News

ಈ ವರ್ಷವೂ ಕಳೆದ ವರ್ಷದಂತೆ ಉತ್ತಮ ಮುಂಗಾರು

15 April, 2021 10:14 PM IST By:
Monsoon

ದೇಶದ ರೈತಾಪಿ ವರ್ಗಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ.  ಕಳೆದ ಎರಡು ವರ್ಷದಂತೆ ಈ ವರ್ಷವೂ ಸಹ ನೈಋತ್ಯ ಮುಂಗಾರು ಜೂನ್ ನಿಂದ  ಸೆಪ್ಟೆಂಬರ್ ಅವಧಿಯಲ್ಲಿ ಉತ್ತಮವವಾಗಿರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.

ಕಳೆದೆರಡು ವರ್ಷಗಳಂತೆ ಈ ವರ್ಷವೂ ಸಹ ದೇಶದಲ್ಲಿ  ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಸಂಸ್ಥೆ ಸ್ಕೈಮೆಟ್‌ ಮುನ್ಸೂಚನೆ ನೀಡಿದೆ. ವಿಶೇಷವೆಂದರೆ, ಸತತ ಮೂರನೇ ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರು ಕಾಣಲಿದೆ. ಅಂದರೆ, 2019, 2020ರಂತೆ 2021ರಲ್ಲೂ ಉತ್ತಮವಾಗಿ ಮುಂಗಾರು ಮಳೆಯಾಗಲಿದೆ ಎಂದು ಈ ಸಂಸ್ಥೆ ತಿಳಿಸಿದೆ.

ಸ್ಕೈಮೆಟ್‌ ಹವಾಮಾನ ಸಂಸ್ಥೆ ಪ್ರಕಟಿಸಿದ ಮಾಹಿತಿ ಪ್ರಕಾರ ಸಾಮಾನ್ಯ ಮಳೆ ಪ್ರಮಾಣ ಸರಿ ಸುಮಾರು ಶೇ.103ರ ವರೆಗೆ ಆಗಲಿದೆ. ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ ವರೆಗಿನ ಅವಧಿಯಲ್ಲಿ 880.6 ಮಿಲಿಮೀಟರ್‌ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಮಳೆಯ ಕೊರತೆ ಉಂಟಾಗುವ ಅಪಾಯವನ್ನೂ ಮುನ್ಸೂಚನೆಯಲ್ಲಿ ನೀಡಲಾಗಿದೆ.

ಜೂನ್ ತಿಂಗಳಲ್ಲಿ ಶೇ. 106 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಜುಲೈ ತಿಂಗಳಲ್ಲಿ ಶೇ. 97 ರಷ್ಟು, ಆಗಸ್ಟ್ ತಿಂಗಳಲ್ಲಿ ಶೇ. 99 ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಶೇ. 116 ರಷ್ಟು ಮಳೆಯಾಗಲಿದೆ. ಸಾಮಾನ್ಯ ಮುಂಗಾರು ಸಾಧ್ಯತೆ ಶೇ. 60 ರಷ್ಟು ಇದ್ದರೆ ಶೇ. 15 ಕ್ಕಿಂತ ಅಧಿಕ ಮಳೆ ಸುರಿಯಲಿದೆ ಎಂದು ಸ್ಕೈಮೆಟ್ ಅಂದಾಜಿಸಿದೆ.