ) ಹಕ್ಕುಗಳನ್ನು ಸ್ವೀಕರಿಸಿದ್ದಾರೆ ಎಂದು ರಾಜ್ಯಸಭೆಗೆ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ, ಸುಮಾರು 25,252 ಕೋಟಿ ರೂ.ಗಳನ್ನು ರೈತರು ತಮ್ಮ ಪ್ರೀಮಿಯಂನ್ನು ಪಾವತಿಸಿದ್ದಾರೆ, ಹಾಗು 1,30,015 ಕೋಟಿ ರೂ.ಗಿಂತ ಹೆಚ್ಚಿನ ಕ್ಲೈಮ್‌ಗಳನ್ನು (ತಾತ್ಕಾಲಿಕ) ಪಾವತಿಸಲಾಗಿದೆ. ಹೀಗಾಗಿ, ರೈತರು ಪಾವತಿಸಿದ ಪ್ರತಿ 100 ರೂಪಾಯಿ ಪ್ರೀಮಿಯಂಗೆ ಅವರು ಸುಮಾರು 514 ರೂ.ಗಳನ್ನು ಕ್ಲೈಮ್‌ಗಳಾಗಿ ಸ್ವೀಕರಿಸಿದ್ದಾರೆ ಎಂದು ಸಚಿವರು ಹೇಳಿದರು. ರೈತರಿಗೆ ಹೆಚ್ಚಿನ ಪ್ರೀಮಿಯಂ ದರಗಳು ಮತ್ತು ವಿಮಾ ಮೊತ್ತದಲ್ಲಿನ ಕಡಿತದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ PMFBY ಅನ್ನು ಪ್ರಾರಂಭಿಸಲಾಗಿದೆ.