News

ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 2 ಜಿಬಿ ಉಚಿತ ಡಾಟಾ

11 January, 2021 9:38 AM IST By:
free data

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರೀಲ್ ತಿಂಗಳ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಪ್ರತಿನಿತ್ಯ ಎರಡು ಜಿಬಿ ಡಾಟಾ ಘೋಷಿಸಲಾಗಿದೆ.

ಹೌದು, ತಮಿಳುನಾಡು ಸರ್ಕಾರ ಏಪ್ರೀಲ್ ನಲ್ಲಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಉಚಿತ ಡಾಟಾ ನೀಡಲು ಘೋಷಿಸಿದೆ. ರಾಜ್ಯದ 9.69 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತವಾಗಿ 2 ಜಿಬಿ ಡೇಟಾ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಭಾನುವಾರ ಹೇಳಿದ್ದಾರೆ.

ಏಪ್ರಿಲ್‌ ವರೆಗೆ ಆನ್‌ಲೈನ್‌ ತರಗ ತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ. ಕೋವಿಡ್‌–19ನಿಂದಾಗಿ ಅನೇಕ ತಿಂಗಳು ಕಾಲ ತರಗತಿಗಳು ನಡೆದಿಲ್ಲ. ಈಗ ಆನ್‌ಲೈನ್‌ ಮೂಲಕ ಪಾಠ ಹೇಳಲಾಗುತ್ತಿದೆ. ಈ ಕಾರಣಕ್ಕೆ ಉಚಿತ ಡೇಟಾ ನೀಡಲು ನಿರ್ಧರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ,ಅನುದಾನಿತ ಕಾಲೇಜುಗ ಳಲ್ಲಿ ಓದುತ್ತಿರುವ 9,69,047 ವಿದ್ಯಾರ್ಥಿಗಳಿಗೆ ಡೇಟಾ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.