News

RFOI ಕೃಷಿ ಮೂಲಕ ಭಾರತವು ವಿಶ್ವ ಗುರುವಾಗಲಿದೆ: ಡಾ. ರಾಜಾರಾಂ ತ್ರಿಪಾಠಿ

20 January, 2024 5:36 PM IST By: Hitesh
ಕೃಷಿ ಜಾಗರಣ ಮಾಧ್ಯಮ ಸಂಸ್ಥೆಗೆ ಭೇಟಿ ನೀಡಿದ ಪ್ರಗತಿಪರ ರೈತ ಡಾ. ರಾಜಾರಾಂ ತ್ರಿಪಾಠಿ

ಕೃಷಿ ಜಾಗರಣ ಸಂಸ್ಥೆಯು MFOIದ ಮೂಲಕ ಹೊಸ ಮಾದರಿಯನ್ನು ಸೃಷ್ಟಿಸಿದೆ ಎಂದು ಪ್ರಗತಿಪರ ರೈತ

ಹಾಗೂ RFOI ಡಾ. ರಾಜರಾಂ ತ್ರಿಪಾಠಿ ಅವರು ಹೇಳಿದರು.

ಶನಿವಾರ ಅವರು ನವದೆಹಲಿಯಲ್ಲಿರುವ ಕೃಷಿ ಜಾಗರಣ ಪ್ರಧಾನ ಕಚೇರಿಯ ಚೌಪಾಲ್‌ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರು ಕೃಷಿ ಹಾಗೂ ಕೃಷಿ ಜಾಗರಣದ ಹೊಸ ಮಾದರಿಯ ಬಗ್ಗೆ ಮಾತನಾಡಿದರು.

ಭಾರತದಲ್ಲಿ ಕೃಷಿಯು ಪ್ರಧಾನ ವೃತ್ತಿಯಾಗಿದೆ. ಆದರೆ, ಇದರಲ್ಲಿ ಒಬ್ಬರೂ ರೋಲ್‌ ಮಾಡಲ್‌ ಎನ್ನುವವರನ್ನು ನಾವು

ಗುರುತಿಸಿಲ್ಲ ಅಥವಾ ಪರಿಚಯಿಸಿಲ್ಲ. ಇದೀಗ ಅದನ್ನು ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು ಬದಲಾಯಿಸುತ್ತಿದೆ.

MFOI ಯೋಜನೆಯ ಮೂಲಕ ದೇಶದ ರೈತರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು ಇಲ್ಲಿಯವರೆಗೆ ಯಾವುದೇ ಮಾಧ್ಯಮಗಳು ಮಾಡದಂತಹ ಅಮೋಘವಾದ ಕೆಲಸವನ್ನು ಮಾಡಿದೆ.

ಸಣ್ಣ ಕನಸುಗಳನ್ನು ಕಾಣುವುದು ಅಪರಾಧ

ನನ್ನ ಪ್ರಕಾರ ಸಣ್ಣ ಕನಸುಗಳನ್ನು ಕಾಣುವುದೇ ಅಪರಾಧ. ಈ ಸಾಲುಗಳನ್ನು ನಾನು ಹಿಂದೆಯೊಮ್ಮೆ ಎಲ್ಲೋ ನೋಡಿದ ನೆನಪು.

ಅದನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಅದೇ ರೀತಿ ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ

ಸಂಸ್ಥಾಪಕರು ಹಾಗೂ ಪ್ರದಾನ ಸಂಪಾದಕರಾದ ಎಂ.ಸಿ ಡೊಮಿನಿಕ್‌ ಅವರೂ ಸಹ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದಾರೆ.

ದೇಶದ ಮೂಲೆ ಮೂಲೆಯಿಂದ ರೈತರನ್ನು ಗುರುತಿಸಿ ಸನ್ಮಾನ ಮಾಡುವುದು ಸುಲಭವಾದ ವಿಷಯವಲ್ಲ.

ಎಂ.ಸಿ ಡೊಮಿನಿಕ್‌ ಅವರು ನನಗೆ ಹಿಂದಿನಿಂದಲೂ ಪರಿಚಯ. ಆಗ ನನಗೆ ಎಂ.ಸಿ ಡೊಮಿನಿಕ್‌ ಅವರು

 ಕೃಷಿ ಪತ್ರಿಕೋದ್ಯಮವನ್ನು ಇಲ್ಲಿ ವರೆಗೆ ತೆಗೆದುಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸ ಇರಲಿಲ್ಲ.

ದೇಶಕ್ಕೆ ನೀವು ಪರಿಚಯಿಸಿದ್ದೀರಿ

ನಕ್ಸಲೇಟ್‌ ಪ್ರದೇಶದಲ್ಲಿ ಇರುವ ರಾಜಾರಾಂ ತ್ರಿಪಾಠಿ ಅವರು ಕೃಷಿಯಲ್ಲಿ ಅಮೋಘವಾದ ಸಾಧನೆಯನ್ನು ಮಾಡಲು ಸಾಧ್ಯವಿದೆಯಾದರೆ,

ನಾನೇಕೆ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಪ್ರಶ್ನೆಯನ್ನು ಹಾಕಿಕೊಳ್ಳುವಂತೆ ದೇಶದ ರೈತರಿಗೆ ಕೃಷಿ ಜಾಗರಣ ಹಾಗೂ ಎಂ.ಸಿ ಡೊಮಿನಿಕ್‌ ಅವರು ಮಾಡಿದ್ದಾರೆ.

ರಾಜರಾಂ ಅವರು ಕೃಷಿ ಸಾಧನೆಯನ್ನು ಮಾಡಬಹುದಾದರೆ ಅದೂ ಸಹ ಅಂತಹ ನಕ್ಸಲೇಟ್ ಪ್ರದೇಶದಿಂದ ಮಾಡಬಹುದಾದರೆ

ನಾವೇಕೆ ಮಾಡಬಾರದು ಎಂದು ದೇಶದ ಉಳಿದ ರೈತರೂ ವಿಚಾರ ಮಾಡುವಂತೆ ನೀವು ಮಾಡಿದ್ದೀರಿ ಎಂದು

ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ ಕಾರ್ಯವೈಖರಿಯನ್ನು ಡಾ.ರಾಜಾರಾಂ ತ್ರಿಪಾಠಿ ಅವರು ಶ್ಲಾಘಿಸಿದರು.

ಕೃಷಿ ಜಾಗರಣದಿಂದ ಹೊಸ ಇತಿಹಾಸ ಸೃಷ್ಟಿ

 ಕೃಷಿ ಜಾಗರಣದಿಂದ ಕೃಷಿಯಲ್ಲಿ ಇದೀಗ ಹೊಸ ಇತಿಹಾಸವೇ ಸೃಷ್ಟಿಯಾಗಿದೆ.

ಭಾರತವು ವಿಶ್ವಕ್ಕೆ ಕೃಷಿಯ ಮೂಲಕ ವಿಶ್ವಗುರುವಾಗಲು ಸಾಧ್ಯವಿದೆ. ವಿಶ್ವ ಗುರುವಾದರೆ ಕೃಷಿ ಜಾಗರಣವೇ

ಪ್ರೇರಣೆ ಎಂದೂ ಅವರು ಹೇಳಿದರು. ದೇಶದ ಮಾಧ್ಯಮಗಳು ಕೃಷಿಗೆ ಕೇವಲ 4% ಪ್ರತಿಶತ ಮಾತ್ರ ಅವಕಾಶ ನೀಡುತ್ತಿದೆ.

ಕೃಷಿಯ ಬಗ್ಗೆ ಮಾಧ್ಯಮಗಳು ಮಹತ್ವ ಕೊಡ್ತಿಲ್ಲ. ರಾಜಕೀಯ ಉಪ್ಪಿನ ಕಾಯಿ ಅಷ್ಟಿರಬೇಕು.

ಆದರೆ, ರಾಜಕೀಯವನ್ನೇ ಊಟದಂತೆ ಉಣಬಡಿಸುತ್ತಿವೆ.

ಆದರೆ, ಕೃಷಿ ಜಾಗರಣ ಮಾಧ್ಯಮ ಸಂಸ್ಥೆ ಇದಕ್ಕೆ ತದ್ವಿರುದ್ಧವಾಗಿದೆ ಎಂದರು.  

ರೈತರಿಗೆ ಪ್ರೇರಣೆ ನೀಡಲು ಹೆಲಿಕಾಫ್ಟರ್‌ ಖರೀದಿಸಿದೆ

ನಾನು ಶೋಕಿ ಮಾಡುವ ಉದ್ದೇಶಕ್ಕಾಗಿ ಹೆಲಿಕಾಪ್ಟರ್‌ ಖರೀದಿ ಮಾಡಲಿಲ್ಲ.

ರೈತರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಹೆಲಿಕಾಪ್ಟರ್‌ ಖರೀದಿಸಿದೆ.

ಜನರಿಗೆ ಪ್ರೇರಣೆ ನೀಡುವುದು ಇದರ ಉದ್ದೇಶ. ವಿಶ್ವಕಪ್ ಗೆದ್ದ ನಂತರ ರೋಲ್ ಮಾಡಲ್ ಸಿಕ್ಕಿದೆ.

ಕ್ರಿಕೇಟ್‌ ದಿಗ್ಗಜ ಸಚೀನ್‌ ತೆಂಡೂಲ್ಕರ್‌ ಅವರು ಹಲವರಿಗೆ ಪ್ರೇರಣೆಯಾಗಿದ್ದಾರೆ.

ಭಾರತ ವಿಶ್ವಕಪ್‌ ಗೆದ್ದ ಮೇಲೆ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್‌ ಜೋರಾಯಿತು ಎಂದರು.  

ಭಾರತ ವಿಶ್ವಕ್ಕೆ ಮಾದರಿಯಾಗಬಲ್ಲದು

ಭಾರತವೂ ವಿಶ್ವಕ್ಕೆ ಮಾದರಿಯಾಗಬಲ್ಲದು ಎಂದು ಡಾ. ರಾಜಾರಾಂ ತ್ರಿಪಾಠಿ ಅವರು ಹೇಳಿದರು.

ದೇಶದಲ್ಲಿ ಹಲವು ಬಯೋಡೈವೆಸಿಟಿ ಇದೆ. ನಮ್ಮಲ್ಲಿ ಯುವಕರಿಗೆ ಕೃಷಿ ಪ್ರರೇಣೆಯಾಗಬಲ್ಲದು

ಅಷ್ಟೇ ಅಲ್ಲ, ಉದ್ಯೋಗವನ್ನೂ ಸೃಷ್ಟಿಸಬಲ್ಲದೂ ಎಂದು ಹೇಳಿದರು.  

ಕೃಷಿ ಜಾಗರಣದ ಮಹತ್ವ ಕಾರ್ಯಕ್ಕೆ ಸಾಥ್‌ ನೀಡುವೆ

ಕೃಷಿ ಜಾಗರಣ ಸಂಸ್ಥೆ ರೈತರನ್ನು ಗೌರವಿಸಿದೆ. ರೈತ, ಅನ್ನದಾತರನ್ನು ಯಾರು ಗೌರವಿಸುವರೋ

ಅವರನ್ನು ರೈತರು ಎಂದಿಗೂ ಮರೆಯಲಾಗುವುದಿಲ್ಲ. ಕೃಷಿ ಜಾಗಋಣ ಮಾಧ್ಯಮ ಸಂಸ್ಥೆಯ

ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾದೊಂದಿಗೆ ನಾನು ಕೈಜೋಡಿಸುತ್ತೇನೆ.

ಬಾಹುಬಂಧದೊಂದಿಗೆ ಕೃಷಿ ಜಾಗರಣದೊಂದಿಗೆ ನಾನು ಸಾಗುತ್ತೇನೆ ಎಂದರು.

ನಮ್ಮ ಕನಸು ಇದೀಗ ನಮ್ಮ ಮುಂದಿದೆ

ನಾನು ಕಂಡ ಕನಸು ಇದೀಗ ನನ್ನ ಮುಂದೆ ಇದೆ ಎಂದು ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ

ಸಂಸ್ಥಾಪಕ ಹಾಗೂ ಪ್ರದಾನ ಸಂಪಾದಕ ಎಂ.ಸಿ ಡೊಮಿನಿಕ್‌ ಅವರು ಹೇಳಿದರು. 

ನಮ್ಮ ಕನಸು ಇದೀಗ ನಮ್ಮ ಮುಂದೆ ಇದೆ. ಇನ್ಮುಂದೆ ರೈತರೇ ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ವಿಶ್ವದ ಎಲ್ಲ ರೈತರೂ ಒಂದು ಕಡೆ ಸೇರಿ ಅವರ ಭವಿಷ್ಯವನ್ನು ಅವರೇ ನಿರ್ಧರಿಸಲಿದ್ದಾರೆ.

ಇದರಲ್ಲಿ ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಎನ್ನುವುದೇ ಇರಲಿದೆ. ಅದರ ಹೊರತಾಗಿ ಮತ್ತೇನೂ ಇರುವುದಿಲ್ಲ ಎಂದರು.  

ಇನ್ನು ಸಾವಯವ ಕೃಷಿ ಹಾಗೂ ಆರ್ಥಿಕ ಸದೃಢತೆ ಎನ್ನುವುದು ದೊಡ್ಡ ವಿಷಯ ಡಾ. ರಾಜಾರಾಂ ತ್ರಿಪಾಠಿ ಅವರು ಎರಡನ್ನೂ ಸಾಧಿಸಿದ್ದಾರೆ

ಎಂದು ಹೇಳಿದರು. ಭಾರತೀಯ ಪ್ರತಿ ಕೃಷಿಕರೂ ಇದರಿಂದ ಪ್ರೇರಣೆ ಪಡೆಯಬಹುದಾಗಿದೆ ಎಂದರು.

ಐಕನ್ ಫಾರ್ಮಿಂಗ್ ಕಮ್ಯೂನಿಟಿ ನಮ್ಮ ದೇಶದಲ್ಲೂ ಆಗ್ತಿದೆ. ಎಲ್ಲ ರೈತರೂ ಸಹ ರಾಜಾರಾಂ

ತ್ರಿಪಾಠಿ ಯಂತಹಾಗಬೇಕು ಮುಂದಿನ ರಾಜಾರಾಂ ಎನ್ನುವುದು ನೋಡುವಂತಾಗಬೇಕು ಎಂದರು.