ಚಿನ್ನ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ. ವಿಶೇಷವಾಗಿ ನಾರಿಮಣಿಯರಿಗೆ ಚಿನ್ನ ಅಂದ್ರೆ ಎಲ್ಲಿಲ್ಲದ ಒಲವು. ಆದರೆ ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಬಂಪರ್ ಆಗಿ ಏರಿಕೆಯಾಗುತ್ತಲೆ ಇದೆ. ಸಾಕಷ್ಟು ಜನ ಬಂಗಾರ ಕೊಂಡುಕೊಳ್ಳಬೇಕು ಅಂದ್ರ ಕೂಡ ಅದರ ರೇಟ್ ಆಭರಣದ ಅಂಗಡಿಗೂ ಕೂಡ ಹೋಗದಷ್ಟು ಕಟುವಾಗಿಸುತ್ತೆ. ಹೌದು ಬಂಗಾರ ಇತ್ತೀಚಿನ ದಿನಗಳಲ್ಲಿ ಬರೋಬ್ಬರಿ 50 ಸಾವಿರ ಗಡಿ ದಾಟಿ ಮುನ್ನುಗ್ಗುತ್ತಿದೆ. ಇದೆಲ್ಲದರ ನಡುವೆ ಇಂದು ಬಂಗಾರದ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ನಿಮ್ಮ ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಇರಬೇಕು ತಿಳಿದುಕೊಳ್ಳಿ, ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ
Gold Price Today : ನಿನ್ನೆ ಅಂದ್ರೆ ವಾರದ ಎರಡನೇ ದಿನವಾದ ಸೋಮವಾರ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ ಮಂಗಳವಾರವಾದ ಇವತ್ತು ಬಂಗಾರದ ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗಿದೆ. ಹೌದು. ಬಂಗಾರದ ಬೆಲೆಯಲ್ಲಿ ಸುಮಾರು 200 ರೂಪಾಯಿಗಳಷ್ಟು ಇಳಿಕೆಯಾಗಿದೆ ಎನ್ನುತ್ತಿವೆ ಮಾರುಕಟ್ಟೆ ಮೂಲಗಳು. 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 51,810ರೂಪಾಯಿ ಆಗಿದೆ. ಇತ್ತ 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,580 ರೂಪಾಯಿ ಆಗಿದೆ.
ಸದ್ಯದ ಮಾಹಿತಿ ಪ್ರಕಾರ ದೇಶದ ಪ್ರಮುಖ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂತಿದೆ.
22 ಕ್ಯಾರೆಟ್ ಚಿನ್ನದ ಬೆಲೆ-48,250
24 ಕ್ಯಾರೆಟ್ ಚಿನ್ನದ ಬೆಲೆ-52,630
ಮುಂಬಯಿ
22 ಕ್ಯಾರೆಟ್ ಚಿನ್ನದ ಬೆಲೆ -47,500
24 ಕ್ಯಾರೆಟ್ ಚಿನ್ನದ ಬೆಲೆ -51,860
LIC ನೇಮಕಾತಿ: 80 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ..80 ಸಾವಿರ ಸಂಬಳ
ದೆಹಲಿ
22 ಕ್ಯಾರೆಟ್ ಚಿನ್ನದ ಬೆಲೆ-47,550
24 ಕ್ಯಾರೆಟ್ ಚಿನ್ನದ ಬೆಲೆ-52,180
ಬೆಂಗಳೂರು
22 ಕ್ಯಾರೆಟ್ ಚಿನ್ನದ ಬೆಲೆ-47,680
24 ಕ್ಯಾರೆಟ್ ಚಿನ್ನದ ಬೆಲೆ-51,945
ವಾರಾಂತ್ಯದಲ್ಲಿ ಚಿನ್ನ ಖರೀದಿ ಹೇಗೆ..?
ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಅನ್ನೋದನ್ನು ನೀವು ಪ್ರತಿ ದಿನ ಸಮಾಜಿಕ ಜಾಲತಾಣಗಳ ಮೂಲಕ ಅಥವಾ ಮಾಧ್ಯಮಗಳ ಮೂಲಕ ತಿಳಿದುಕೊಳ್ಳಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ನಾವು ಯಾವುದೇ ನಿರ್ದಿಷ್ಟ ದಿನವನ್ನು ಟಾರ್ಗೆಟ್‌ಮಾಡಿಕೊಂಡು ಖರೀದಿಗೆ ಹೋಗುವುದು ಉತ್ತಮವಲ್ಲ.
22 ಮತ್ತು 24 ಕ್ಯಾರೆಟ್ ನಡುವಿನ ಭಿನ್ನತೆಗಳೇನು..?
ಶುದ್ಧತೆ: 24K 99.9 % ಶುದ್ಧತೆಯನ್ನು ಸೂಚಿಸುತ್ತದೆ ಮತ್ತು 22K ಸರಿಸುಮಾರು 91 ಪ್ರತಿಶತ ಶುದ್ಧ ಚಿನ್ನವಾಗಿದೆ, ಇತರ 9% ತಾಮ್ರ, ಬೆಳ್ಳಿ, ಸತು, ಇತ್ಯಾದಿ ಇತರ ಲೋಹಗಳನ್ನು ಒಳಗೊಂಡಿರುತ್ತದೆ.
ಬಾಳಿಕೆ: 24K ಚಿನ್ನವು ಬಣ್ಣದಲ್ಲಿ ಅದ್ಭುತವಾಗಿದ್ದರೂ, 24K ಚಿನ್ನದ ಆಭರಣಗಳು (ತಯಾರಿಸಿದರೆ) 22K ಚಿನ್ನದ ಆಭರಣಗಳಂತೆ ಬಾಳಿಕೆ ಬರುವುದಿಲ್ಲ. ಏಕೆಂದರೆ 24K ಚಿನ್ನವು ಸವೆತ ಮತ್ತು ಕಣ್ಣೀರನ್ನು ವಿರೋಧಿಸಲು ತುಂಬಾ ಮೃದುವಾಗಿರುತ್ತದೆ. 22 ಕೆ ಚಿನ್ನದಲ್ಲಿ ಹೆಚ್ಚುವರಿ ಲೋಹಗಳ ಉಪಸ್ಥಿತಿಯು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡಲು ಸಹಾಯ ಮಾಡುತ್ತದೆ.
ವೆಚ್ಚ: 24K ಚಿನ್ನವು 99.9% ಶುದ್ಧವಾಗಿರುವುದರಿಂದ, ಇದು 22K ಚಿನ್ನಕ್ಕಿಂತ ಹೆಚ್ಚು ದುಬಾರಿಯಾಗಿದೆ