News

ನೇಪಾಳದಲ್ಲಿ ಒಂದೇ ವಾರದಲ್ಲಿ ಮೂರನೇ ಬಾರಿ ಭೂಕಂಪನ: ದೆಹಲಿ ಜನಕ್ಕೆ ಆತಂಕ!

13 November, 2022 9:54 AM IST By: Hitesh
Delhi

ನೇಪಾಳದಲ್ಲಿ ಭಾನುವಾರ ರಾತ್ರಿ ಮತ್ತೆ ಭೂಕಂಪನ (Earthquake) ಸಂಭವಿಸಿದೆ. ನೇಪಾಳದಲ್ಲಿ ಒಂದೇ ವಾರದಲ್ಲಿ ಸಂಭವಿಸಿದ ಮೂರನೇ ಭೂಕಂಪನ (Earthquake) ಇದಾಗಿದೆ.!

ಇದನ್ನೂ ಓದಿರಿ ನೇಪಾಳದಲ್ಲಿ ಭೂಕಂಪನ: ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ! 

Nepal ನೇಪಾಳದಲ್ಲಿ ಭಾನುವಾರ ರಾತ್ರಿ 8 ಗಂಟೆಯ ಸುಮಾರಿಗೆ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, (Delhi) ದೆಹಲಿ–ಎನ್‌ಸಿಆರ್ (NCR) ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿಯೂ ಭೂಕಂಪನದ ತೀವ್ರತೆ ಪತ್ತೆ ಆಗಿದೆ.  

ಕಳೆದ ಮೂರು ದಿನಗಳ ಹಿಂದಷ್ಟೇ (Nepal) ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದರಲ್ಲಿ ಆರ ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಭೂಕಂಪದಿಂದ ಕಟ್ಟಡ ರಕ್ಷಣೆಗೆ ಹೊಸ ಪ್ಲಾನ್‌ ಕಂಡುಕೊಂಡ ಸಂಶೋಧಕರು!

ಭಾನುವಾರ ರಾತ್ರಿ ಉತ್ತರಾಖಂಡದ ಜ್ಯೋತಿಮಠದಿಂದ 212 ಕಿ.ಮೀ ದೂರದಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.  

2030ರಲ್ಲಿ ವಿಶ್ವವು 560 ಮಹಾ ದುರಂತಗಳನ್ನು ಎದುರಿಸಲಿದೆ.. ಆಘಾತಕಾರಿ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ಮೂರು ದಿನಗಳ ಹಿಂದಷ್ಟೇ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಆತಂಕದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವ ಆಗಿದೆ.

ಒಂದೇ ವಾರದಲ್ಲಿ ನೇಪಾಳದಲ್ಲಿ ಸಂಭವಿಸಿದ  ಮೂರನೇ ಭೂಕಂಪ ಇದಾಗಿದೆ.

ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

Third earthquake in one week in Nepal: Delhi people are worried!

ನೇಪಾಳದಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಸಿಲಂಗಾ ಪಟ್ಟಣದಿಂದ 3 ಕಿ.ಮೀ ದೂರದ ಭೂಮಿಯ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ.

ಭಾರತ, ಚೀನಾ ಮತ್ತು ನೇಪಾಳ ದೇಶಗಳ ಕೆಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಪಿಥೋರಗಢ ವಿಪತ್ತು ನಿರ್ವಹಣಾ ಅಧಿಕಾರಿ ಬಿಎಸ್ ಮಹಾರ್ ತಿಳಿಸಿದ್ದಾರೆ.

ಉತ್ತರಾಖಂಡದ ಪಿಥೋರಗಢ, ಮುನ್ಸಿಯಾರಿ ಮತ್ತು ಗಂಗೋಲಿಹಟ್‌ನಲ್ಲಿಯೂ ಭೂಕಂಪನದ ವರದಿಯಾಗಿದೆ.

ಯಾವುದೇ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿ ಬಂದಿಲ್ಲ.

ಈ ನಡುವೆ ಭೂಕಂಪನದ ಅನುಭವದ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ.  

ಭಾನುವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಭೂಮಿ ನಡುಗಿದ ಅನುಭವ ಆಗಿರುವುದು ಹಲವರ ಅನುಭವಕ್ಕೆ ಬಂದಿದೆ. 

ಇದನ್ನೂ ಓದಿರಿ: ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ?