ಚಿನ್ನದ ದರದಲ್ಲಿ ಮತ್ತೆ ಏರಿಕೆ ಆಗಿದ್ದು, ಚಿನ್ನ ಖರೀದಿಸುವವರ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಚಿನ್ನದ ದರದಲ್ಲಿ ಏರಿಕೆ ಆಗುತ್ತಿದೆ.
MBBS ಪುಸ್ತಕಗಳು ಕನ್ನಡಕ್ಕೆ ಅನುವಾದವಾಗುವುದೇ, ಸರ್ಕಾರದ ನಿಲುವೇನು?
ಕಳೆದ ನಾಲ್ಕು ದಿನದಲ್ಲಿ ಮೂರು ಬಾರಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಈ ನಡುವೆ ಒಂದು ದಿನ ಮಾತ್ರ ಚಿನ್ನದ ಬೆಲೆ ಸ್ಥಿರವಾಗಿತ್ತು. ಅದಕ್ಕೂ ಮುನ್ನ ಎರಡು ದಿನ ದರ ಬಂಗಾರ ಬೆಲೆ ಇಳಿಕೆಯಾಗಿತ್ತು.
ಕಳೆದ ಹತ್ತು ದಿನಗಳ ಚಿನ್ನದ ಬೆಲೆಯನ್ನು ಅವಲೋಕಿಸಿ ನೋಡಿದರೆ, ಚಿನ್ನದ ಬೆಲೆಯು ನಾಲ್ಕು ಬಾರಿ ಇಳಿಕೆಯಾಗಿದ್ದು, ಐದು ಬಾರಿ ಹೆಚ್ಚಳವಾಗಿರುವುದು ವರದಿ ಆಗಿದೆ.
ನೇಪಾಳದಲ್ಲಿ ಒಂದೇ ವಾರದಲ್ಲಿ ಮೂರನೇ ಬಾರಿ ಭೂಕಂಪನ: ದೆಹಲಿ ಜನಕ್ಕೆ ಆತಂಕ!
ನವೆಂಬರ್ 12ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 400 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 48,200 ರೂಪಾಯಿ ಆಗಿದೆ.
ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 430 ರೂಪಾಯಿ ಹೆಚ್ಚಾಗಿದ್ದು, ಸದ್ಯ 52,580 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂಪಾಯಿ ಕುಗ್ಗಿದ್ದು, ಪ್ರಸ್ತುತ 61,700 ರೂಪಾಯಿ ಆಗಿದೆ.
ರಾಜ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
ನವೆಂಬರ್ 11ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52311.00 ರೂಪಾಯಿ ಆಗಿದೆ.
ಬೆಳ್ಳಿ ದರವು ಇಳಿಕೆ ಕಂಡಿದ್ದು 61619.00 ರೂಪಾಯಿ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.05ರಷ್ಟು ಏರಿಕೆಯಾಗಿದ್ದು
1,770.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.47ರಷ್ಟು ಹಿಗ್ಗಿದ್ದು, 21.71 ಯುಎಸ್ ಡಾಲರ್ ಆಗಿದೆ.
ಇದನ್ನೂ ಓದಿರಿ: ರಾಜೀವ್ ಗಾಂಧಿ ಹಂತಕರ ಬಿಡುಗಡೆ: ಸೋನಿಯಾಗಾಂಧಿ ಕ್ಷಮಾಪಣೆ, ಬಿಡುಗಡೆ ಹಿನ್ನೆಲೆ ಗೊತ್ತೆ?
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರವು 48,250 ರೂಪಾಯಿ ಆಗಿದ್ದು, 24 ಕ್ಯಾರೆಟ್ ಚಿನ್ನವು 52,630 ರೂಪಾಯಿ ಬೆಳ್ಳಿ ದರ: 67,500 ರೂಪಾಯಿ ಆಗಿದೆ.