ಭಾರತೀಯ ಹವಾಮಾನ ಇಲಾಖೆಯ ಬೆಂಗಳುರು ವಲಯ ಕಚೇರಿ 14 ನೇ ಡಿಸೆಂಬರ್ 2023 ರ ಮುಂಜಾನೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆಯ ವರದಿಯನ್ನು ನೀಡಿದೆ.
ಮುಂದಿನ 24 ಘಂಟೆಗಳು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಭಾಗಗಳಲ್ಲಿ ಮಳೆ ಬರುವ ಬಹಳಷ್ಟು ಸಂಭವವಿದೆ ಇದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆಯ ಸಂಭವವಿದೆ ಇದೆ ಎಂದು ಇಲಾಖೆ ಅಂದಾಜಿಸಿದೆ.
ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಣಹವೆಯ ಸಂಭವವಿದೆ ಇದೆ.
ಗುಡುಗು ಮುನ್ನೆಚ್ಚರಿಕೆ: ಇಲ್ಲ ಭಾರಿ ಮಳೆ ಮುನ್ನೆಚ್ಚರಿಕೆ: ಇಲ್ಲ ತಾಪಮಾನ ಎಚ್ಚರಿಕೆ: ಇಲ್ಲ ಮೀನುಗಾರರಿಗೆ ಎಚ್ಚರಿಕೆ: ಇಲ್ಲ
14 ನೇ ಡಿಸೆಂಬರ್ 2023 ರ ಮುಂಜಾನೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಂಭವವಿದೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಂಭವಗಳಿವೆ.
ಮುಂದಿನ 48 ಗಂಟೆಗಳು: ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಂಭವವಿದೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಂಭವಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇತ್ತ ದೇಶದಲ್ಲಿ ಹವಾಮಾನ ವರದಿಯನ್ನು ನೋಡುವುದಾದರೆ ಉತ್ತರ ಭಾರತದ ರಾಜ್ಯಗಳಲ್ಲಿ ಇದೀಗೆ ಚಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಳಿಯ ಪರಿಣಾಮ ಸಾಮಾನ್ಯವಾಗಿತ್ತು ಡಿಸೆಂಬರ್ 2 ವಾರದಿಂದ ಚಳಿಯು ತೀವ್ರಗೊಂಡಿದ್ದು ಜನರು ಸ್ವೇಟರ್, ಟೋಪಿ, ಕಾಲುಗವಸುಗಳಿಲ್ಲದೆ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣಕ್ಕೆ ತಂಪಾದ ಗಾಳಿ ಬೀಸುತ್ತಿದೆ, ಇದರಿಂದಾಗಿ ತಾಪಮಾನವು ಈ ಭಾಗದಲ್ಲಿ ನಿರಂತರವಾಗಿ ಕುಸಿಯುತ್ತಿದೆ.