ಈಚೆಗಷ್ಟೇ ಚಿನ್ನದ ದರದಲ್ಲಿ ಇಳಿಕೆ ಆಗಿದ್ದರಿಂದ ಜನ ತುಸು ನಿರಾಳರಾಗಿದ್ದರು. ಇದೀಗ ಮತ್ತೆ ಚಿನ್ನದ ದರದಲ್ಲಿ ಏರಿಳಿತವಾಗಿರುವುದು ವರದಿ ಆಗಿದೆ.
ಮಾರ್ಚ್ ಕೊನೆಯ ವಾರದಲ್ಲಿ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇದೆ. ಕಳೆದ ಮೂರು ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಚಿನ್ನದ ದರ ಇಳಿಕೆ ಆಗಿತ್ತು.
ಇದೀಗ ಪುನಃ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದು ಚಿನ್ನ ಖರೀದಿದಾರರಲ್ಲಿ ನಿರಾಸೆ ಮೂಡಿಸಿದೆ.
Sarus Crane ಒಂದು ವರ್ಷ ಅಪರೂಪದ ಸಾರಸ್ ಕೊಕ್ಕರೆ ಸಾಕಿದ ರೈತ: ಈಗ ಫಜೀತಿ!
ಇನ್ನು ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿತ್ತು. ಒಂದು ಗ್ರಾಂ ಚಿನ್ನದ ಬೆಲೆಯು ಗುರುವಾರ 5,420 ರೂಪಾಯಿ ಇತ್ತು.
ಆದರೆ, ಶುಕ್ರವಾರದ ವೇಳಗೆ ಚಿನ್ನದ ಬೆಲೆ 5,480 ರೂಪಾಯಿ ಆಗಿದ್ದು, ಒಂದೇ ದಿನದಲ್ಲಿ 60 ರೂಪಾಯಿ ಹೆಚ್ಚಳವಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್ ಚಿನ್ನದ ಬೆಲೆ (10 Grms) 54,850 ರೂಪಾಯಿ ಆಗಿದೆ.
Rain Fall ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ!
ಇನ್ನು ಮಾರುಕಟ್ಟೆಯಲ್ಲಿ ಚಿನ್ನದ ದರವನ್ನು ನೋಡುವುದಾದರೆ, 22 ಕ್ಯಾರಟ್ ಆಭರಣ ಚಿನ್ನದ ಬೆಲೆಯು ಒಂದು ಗ್ರಾಂಗೆ 5,480 ರೂಪಾಯಿ ಆಗಿದೆ.
ಅಲ್ಲದೇ 24 ಕ್ಯಾರಟ್ ಬಂಗಾರದ ಬೆಲೆ 5,978 ರೂಪಾಯಿ ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಎಂಟು ಗ್ರಾಂಗೆ 43,840 ರೂಪಾಯಿ ಆಗಿರುವುದು ವರದಿ ಆಗಿದೆ.
ಬೆಳ್ಳಿ ಬೆಲೆಯಲ್ಲೂ ಏರಿಕೆ
ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಹೆಚ್ಚಳ ಕಂಡುಬಂದಿದ್ದು, ಜನ ದಂಗಾಗುವಂತಾಗಿದೆ.
ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿ ಏಕಕಾಲಕ್ಕೆ ಹೆಚ್ಚಳವಾಗುವುದು ಅಪರೂಪ. ಬೆಳ್ಳಿ ಸಾಮಾನ್ಯವಾಗಿ ಹೆಚ್ಚಳವಾಗುವುದಿಲ್ಲ.
ಬೆಳ್ಳಿ ದರವು ಸಾಮಾನ್ಯ ಮಟ್ಟದಲ್ಲಿ ಏರಿಕೆ ಆಗುವುದು ವರದಿ ಆಗುತ್ತಿರುತ್ತದೆ.
ಆದರೆ, ಈ ಬಾರಿ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಬೆಳ್ಳಿ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿರುವುದು ವರದಿ ಆಗಿದೆ.
ಶುಕ್ರವಾರ ಕೆಜಿ ಮೇಲೆ 1000 ರೂಪಾಯಿ ಹೆಚ್ಚಾಗುವ ಮೂಲಕ ಬೆಳ್ಳಿ ಬೆಲೆಯೂ ಬರೋಬ್ಬರಿ ಕೆ.ಜಿಗೆ 72,600 ರೂಪಾಯಿ ಆಗಿದೆ!
ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿ 10gmಗೆ 754, ರೂಪಾಯಿ , 100gmಗೆ 7,540 ರೂಪಾಯಿ ಆಗಿದ್ದರೆ, 1000gmಗೆ ಬೆಳ್ಳಿ ಬೆಲೆಯು 75,400 ರೂಪಾಯಿ ತಲುಪಿದೆ.
ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲೂ ಬೆಳ್ಳಿ ದರ ಏರಿಳಿತವಾಗುತ್ತಿರುವುದು ವರದಿ ಆಗಿದೆ.
ಶುಕ್ರವಾರ ನಗರದಲ್ಲಿ ಪ್ರತಿ 10gm ಬೆಳ್ಳಿಯ ದರವು 754, ರೂಪಾಯಿ ಆಗಿದ್ದು, 1000gmಗೆ ಬೆಳ್ಳಿ ಬೆಲೆಯು 75,400 ರೂಪಾಯಿ ಮುಟ್ಟಿದೆ.
ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ: ನಿಮ್ಮ ಖಾತೆಗೆ ಇಂದು ಬೀಳಲಿದೆ ವಿದ್ಯಾನಿಧಿ ಹಣ