ದೇಶಾದ್ಯಂತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಿಷೇಧವಾಗಿದ್ದ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಜನ ಈ ಬಾರಿ ಅದ್ಧೂರಿಯಾಗಿ ಆಚರಿಸಿದ್ದು, ರಂಗಿನಾಟದ ವೈಭವ ಮರುಕಳಿಸಿದೆ. ಇನ್ನು ಅನುಮತಿಯಿಲ್ಲದೆ ಬಣ್ಣ ಎರಚುವವರಿಗೆ ಶಾಕ್ ನೀಡುವ ಸುದ್ದಿಯೊಂದು ಇಲ್ಲಿದೆ.
ಇದನ್ನೂ ಓದಿ:ನಕಲಿ ಗೊಬ್ಬರ, ಬಿತ್ತನೆ ಬೀಜ ಮಾರಿದ್ರೆ ಗೂಂಡಾ ಕೇಸ್..?Agriculture Minister B.C. ಪಾಟೀಲ್ ಏನಂದ್ರು..?
ಸೆಕ್ಷನ್ 188ರ ಅಡಿಯಲ್ಲಿ ಬೀಳುತ್ತೆ ಕೇಸ್..!
ಒಪ್ಪಿಗೆಯಿಲ್ಲದೆ ನೀರಿನ ಬಲೂನ್‌ಗಳನ್ನು ಎಸೆಯುವುದು ಸೆಕ್ಷನ್ 188 ರ ಅಡಿಯಲ್ಲಿ ತಪ್ಪು. ಜೊತೆಗೆ ಇನ್ನೊಬ್ಬರ ಅನುಮತಿಯಿಲ್ಲದೆ ಯಾರಾದರೂ ನೀರಿನ ಬಲೂನ್‌ಗಳನ್ನು ಎಸೆದರೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಆರೋಪ ಹೊರಿಸಲಾಗುವುದು.
ಇದನ್ನೂ ಓದಿ:ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.
ಶಾಬ್-ಎ-ಬರಾತ್ ಮತ್ತು ಹೋಳಿ ಹಬ್ಬದ ಮೊದಲು ನಡೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ನಾಗಪುರ್ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್, ಪೂರ್ವಾನುಮತಿಯಿಲ್ಲದೆ ಯಾರೊಬ್ಬರ ಮೇಲೆ ನೀರಿನ ಬಲೂನ್ ಎಸೆಯುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದು ವರದಿಯಾಗಿದೆ.
ಇದನ್ನೂ ಓದಿ:Share Marketನಿಂದ, Goldನಿಂದ, ಮತ್ತು Propertyಯಿಂದ ಸಂಪಾದನೆ ಮಾಡುವಂತ ಜನರಿಗೆ ಒಳ್ಳೆಯ ಸುದ್ದಿ!