News

#pmkisan: ಪಿಎಂ ಕಿಸಾನ್‌ ಮೊತ್ತದಲ್ಲಿ ಹೆಚ್ಚಳ ಸಾಧ್ಯತೆ..ರೈತರಲ್ಲಿ ಮೂಡಿದೆ ಭಾರೀ ನೀರಿಕ್ಷೆ

11 December, 2022 4:55 PM IST By: Maltesh

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತು ರೈತರ ಖಾತೆಯನ್ನು ತಲುಪಿದೆ. 13ನೇ ಕಂತಿಗೆ ರೈತರು ಕಾಯುತ್ತಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರ  ಬಜೆಟ್ ಮಂಡನೆಗೆ ಸಿದ್ಧತೆಯಲ್ಲಿ ತೊಡಗಿದೆ.  ಇದರಲ್ಲಿ ಪಿಎಂ ಕಿಸಾನ್‌ ಕಂತನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಹಲವಾರು ರೈತ ಸಂಘಟನೆಗಳು ಅಲ್ಲಲ್ಲಿ ಪಿಎಂ ಕಿಸಾನ್‌ ಯೋಜನೆಯ ಮೊತ್ತವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ..ಈ ವಿಚಾರವಾಗಿ ಪ್ರತಿಭಟನೆಗಳು ಆಗಿವೆ.ಹೀಗಾಗಿ ಇದನ್ನರಿತ ಕೇಂದ್ರ ಪಿಎಂ ಕಿಸಾನ್‌ನಲ್ಲಿ ಬದಲಾವಣೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ವಾರ್ಷಿಕ 3 ಕಂತುಗಳನ್ನು ರೈತರ ಖಾತೆಗೆ ಕಳುಹಿಸುತ್ತದೆ. ವರದಿಗಳ ಪ್ರಕಾರ, ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ಕಂತುಗಳಲ್ಲಿ ಬದಲಾವಣೆಗಳನ್ನು ತರಬಹುದು.

ಬಜೆಟ್‌ನಲ್ಲಿ  ಕೇಂದ್ರ ಸರ್ಕಾರ ಒಟ್ಟು ಕಂತುಗಳ ಮೊತ್ತವನ್ನ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಿಸಬಹುದು ಅಥವಾ ವರ್ಷಕ್ಕೆ 3 ಕಂತುಗಳ ಬದಲಿಗೆ 2 ಸಾವಿರ ರೂಪಾಯಿಯಂತೆ 4 ಕಂತುಗಳನ್ನು ನೀಡಬಹುದು ಎನ್ನಲಾಗುತ್ತಿದೆ.

*********

ಉತ್ತಮ ಇಳುವರಿ ಜತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡ ರೈತರ ಮೆಣಸಿನಕಾಯಿ ಬೆಳೆದಿದ್ದಾನೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿನಕಾಯಿಗೆ ವಿಚಿತ್ರ ರೋಗವೊಂದು ವಕ್ಕರಿಸಿದ್ದು ರೈತನನ್ನು ಕಂಗಾಲಾಗಿಸಿದೆ. ಯಾವುದೇ ಔಷದಿಯನ್ನು ಸಿಂಪಡಿಸಿದರು ಮೆಣಸಿನಕಾಯಿಗೆ ಬಾಧಿಸಿದ ರೋಗ ಕಡಿಮೆಯಾಗುತ್ತಿಲ್ಲ ಎಂದು ರೈತ ಕಂಗಾಲಾದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕು ತಂಬಳ್ಳಿಯಲ್ಲಿ ನಡೆದಿದೆ. 

ರಾಜನವರ ತೋಟಪ್ಪ ಎಂಬ ರೈತ ಇತ್ತೀಚಿಗೆ ಮೆಣಸಿನ ಗಿಡವನ್ನು ನಾಟಿ ಮಾಡಿದ್ದು, ಗಿಡಕ್ಕೆ ರೋಗ ವಕ್ಕರಿಸಿಕೊಂಡಿದೆ. ಎಷ್ಟು ಬಾರಿ ಕೀಟ ನಾಶಕ ಸಿಂಪಡಣೆ ಮಾಡಿದ್ದರು ಕೂಡ ರೋಗ ಮಾತ್ರ ಹತೋಟಿಗೆ ಬಂದಿಲ್ಲ. ಇದರಿಂದ ಚಿಂತೆಗೀಡಾದ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ರೋಗಕ್ಕೆ ತುತ್ತಾಗಿ ರೈತನನ್ನು ಸಂಕಷ್ಟಕ್ಕೀಡು ಮಾಡಿದೆ.

ಇನ್ನು ಸಂಬಂಧಪಟ್ಟ ಅಧಿಕಾರಿಗೆ ಈ ಕುರಿತು ಮಾಹಿತಿ ನೀಡಿ ಪರಿಹಾರ ಒದಗಿಸುವಂತೆ ಕೇಳಿಕೊಂಡರು ಕೂಡ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ರೈತ ಆರೋಪಿಸಿದ್ದಾರೆ.

*********

ತಮಿಳುನಾಡಿನ ಬಳಿಕ ರಾಜಧಾನಿಗೂ ಮಾಂಡೌಸ್ ಎಫೆಕ್ಟ್‌ ತಟ್ಟಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಕೂಲ್ ಕೂಲ್ ಆಗಿದೆ.

ಈಗಾಗಲೇ 2 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ತುಂತುರು ಮಳೆಯು ಇನ್ನು 3 ದಿನಗಳ ಕಾಲ ಬೆಂಗಳೂರಿನಲ್ಲಿ ಮುಂದುವೆರಯುವ ಮುನ್ಸೂಚನೆಯಿದೆ  ಮಳೆಯ ಬಗ್ಗೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆಯು ಗಾಳಿ ವೇಗವು ಹೆಚ್ಚಾಗುವ ಜೊತೆಗೆ ಕನಿಷ್ಠ ತಾಪಮಾನ ಕೂಡ ಇಳಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ.

ಚಂಡಮಾರುತದ ಭೀತಿ ನಡುವೆ ರಾಜ್ಯದಲ್ಲಿ ಮತ್ತೆ ವರುಣಾ ಅಬ್ಬರದ ಮುನ್ಸೂಚನೆಯಿದ್ದು, ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈಗಾಗಲೇ ಮೋಡ ಕವಿದ ವಾತಾವರಣ ಇರಲಿದ್ದು, ಇನ್ನು ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

ಬ್ಬಿನ ದರ ನಿಗದಿ, ಹಾಲಿನ ದರ ಏರಿಕೆಗಾಗಿ  ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಇದನ್ನು ವಿರೋಧಿಸಿ ಡಿ.19ರಂದು ಮಂಡ್ಯ ನಗರ ಬಂದ್‌ಗೆ ಜಿಲ್ಲಾ ರೈತ ಸಂಘ ಕರೆ ನೀಡಿದೆ.

ನಗರದಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಿ ಮಾತನಾಡಿದ ರೈತ  ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧು ಚಂದನ್‌ ಹಾಗೂ ಜಿಲ್ಲಾಧ್ಯಕ್ಷ ಎ .ಕೆಂಪೂಗೌಡ, ಕಳೆದ ಒಂದು ತಿಂಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ರೈತರ ಹೋರಾಟಕ್ಕೆ ಸರ್ಕಾರ ಕ್ಯಾರೆ ಎಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಹಲವು ಬಾರಿ ವಿಭಿನ್ನ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದರೂ ಸರ್ಕಾರ ರೈತರ ಕೂಗಿಗೆ ಸ್ಪಂದಿಸುತ್ತಿಲ್ಲ. ಸಿಹಿ ಸುದ್ದಿ ಕೊಡುತ್ತೇವೆಂದು ಹೇಳಿ ಕಾಲ ದೂಡುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಮಂಡ್ಯ ನಗರ ಬಂದ್‌ಗೆ ತೀರ್ಮಾನಿಸಲಾಗಿದೆ. ಇದಕ್ಕೆ ನಗರದ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಮಾಲೀಕರು, ಹೋಟೆಲ್‌ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.