ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಮಿಳುನಾಡು ಸರ್ಕಾರ ರಾಜ್ಯದ ರೈತರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ. ಹೌದು: ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ತಮಿಳುನಾಡಿನಲ್ಲಿ, ಎಐಎಡಿಎಂಕೆ ಸರ್ಕಾರ 12,110 ಕೋಟಿ ಮೊತ್ತದ ಕೃಷಿ ಸಾಲ ಮನ್ನಾ ಮಾಡುವುದಾಗಿ ಶುಕ್ರವಾರ ಘೋಷಿಸಿದೆ.
ಸಹಕಾರಿ ಬ್ಯಾಕುಂಗಳಿಂದ ಸಾಲ ಪಡೆದಿರುವ ತಮಿಳುನಾಡು ರಾಜ್ಯದ 16.43 ಲಕ್ಷ ರೈತರಿಗೆ ಈ ಸಾಲ ಮನ್ನಾ ಯೋಜನೆಯಿಂದ ಲಾಭ ವಾಗಲಿದೆ ಎಂದು ಮುಖ್ಯಮಂತ್ರಿ ಕೆ.ಪಳನಿ ಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವನ್ನು ತಿಳಿಸಿದ ಅವರು, ತತಕ್ಷಣದಿಂದಲೇ ಸಾಲಮನ್ನಾ ಯೋಜನೆ ಜಾರಿಗೆ ಬರಲಿದ್ದು, ಇದಕ್ಕೆ ಅಗತ್ಯವಾದ ಹಣಕಾಸನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ನೀಡಿರುವ ಭರವಸೆ ಗಳನ್ನು ಈಡೇರಿಸುವ ಜೊತೆಗೆ, ಹೊಸ ದಾಗಿ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಏಕೈಕ ಪಕ್ಷವೆಂದರೆ ಎಐಎಡಿಎಂಕೆ ಮಾತ್ರವಾಗಿದೆ. ಚಂಡಮಾರುತ, ಅಕಾಲಿಕ ಮಳೆ, ಬೆಳೆಹಾನಿ ಮತ್ತು ಲೌಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ನಿಡುವುದು ಅಗತ್ಯವಾಗಿದೆ ಎಂದಿದ್ದಾರೆ.