News

ʻಈ ದಿನʼ ಎಲ್ಲ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಣೆ! ಎಂದು..?

08 April, 2023 4:01 PM IST By: KJ Staff
This day'' announcement of paid leave for all employees!

1.. ಕರ್ನಾಟಕ ವಿಧಾನಸಭಾ ಎಲೆಕ್ಷನ್‌: ಒಂದು ದಿನ ವೇತನ ಸಹಿತ ರಜೆ

2.. ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿಸುದ್ದಿ: ಬಡ್ಡಿ ದರದಲ್ಲಿ ಹೆಚ್ಚಳ

3.. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕೃಷಿ ಅಧಿಕಾರಿ ಲೋಕಾಯುಕ್ತ ಬಲೆಗೆ

4.. ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ: ನಾಳೆ ಟೈಗರ್‌ ಸಫಾರಿ

5.. ನವೋದ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ: ಮೇ 31 ಕಡೆಯ ದಿನ

6.. CRPF ನೇಮಕಾತಿ 2023: 1.3 ಲಕ್ಷ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅಧಿಸೂಚನೆ

1..

ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆ ಆಗಿದ್ದು, ಎಲ್ಲ ಪಕ್ಷಗಳು ಪ್ರಚಾರದಲ್ಲಿ ಬ್ಯೂಸಿಯಾಗಿವೆ. ಇನ್ನು ಮೇ 10  ರಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರಿಗೆ ವೇತನ ಸಹಿತ ರಜೆ ಲಭ್ಯವಾಗಲಿದೆ. ವೋಟಿಂಗ್‌ ನಡೆಯುವ ದಿನದಂದು ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ರಜೆ  ನೀಡಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಇದರ ಬೆನ್ನಲ್ಲೇ ಆಯೋಗವು ಈ ಎರಡು ಕ್ಷೇತ್ರದ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕೆಂದು ಕಟ್ಟು ನಿಟ್ಟಾಗಿ ಆದೇಶ ಮಾಡಿದೆ.

*-*-*-*

2..

ಏಪ್ರಿಲ್‌ ಹಾಗೂ ಜೂನ್‌ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ  ವಿವಿಧ ಸಣ್ಣ ಉಳಿತಾಯ ಖಾತೆ ಠೇವಣಿಗಳ ಬಡ್ಡಿದರವನ್ನು ಶೇ. 0.1 ರಿಂದ ಶೇ. 0.7 ರವರೆಗೂ ಹೆಚ್ಚಳ ಮಾಡಿ ಜನರಿಗೆ ಗುಡ್‌ನ್ಯೂಸ್‌ ನೀಡಿದೆ.  National Savings certificate ಗೆ ನಿಗದಿಪಡಿಸಲಾಗಿದ್ದ ಬಡ್ಡಿ  ದರವನ್ನು ಶೇ 7.7ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕ ಉಳಿತಾಯ ಖಾತೆ ಬಡ್ಡಿದರವನ್ನು ಶೇ. 8.2ಕ್ಕೆ. ಸುಕನ್ಯಾ  SSY ಬಡ್ಡಿದರವನ್ನು ಶೇ. 7.6 ರಿಂದ ಶೇ.8 ಕ್ಕೆ ಹೆಚ್ಚಿಸಲಾಗಿದೆ. KVP ಮೆಚ್ಯೂರಿಟಿ ಅವಧಿಯನ್ನು ಈ ಹಿಂದಿನ 120 ತಿಂಗಳ ಬದಲಾಗಿ 115 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಜೊತೆಗೆ ಕಿಸಾನ್‌ ವಿಕಾಸ್‌ ಪತ್ರದ ಬಡ್ಡಿದರವನ್ನು ಶೇ.7.5 ಕ್ಕೆ ಹೆಚ್ಚಿಸಲಾಗಿದೆ.

40 ವರ್ಷಗಳವರೆಗೆ ಆದಾಯ ನೀಡುವ Rubber Farming ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

3..

ಕೃಷಿ ಉಪಕರಣಗಳ ಬಿಲ್‌ಮಂಜೂರು ಮಾಡುವ ಸಲುವಾಗಿ ₹2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಕೃಷಿ ಇಲಾಖೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುಂಡ್ಲುಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ಕುಮಾರ್‌ ಅವರು ಇಲಾಖೆ ವತಿಯಿಂದ ಖರೀದಿಸಲಾಗಿದ್ದ ಕೃಷಿ ಉಪಕರಣಗಳ ಬಿಲ್‌ಮಾಡುವಾಗ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಫ ಕೇಳಿ ಬಂದಿದೆ. ಇವರ ಈ ಕೆಲಸಕ್ಕೆ ಜೊತೆಯಾಗಿ ತಾಂತ್ರಿಕ ಕೃಷಿ ಅಧಿಕಾರಿ ಸತೀಶ್‌ಮತ್ತು ಹೊರಗುತ್ತಿಗೆಯ ಗ್ರೂಪ್‌ಡಿ ನೌಕರ ಅರುಣ್‌ ಎಂಬುವವರು ಕೂಡ ಕೈ ಜೋಡಿಸಿ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.

4..

ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಮೈಸೂರಿಗೆ ಆಗಮಿಸಲಿದ್ದಾರೆ. ಭಾನುವಾರ ಬೆಳಗ್ಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಜಂಗಲ್ ಸಫಾರಿಗೆ ತೆರಳಲಿದ್ದು, ನಂತರ ರಾಜ್ಯ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಅವರು, ತಮಿಳುನಾಡು ಗಡಿಯಲ್ಲಿರುವ ತೆಪ್ಪಕಾಡು ಮತ್ತು ಮಧುಮಲೈ ಅರಣ್ಯ ವಲಯಕ್ಕೆ ಭೇಟಿ ನೀಡಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಎಲಿಫೆಂಟ್ ವಿಸ್ಪರರ್ಸ್‌ನಲ್ಲಿ ನಟಿಸಿರುವ ಬೊಮ್ಮಾ ಮತ್ತು ಬೆಳ್ಳಿ ದಂಪತಿ ಹಾಗೂ ತಂಡವನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ.  ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಮಂತ್ರಿ ಅವರು ಮೈಸೂರಿಗೆ ವಾಪಸಾಗಲಿದ್ದು, ೫೦ ವರ್ಷಗಳನ್ನು ಪೂರೈಸಿರುವ ಹುಲಿ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

5..

ಆಂತರಿಕ ವ್ಯಾಪಾರ ಮತ್ತು ಕೈಗಾರಿಕಾ ಉತ್ತೇಜನಾ ಇಲಾಖೆ ವತಿಯಿಂದ ೨೦೨೩ರ ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಮೇ ತಿಂಗಳ ೩೧ರಂದು ಕಡೆಯ ದಿನವಾಗಿದೆ. ನವೋದ್ಯಮ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ೨೦ ವಿಭಾಗಗಳಲ್ಲಿ ಪ್ರದಾನ ಮಾಡಲಾಗುವುದು. ಪ್ರತಿಯೊಂದು ವಿಭಾಗದಲ್ಲಿ ೧೦ ಲಕ್ಷ ನಗದು ಮೌಲ್ಯದ ಪ್ರಶಸ್ತಿ ಇರಲಿದೆ..

Pradhan Mantri MUDRA Yojana: 10 ಲಕ್ಷದವರೆಗಿನ ಸಾಲ ವಿತರಣೆ, ₹23.2 ಲಕ್ಷ ಕೋಟಿ ಮಂಜೂರು

6..

ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ಸ್‌ಟೇಬಲ್ ಶ್ರೇಣಿಯ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಸಿಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಏಪ್ರಿಲ್ 5, 2023 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಿಆರ್‌ಪಿಎಫ್‌ನಲ್ಲಿ 1.3 ಲಕ್ಷ ಕಾನ್ಸ್‌ಟೇಬಲ್‌ಗಳ ಖಾಲಿ ಹುದ್ದೆಗಳನ್ನು ಪೇ-ಲೆವೆಲ್-3  ವೇತನ ಶ್ರೇಣಿಯ ಗ್ರೂಪ್ ಸಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. 23 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿದ್ದು, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ  ಸಡಿಲಿಕೆಯನ್ನು ನೀಡಲಾಗಿದೆ.