News

ಟೊಮೆಟೊ ದರದಲ್ಲಿ ಭಾರೀ ಹೆಚ್ಚಳ: ದೇಶಾದ್ಯಂತ ₹120ರ ಗಡಿ ದಾಟಿ ದಾಖಲೆ

28 June, 2023 12:54 PM IST By: Kalmesh T
Tomato price massively increased across the country

Tomato price hike: ಈಗಾಗಲೇ ಸಾಕಷ್ಟು ವಸ್ತುಗಳ ಬೆಲೆ ಗಗನಕ್ಕೇರಿ, ಜನ ಸಂಕಷ್ಟದಲ್ಲೆ ಜೀವಿಸುತ್ತಿದ್ದರು. ಇದರ ಬೆನ್ನಲ್ಲೆ ಏಕಾಏಕಿ ದೇಶಾದ್ಯಂತ ಟೊಮೆಟೊ ದರದಲ್ಲಿ ಭಾರೀ ಹೆಚ್ಚಳವಾಗುವ ಮೂಲಕ ಜನತೆಗೆ ಮತ್ತೆ ಬೆಲೆ ಹೆಚ್ಚಳದ ಬರೆ ಬಿದ್ದಿದೆ.

Massive increase in tomato prices : ಬೆಲೆ ಏರಿಕೆ ಇತ್ತೀಚಿಗೆ ತುಸು ಹೆಚ್ಚೆ ಆಗುತ್ತಿದೆ. ದಿನದಿಂದ ದಿನಕ್ಕೆ ಯಾವುದಾದರೂ ಒಂದು ವಸ್ತುವಿನ ಬೆಲೆ ಏಉತ್ತಲೆ ಇರುತ್ತದೆ. ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗುವಷ್ಟು ಬೆಲೆ ಹೆಚ್ಚಳವಾಗಿವೆ.

ಬೆಲೆ ದೇಶಾದ್ಯಂತ ಹೆಚ್ಚಳವಾಗಿದ್ದು, ಇದರೊಂದಿಗೆ ಇತರೆ ತರಕಾರಿಗಳ ಬೆಲೆಯಲ್ಲೂ ಕೊಂಚ ಹೆಚ್ಚಳವಾಗಿದೆ. ರಾಜ್ಯದಲ್ಲಿ ಮುಂಗಾರು ತಡವಾಗಿ ಈಗಾಗಲೇ ಬಿತ್ತನೆ ಕಾರ್ಯಗಳು ಅಷ್ಟೇನು ಚುರುಕು ಪಡೆದುಕೊಂಡಿಲ್ಲ.

ಹೀಗಾಗಿ ತರಕಾರಿ ಬೆಳೆಯುತ್ತಿದ್ದ ರೈತರು ಕೂಡ ಮಳೆ ಕೊರತೆಯಿಂದ ಬಿತ್ತನೆಗೆ ಮುಂದಾಗದ ಕಾರಣದಿಂದ ಹಾಗೂ ಹೆಚ್ಚಿನ ರಫ್ತು ಆಗುತ್ತಿರುವುದರಿಂದಲೂ ಟೊಮೆಟೊ ದರದಲ್ಲಿ ಹೆಚ್ಚಳವಾಗಿದೆ ಎನ್ನುತ್ತವೆ ವರದಿಗಳು.

Price hike in tomato : ಬರೋಬ್ಬರಿ 100 ರಿಂದ 120ರವರೆಗೆ ಹೆಚ್ಚಿದ ಬೆಲೆ!

35ರಿಂದ 40 ರೂಪಾಯಿವರೆಗೆ ಇದ್ದಂತಹ ಬೆಲೆ ಇದೀಗ ರಾತ್ರೋರಾತ್ರಿ 120 ರೂಪಾಯಿವರೆಗೆ ಹೆಚ್ಚಳವಾಗಿರುವುದರಿಂದ ಜನತೆ ಕಂಗಾಲಾಗಿದೆ.

ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಟೊಮೆಟೊ ಬೆಲೆ 80 ರೂಪಾಯಿವರೆಗೆ ಏರಿಕೆಯಾಗಿದೆ. ಮಧ್ಯ ಪ್ರದೇಶದಲ್ಲಿ 110 ರೂಪಾಯಿವರೆಗೆ ಒಂದು ಕೆಜಿಗೆ ಮಾರಾಟವಾಗುತ್ತಿದೆ.

Tomato Price : ಕಳೆದ ಕೆಲವು ತಿಂಗಳ ಹಿಂದೆ ಟೊಮೆಟೊ ದರ ಕುಸಿತಗೊಂಡ ಕಾರಣ ಸಾಕಷ್ಟು ರೈತರು ತಾವು ಬೆಳೆದ ಟೊಮೆಟೊಗಳನ್ನು ರಸ್ತೆಗೆ ಸುರಿದು ಹೋಗಿದ್ದರು.

ಇದೀಗ ಟೊಮೆಟೊ ದರ ಕಂಡು ಖುದ್ದು ರೈತರು ಸಹ ಬೆರಗಾಗಿದ್ದಾರೆ. ರೈತರ ಬೆಳೆ ಇರುವಾಗ ಈ ಬೆಲೆಗಳು ಸಿಕ್ಕರೆ ಉತ್ತಮ ಎನ್ನುತ್ತಾರೆ ರೈತರು.