- ಡಾ. ಸುಕನ್ಯಾ ಸೂನಗಹಳ್ಳಿ
ನೈರೋಬಿ, ಕೀನ್ಯಾ
ಪ್ರಪಂಚದ ಮಹಾನಗರಗಳಲ್ಲಿ ಒಂದಾದ ನವದೆಹಲಿ, ಬೀಜಿಂಗ್, ಢಾಕಾ ಮತ್ತಿತ್ತರ ಮಹಾನಗರಗಳ ಬಗ್ಗೆ ಯೋಚಿಸಿದರೆ ಮೊದಲು ಬರುವ ಚಿತ್ರಣವೇ ವಾಯುಮಾಲಿನ್ಯ ಮತ್ತು ಅದರಿಂದ ಮಾನವನ ಮೇಲಾಗುತ್ತಿರುವ ಭಯಂಕರ ಪರಿಣಾಮ. ಹಸಿರು ಕಾಡು ಪರಿಸರ ಶುಚಿತ್ವಕ್ಕೆ ತಕ್ಕ ಮದ್ದು. ಬಹಳಷ್ಟು ಜನ ಅಥವಾ ಸರ್ಕಾರಗಳು ಇದನ್ನು ಯಶಸ್ವಿಯಾಗಿ ಸಾಕಾರಗೊಳಿಸದಿದ್ದರೂ, ಸಮಭಾಜಕ ವೃತ್ತದ ಆಸುಪಾಸಿನಲ್ಲಿ ಹರಡಿಕೊಂಡಿರುವ ಕೀನ್ಯಾ ದೇಶದಲ್ಲಿ ಒಬ್ಬ ಮಹಿಳೆ ಯಶಸ್ವಿಯಾಗಿ ಕಾಡನ್ನು ಬೆಳೆಸಿ, ಸಂರಕ್ಷಿಸಿ, ವಿಶ್ವ ಪ್ರಸಿದ್ಧವಾದದ್ದು ನಿಜಕ್ಕೂ ಒಂದು ಸ್ಫೂರ್ತಿದಾಯಕ ಕಥೆ.
ಪರಿಸರವನ್ನು ಸಂರಕ್ಷಣೆ ಮಾಡಬೇಕು. ಕಾಡು ಬೆಳೆಸಿ ನಾಡು ಉಳಿಸಬೇಕು ಎಂದು ಮನ್ನಚ್ಚರಿಕೆ ವಹಿಸಿಕೊಂಡು ಕೀನ್ಯಾದ ಒಬ್ಬ ಪರಿಸರವಾದಿಅನೇಕ ಹಿಂಸಾಚಾರಗಳನ್ನು ಅನುಭವಿಸಿ,ಮಾನವ ನಿರ್ಮಿತ ಕಾಡುಗಳಲ್ಲೊಂದಾದ ರಾಜಧಾನಿ ನೈರೋಬಿಯಲ್ಲಿರುವ ಕರೂರಾ ಅರಣ್ಯವನ್ನು ಉಳಿಸಿದರು. ಇದರ ಉಳಿವಿಗಾಗಿ ಮತ್ತು ದೇಶದಲ್ಲಿನ ಮಹಿಳೆಯರ ಸವಲತ್ತುಗಳಿಗಾಗಿ ನಡೆಸಿದ ಹೋರಾಟಗಳಿಗಾಗಿ ೨೦೦೪ರಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಶಾಂತಿ ಪುರಸ್ಕಾರವನ್ನು ತನ್ನದಾಗಿಸಿಕೊಂಡ ಮಹಿಳೆ ಬೇರೆ ಯಾರು ಅಲ್ಲ. ಆಫ್ರಿಕಾದ ಮೊದಲ ನೊಬೆಲ್ ಪ್ರಶಸ್ತಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮತ್ತು ಇದುವರೆವಿಗೂ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಏಕೈಕ ಪರಿಸರವಾದಿ ಡಾ. ವಾಂಗಾರಿ ಮಾತೈ.
ವಾಂಗಾರಿ ಮಾತೈಕೀನ್ಯಾದ ಒಬ್ಬ ಪ್ರಸಿದ್ಧ ಸಮಾಜವಾದಿ, ಪರಿಸರವಾದಿ, ರಾಜಕೀಯ ಕಾರ್ಯಕರ್ತೆ ಮತ್ತು ಹೆಚ್ಚಿನದಾಗಿ ನೊಬೆಲ್ ಪ್ರಶಸ್ತಿ ಗೆದ್ದ ಆಫ್ರಿಕಾದ ಮೊದಲ ಮಹಿಳೆ.ಇವರು ಹಸಿರುಬೆಲ್ಟ್ ಚಳುವಳಿಯ ರೂವಾರಿ.ಹಸಿರುಬೆಲ್ಟ್ ಮರಗಳು, ಪರಿಸರ ಸಂರಕ್ಷಣೆ ಮತ್ತು ಮಹಿಳಾ ಹಕ್ಕುಗಳ ಮೇಲೆ ಕೇಂದ್ರೀಕರಿಸಿದ ಪರಿಸರದ ಸರ್ಕಾರೇತರ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಸ್ಥಾಪಿಸಿದ ರೂವಾರಿಯು ಸಹ ಇವರೇ.
ಮಾತೈರವರು ೧೯೪೦ರ ಏಪ್ರಿಲ್ ಒಂದರಂದು ಕೀನ್ಯಾ ದೇಶದ ನ್ಯಾರಿ ಜಿಲ್ಲೆಯ ಇಹಿತೆ ಎಂಬ ಹಳ್ಳಿಯಲ್ಲಿ ಕಿಕುಯು ಜನಾಂಗೀಯ ಸಮುದಾಯದಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ನ್ಯಾರಿಯಲ್ಲಿರುವ ಕ್ಯಾಥೋಲಿಕ್ ಮಿಷನ್‌ನ ಬೋರ್ಡಿಂಗ್ ಶಾಲೆಯಲ್ಲಿ ಮಾಡಿದರು. ೧೯೫೬ರಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದಈಕೆ ಬಹಳ ಬುದ್ದಿವಂತೆ. ಪೂರ್ವ ಆಫ್ರಿಕಾದವಸಾಹತುಶಾಹಿ ಆಡಳಿತದ ಕೊನೆಯ ಸಮೀಪದಲ್ಲಿ,ಟಾಮ್ ಮೊಬಿಯಂತಹ ಕೀನ್ಯಾದ ರಾಜಕಾರಣಿಗಳು ಭರವಸೆಯ ವಿದ್ಯಾರ್ಥಿಗಳಿಗೆ ಪಾಶ್ಚಾತ್ಯ ರಾಷ್ಟçಗಳಲ್ಲಿ ಶಿಕ್ಷಣವನ್ನು ಕೊಡುತ್ತಿದ್ದರು. ಅದಕ್ಕೆ ‘ಕೆನಡಿ ಏರ್ಲಿಪ್ಟ್’ ಅಥವಾ ‘ಏರ್ಲಿಫ್ಟ್ ಆಫ್ರಿಕಾ’ ಎಂದು ಕರೆಯುತ್ತಿದ್ದರು. ೧೯೬೦ರ ಸೆಪ್ಟೆಂಬರ್‌ನಲ್ಲಿ ಅಮೆರಿಕಸಂಯುಕ್ತ ಸಂಸ್ಥಾನದಲ್ಲಿ ಅಧ್ಯಯನ ಮಾಡಲು ಆಯ್ಕೆಯಾದ ಸುಮಾರು ೩೦೦ ಕೀನ್ಯಾ ಜನರಲ್ಲಿ ಮಾತೈ ಒಬ್ಬರಾದರು. ಕಾನ್ಸಾಸ್‌ನ ಮೌಂಟ್ ಸೇಂಟ್ ಸ್ಕೊಲಾಸ್ಟಿಕಾ ಕಾಲೇಜಿನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ಪಡೆದರು. ಅಲ್ಲಿ ಅವರು ರಸಾಯನಶಾಸ್ತç ಮತ್ತು ಜರ್ಮನ್ ವಿದ್ಯಾರ್ಥಿಗಳ ಜೊತೆ ಜೀವಶಾಸ್ತçದಲ್ಲಿ ಪರಿಣತಿ ಪಡೆದರು.
೧೯೬೪ರಲ್ಲಿ ಬಿ. ಎಸ್ಸಿ. ಪದವಿ ಪಡೆದ ನಂತರ, ಅವರು ಜೀವಶಾಸ್ತçದಲ್ಲಿ ಸ್ನಾತಕೋತ್ತರ ಪದವಿಗಾಗಿ ಪಿಟ್ಸ್ಬರ್ಗ್ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು. ಆಫ್ರಿಕಾ-ಅಮೆರಿಕ ಸಂಸ್ಥೆಗಳಿಂದ ಜನವರಿ ೧೯೬೬ರಲ್ಲಿ ಮಾತೈ ಜೈವಿಕ ವಿಜ್ಞಾನದಲ್ಲಿ ಎಂ. ಎಸ್ಸಿಯನ್ನು ಪಡೆದರು. ನೈರೋಬಿ ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಪ್ರಾಣಿಶಾಸ್ತç ಪ್ರಾಧ್ಯಾಪಕರಿಗೆ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು.
ಕೀನ್ಯಾ ದೇಶದಲ್ಲಿ ಯಾವುದಾದರೂ ಯೋಜನೆ ಪ್ರಾರಂಭಿಸಬೇಕೆಂದರೆಮೊದಲ ಮಹಿಳೆ ಇವರು.ಈ ಸಮಯದಲ್ಲಿ ವಿಶ್ವವಿದ್ಯಾನಿಲಯದ ಸಿಬ್ಬಂದಿಗಳ ಮೇಲೆ ಕೆಲಸ ಮಾಡುವ ಮಹಿಳೆಯರಿಗೆ ಸಮಾನ ಸವಲತ್ತುಗಳನ್ನು ಪಡೆಯಲು ಪ್ರಚಾರ ಮಾಡಿದರು. ನ್ಯಾಯಾಲಯವು ಮೊದಲು ತಿರಸ್ಕರಿಸಿ ಅನಂತರ ಒಪ್ಪಿಕೊಂಡಿತು. ಇವರು ಕೀನ್ಯಾದ ನೈರೋಬಿಯಲ್ಲಿ ರೆಡ್‌ಕ್ರಾಸ್‌ಸೊಸೈಟಿಯ ಶಾಖೆಯ ಸದಸ್ಯರಾಗಿದ್ದರು. ೧೯೭೨ರಲ್ಲಿ ಸ್ಟಾಕ್ಹೊÃಮದಲ್ಲಿ ನಡೆದ ಮಾನವ ಪರಿಸರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆ ಸಭೆಯ ನಂತರ ಅವರ ಪ್ರಧಾನ ಕಚೇರಿ ನೈರೋಬಿಯಲ್ಲಿ ಸ್ಥಾಪಿತವಾಯಿತು. ಕೀನ್ಯಾ ಮಹಿಳೆಯರ ರಾಷ್ಟಿçÃಯ ಮಂಡಳಿ (ಎನ್‌ಸಿ ಡಬ್ಲೂö್ಯಕೆ) ಸೇರಿದರು. ೧೯೭೩ರಲ್ಲಿ ಅದರ ನಿರ್ದೇಶಕರಾದರು. ಅವರು ಕೀನ್ಯಾ ವಿಶ್ವವಿದ್ಯಾನಿಲಯದ ಮಹಿಳೆಯರ ಸಂಘದಸದಸ್ಯರಾಗಿದ್ದರು. ೧೯೭೪ರಲ್ಲಿ ಪರಿಸರ ಸಂಪರ್ಕ ಕೇಂದ್ರದಸದಸ್ಯರಾಗಿದ್ದರು. ಈ ಸಂಸ್ಥೆಯ ಸಂಯುಕ್ತರಾಷ್ಟçಗಳ ಪರಿಸರ ಕಾರ್ಯಕ್ರಮ(ಯುಎನ್‌ಇಪಿ)ದ ಕಾರ್ಯದಲ್ಲಿ ಸರ್ಕಾರೇತರ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೆÃಜಿಸಲು ಕೆಲಸ ಮಾಡಿದರು.
ಮಾತೈ ಅವರು ಸಂಸತ್ತಿನಲ್ಲಿ ವಾಂಗಾಟಾ ಕ್ಷೆÃತ್ರವನ್ನು ಪ್ರತಿನಿಧಿಸಿದರು.ತಮ್ಮಕಾರ್ಯಾಚರಣೆಯ ಸಂದರ್ಭದಲ್ಲಿ ಅವರು ಕೀನ್ಯಾದಲ್ಲಿ ಹೆಚ್ಚುತ್ತಿರುವ ನಿರುದ್ಯೊÃಗವನ್ನು ಸೀಮಿತಗೊಳಿಸಲು ಉದ್ಯೊÃಗಗಳನ್ನು ಹುಡುಕುವ ಭರವಸೆ ನೀಡಿದ್ದರು. ಈ ಭರವಸೆಗಳು ಮಾತೈ ಅವರು ನಿರುದ್ಯೊÃಗಿಗಳಿಗೆ ಉದ್ಯೊÃಗ ಒದಗಿಸುವುದರ ಜೊತೆಗೆ ಪರಿಸರ ಮರುಸ್ಥಾಪನೆಯ ಬಗ್ಗೆ ಆಲೋಚಿಸಲು ಕಾರಣವಾಯಿತು. ಈ ಪ್ರಕ್ರಿಯೆಯಲ್ಲಿ ಸಾಮಾನ್ಯ ಜನರನ್ನು ಒಳಗೊಂಡು ಪರಿಸರÀ ಸಂರಕ್ಷಣೆ ಮಾಡಲು ಗಿಡಗಳನ್ನು ನಾಟಿ ಮಾಡುವ ಉದ್ಯಮವಾದ ಎನಿಕೋರರ್ ಲಿಮಿಟೆಡ್ ಸ್ಥಾಪನೆಗೆ ಕಾರಣವಾಯಿತು. ಇದು ತನ್ನ ಮೊದಲ ಗಿಡದ ನರ್ಸರಿ ನೆಡುವಿಕೆಗೆ ಕಾರಣವಾಯಿತು.
೧೯೭೭ರಜೂನ್ ೫ರಂದು ವಿಶ್ವ ಪರಿಸರ ದಿನವನ್ನು ಗುರುತಿಸಿ, ನೈರೋಬಿಯಲ್ಲಿ ಮೆರವಣಿಗೆ ನಡೆಸಿತು. ಅಲ್ಲಿ ಅವರು ಐತಿಹಾಸಿಕ ಸಮುದಾಯದ ನಾಯಕರ ಗೌರವಾರ್ಥ ಏಳು ಮರಗಳನ್ನು ನೆಟ್ಟರು. ಇದು ಮೊದಲು “ಹಸಿರುಬೆಲ್ಟ್" ಎಂದು ಕರೆಯಲ್ಪಟ್ಟಿತು. ಇದನ್ನು ಮೊದಲಿಗೆ "ಸೇವ್ ದಿ ಲ್ಯಾಂಡ್ ಹರಾಮ್ಮಿ" ಅಂದರೆ, ಭೂಮಿಯನ್ನು ಉಳಿಸಲು ಎಲ್ಲರೂ ಒಟ್ಟಾಗಿ ಮುನ್ನಡೆಯೋಣಎಂದು ಕರೆಯಲಾಗುತ್ತಿತ್ತು ಮತ್ತು ನಂತರ ಹಸಿರುಬೆಲ್ಟ್ ಚಳುವಳಿ ಸಂಸ್ಥೆ ಆಯಿತು. ಇದುಕೀನ್ಯಾದ ಮಹಿಳೆಯರನ್ನು ದೇಶಾದ್ಯಂತ ಗಿಡಗಳ ಬೆಳೆಸಲು ನರ್ಸರಿಗಳನ್ನು ಮಾಡಲುಪ್ರೊÃತ್ಸಾಹಿಸಿತು.
೧೯೭೯ರಲ್ಲಿ ವಾಂಗಾರಿಮಾತೈ ದೇಶದಲ್ಲಿ ಅನೇಕ ಮಹಿಳಾ ಸಂಘಟನೆಗಳನ್ನು ಒಳಗೊಂಡ ಕೀನ್ಯಾ ಮಹಿಳೆಯರ ರಾಷ್ಟಿçÃಯ ಕೌನ್ಸಿಲ್‌ಅಧ್ಯಕ್ಷರಾದರು.ಆಗತಾನೆ ಚುನಾವಣೆಯಲ್ಲಿ ಗೆದ್ದುಕೀನ್ಯಾದ ಅಧ್ಯಕ್ಷರಾಗಿದ್ದ ಡೇನಿಯಲ್ ಅರಪ್ ಮೋಯಿ ಅವರುಸ್ವಯಂಸೇವಕ ನಾಗರಿಕ ಸಂಸ್ಥೆಗಳನ್ನೂ ಒಳಗೊಂಡಂತೆ, ದೇಶದಲ್ಲಿ ನಡೆದ ಕಿಕುಯು ಜನಾಂಗೀಯತೆಯ ಪ್ರಭಾವವನ್ನು ಮಿತಿಗೊಳಿಸಲು ಪ್ರಯತ್ನಿಸಿದ್ದರು.
೧೯೮೭ರಿಂದನಿವೃತ್ತರಾಗುವವರೆಗೂ ಎನ್ಸಿಡಬ್ಲುö್ಯಕೆ ಸಂಸ್ಥೆಯ ಅಧ್ಯಕ್ಷರಾಗಿಮಾತೈ ಸೇವೆ ಸಲ್ಲಿಸಲು ಆಯ್ಕೆಯಾದರು. ೧೯೮೨ರಲ್ಲಿ ನ್ಯಾರಿಅವರ ಹುಟ್ಟೂರನ್ನು ಪ್ರತಿನಿಧಿಸಲುನಿರ್ಧರಿಸಿದರು. ಕಾನೂನಿನ ಅಗತ್ಯದಂತೆ, ಆಕೆ ಕಚೇರಿಯಲ್ಲಿ ಪ್ರಚಾರ ಮಾಡಲು ನೈರೋಬಿ ವಿಶ್ವವಿದ್ಯಾಲಯಕ್ಕೆ ರಾಜೀನಾಮೆ ನೀಡಿದರು. ಆದರೆ, ೧೯೭೯ರಲ್ಲಿ ನಡೆದ ಕೊನೆಯ ಅಧ್ಯಕ್ಷಿÃಯ ಚುನಾವಣೆಯಲ್ಲಿ ಇವರು ಮತ ಚಲಾಯಿಸಲು ಮತ್ತೆ ನೊಂದಣಿಯಾಗಿಲ್ಲವಾದ ಕಾರಣ ನ್ಯಾಯಾಲಯಇವರಿಗೆ ಚುನಾವಣೆಗೆ ನಾಮಪತ್ರ ಸಲ್ಲಿಸಲು,ಸ್ಪರ್ಧಿಸಲು ಅನರ್ಹವೆಂದು ತೀರ್ಮಾನಿತು. ಅನಂತರ ವಿಶ್ವವಿದ್ಯಾನಿಲಯದವರು ಮತ್ತೆ ಕೆಲಸಕ್ಕೆ ಸೇರಿಕೊಳ್ಳಲು ಇವರನ್ನು ಕೇಳಿದಾಗ, ಇವರು ನಿರಾಕರಿಸಿಬಿಟ್ಟರು.
ಇವರು ವಿಶ್ವವಿದ್ಯಾನಿಲಯ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ವಿಶ್ವವಿದ್ಯಾನಿಲಯದ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರಿಂದಾಗಿ,ಅವರು ಅಲ್ಲಿನಸಿಬ್ಬಂದಿಯಾಗಿಲ್ಲವಾದ್ದರಿಂದ; ಅಲ್ಲಿಂದಲೂ ಇವರನ್ನು ಹೊರಹಾಕಲಾಯಿತು. ತದ ನಂತರ,ಇವರು ಗ್ರಿÃನ್ ಬೆಲ್ಟ್ ಚಳುವಳಿಸಂಸ್ಥೆಯ ಪಾಲುದಾರರಾದರು.ಇವರಿಗೆ ಸಂಯೋಜಕರಾಗಿ ಸ್ಥಾನ ನೀಡಲಾಯಿತು.
ಮಾತೈ ಅವರು ಹೆಚ್ಚು ವಿದ್ಯಾವಂತೆ ಆಗಿದ್ದರೂ, “ನನ್ನ ಕೈಗಳುಕೆಲಸ ಮಾಡಲು ಹಿಂಜರಿಯುವುದಲ್ಲ” ಎನ್ನುತ್ತಾ ಗ್ರಾಮೀಣ ಮಹಿಳೆಯರ ಜೊತೆಗೆ ಕೆಲಸ ಮಾಡಿದರು. ಆ ಸಮಯದಲ್ಲಿ ಅಂದರೆ ೧೯೮೦ ಮತ್ತು ೧೯೯೦ರ ದಶಕದಲ್ಲಿ ಕೆಲವು ರಾಜಕಾರಣಿಗಳು ಮತ್ತು ಇತರರು ಇವರನ್ನು ನೋಡಿಅಪಹಾಸ್ಯ ಮಾಡಿದರು. ಆದರೆ ಮಾತೈಗೆ ಅದರ ಬಗ್ಗೆ ಯಾವುದೇ ಸಮಸ್ಯೆ ಇರಲಿಲ.್ಲ ಗ್ರಾಮೀಣ ಮಹಿಳೆಯರು ತಮ್ಮ ಜೀವನ ಮತ್ತು ಪರಿಸರವನ್ನು ಸುಧಾರಿಸಲು ನಾನು ಅವರೊಂದಿಗೆ ಕೆಲಸ ಮಾಡುತ್ತಿದ್ದೆÃನೆ ಎಂದು ಇವರುಒಪ್ಪಿಕೊಂಡರು ಮತ್ತು ಮೆಚ್ಚುಗೆ ಪಡೆದರು.
೧೯೮೦ರ ದಶಕದ ಉತ್ತರಾರ್ಧದಲ್ಲಿ, ಕೀನ್ಯಾ ಸರ್ಕಾರವು ಮಾತೈ ಮತ್ತು ಹಸಿರುಬೆಲ್ಟ್ ಸಂಸ್ಥೆಯವಿರುದ್ಧ ಗಲಭೆ ಎಬ್ಬಿಸಿತು. ೧೯೮೮ರಲ್ಲಿ, ಹಸಿರುಬೆಲ್ಟ್ ಚಳುವಳಿಸಂಸ್ಥೆಯುಚುನಾವಣೆಗೆ ಮತದಾರರನ್ನು ನೊಂದಾಯಿಸುವುದು ಮತ್ತು ಸಂವಿಧಾನಾತ್ಮಕ ಸುಧಾರಣೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರö್ಯಕ್ಕಾಗಿ ಒತ್ತುವಂತಹ ಪ್ರಜಾಪ್ರಭುತ್ವದ ಪರವಾದ ಚಟುವಟಿಕೆಗಳನ್ನು ನಡೆಸಿತು.
೧೯೯೨ರಲ್ಲಿ ಸರ್ಕಾರದಿಂದ ಹಸಿರು ಬೆಲ್ಟ್ ಸದಸ್ಯನ ಬಂಧನ, ಮಾತೈ ಮತ್ತು ಇತರ ಪ್ರಜಾಪ್ರಭುತ್ವ ಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಯಿತು. ಇದನ್ನು ವಿರೋಧಿಸಿದ್ದಕ್ಕೆ ಸರ್ಕಾರ ಮಾತೈ ಅವರನ್ನ ಬಂಧಿಸಿ, ಅವರ ಮೇಲೆ ದೇಶದ್ರೊÃಹದ ಆರೋಪವನ್ನು ಹೊರಿಸಲಾಯಿತು. ಆದರೆ ಮಾತೈ ಅವರ ಕಾರ್ಯ ವೈಖರಿಯ ಪರಿಚಯವಿದ್ದ ಹಲವಾರು ಅಂತಾರಾಷ್ಟಿçÃಯ ಸಂಘಟನೆಗಳು ಕೀನ್ಯಾ ಸರ್ಕಾರದ ನಡೆಯನ್ನು ಖಂಡಿಸಿದವು. ಬೇರೆ ದಾರಿಯಿಲ್ಲದೆ, ಸರ್ಕಾರ ಮಾತೈ ಅವರನ್ನು ಆರೋಪ ಮುಕ್ತವೆಂದು ಘೋಷಿಸಿತು.
ಈ ಸಮಯದಲ್ಲಿ, ಅಂತಾರಾಷ್ಟಿçÃಯವಾಗಿ ಮಾತೈ ಗುರುತಿಸಲ್ಪಟ್ಟರು ಮತ್ತು ವಿವಿಧ ಪ್ರಶಸ್ತಿಗಳಿಗೆ ಭಾಜನರಾದರು. ಆದರೆ, ಕೀನ್ಯಾದ ಸರ್ಕಾರ ಇವರಕೆಲಸವನ್ನು ಪ್ರಶಂಸಿಸಲಿಲ್ಲ. ೧೯೯೧ರಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೊÃದಲ್ಲಿ ‘ಗೋಲ್ಡö್ಮನ್ ಪರಿಸರ ಪ್ರಶಸ್ತಿ’ ಮತ್ತು ಲಂಡನ್ನಿನ ನಾಯಕತ್ವ ಪಶಸ್ತಿಯಾದ ‘ಹಂಗರ್ ಯೋಜನೆಯ ಆಫ್ರಿಕಾ ಪ್ರಶಸ್ತಿ’ ಪಡೆದರು. ಸಿಎನ್‌ಎನ್ ಗೋಲ್ಡ್ಮನ್ ಬಹುಮಾನದ ಬಗ್ಗೆ ಮೂರು ನಿಮಿಷಗಳ ವಿಭಾಗವನ್ನು ಪ್ರಸಾರ ಮಾಡಿತು. ಆದರೆ, ಅದು ಪ್ರಸಾರವಾದಾಗ, ಕೀನ್ಯಾದಲ್ಲಿ ಅದರ ಪ್ರಸಾರವನ್ನು ನಿಷೇಧಿಸಲಾಯಿತು.೧೯೯೨ರ ಜೂನ್‌ತಿಂಗಳಲ್ಲಿ, ಮಾತೈ ಮತ್ತು ಅಧ್ಯಕ್ಷ ಅರಪ್ ಮೋಯಿ ಇಬ್ಬರೂ ರಿಯೊ ಡಿ ಜನೈರೋಗೆ ಯುಎನ್ ಸಮ್ಮೆÃಳನ ಪರಿಸರ ಮತ್ತು ಆಭಿವೃದ್ಧಿ (ಭೂಮಿ ಶೃಂಗಸಭೆ)ಗೆ ಪ್ರಯಾಣಿಸಿದರು. ಆದರೆ ಕೀನ್ಯಾ ಸರ್ಕಾರ ಮಾತೈ ಅವರನ್ನು ಶೃಂಗಸಭೆಯಲ್ಲಿ ಮಾತನಾಡಲು ಅನುಮತಿ ನೀಡಬಾರದೆಂದು ಒತ್ತಾಯಿಸಿತು. ಇದರ ಹೊರತಾಗಿಯೂ, ಮಾತೈ ಅವರನ್ನು ಶೃಂಗಸಭೆಯ ಮುಖ್ಯ ವಕ್ತಾರರಾಗಿ ಆಯ್ಕೆ ಮಾಡಲಾಯಿತು.
೧೯೯೭ರ ಚುನಾವಣೆಯಲ್ಲಿ, ಆಡಳಿತ ಪಕ್ಷವನ್ನು ಸೋಲಿಸಲು, ಮತ್ತೆ ವಿರೋಧವನ್ನು ಒಂದುಗೂಡಿಸಲು ಮಾತೈ ಬಯಸಿದರು. ಆದರೆ ಹೆಚ್ಚು ಮತಗಳನ್ನು ಪಡೆಯದೇ,ಚುನಾವಣೆಯಲ್ಲಿ ಸೋತರು. ೧೯೯೮ರ ಬೇಸಿಗೆಯಲ್ಲಿ ಖಾಸಗೀಕರಣಕ್ಕಾಗಿ ಕರೂರಾ ಅರಣ್ಯದಲ್ಲಿನ ಮರಗಳನ್ನು ಕತ್ತರಿಸಿ ಹಾಕಲು ಸರ್ಕಾರ ಯೋಜನೆಯನ್ನು ರೂಪಿಸಿತು.ಮಾತೈ ಇದನ್ನು ಸರ್ಕಾರ ಮತ್ತು ಪತ್ರಿಕಾ ಪತ್ರಗಳ ಮೂಲಕ ಪ್ರತಿಭಟಿಸಿದರು. ಇವರು ಹಸಿರು ಬೆಲ್ಟ್ ಚಳುವಳಿಯ ತಂಡದೊಂದಿಗೆಕರುರಾ ಅರಣ್ಯಕ್ಕೆ ಹೋದರು.ಮತ್ತಷ್ಟು ಗಿಡಗಳನ್ನು ನೆಡುವ ಮೂಲಕಕಾಡಿನ ನಾಶವನ್ನು ಪ್ರತಿಭಟಿಸಿದರು. ಜನವರಿ ೮, ೧೯೯೯ರಂದು ಮಾತೈ, ಆರು ವಿರೋಧ ಸಂಸದರು, ಪತ್ರಕರ್ತರು, ಅಂತಾರಾಷ್ಟಿçÃಯ ವೀಕ್ಷಕರು ಮತ್ತು ಗ್ರಿÃನ್ ಬೆಲ್ಟ್ ಸದಸ್ಯರು ಮತ್ತು ಬೆಂಬಲಿಗರು ಸೇರಿದಂತೆ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿಪಾಲ್ಗೊಂಡು, ಕಾಡಿನ ಪ್ರವೇಶವು ಒಂದು ದೊಡ್ಡ ಗುಂಪಿನಿಂದ ರಕ್ಷಿಸಲ್ಪಟ್ಟಿತು. ಮತ್ತೊಂದು ದಿನ ಗೊತ್ತುಪಡಿಸಿದ ಪ್ರದೇಶದಲ್ಲಿ ಗಿಡಗಳನ್ನುಹಾಕಲು ಪ್ರಯತ್ನಿಸಿದಾಗ,ಈಗುಂಪು ದಾಳಿಗೊಳಗಾಯಿತು. ಮಾತೈ, ನಾಲ್ಕು ಸಂಸದರು, ಕೆಲವು ಪರ್ತಕರ್ತರು ಮತ್ತು ಜರ್ಮನ್ ಪರಿಸರವಾದಿಗಳು ಸೇರಿದಂತೆ ಹಲವು ಪ್ರತಿಭಟನಾಕಾರರು ಗಾಯಗೊಂಡರು. ಪೋಲಿಸರಿಗೆ ದಾಳಿಯನ್ನು ಅವರು ವರದಿ ಮಾಡುವಾಗ, ಆಕೆಯು ಆಕ್ರಮಣಕಾರರನ್ನು ಕಾಡಿನೊಂದಿಗೆ ನುಸುಳಿ ಬರುವುದನ್ನು ನಿರಾಕರಿಸಿದರು. ಆದಾಗ್ಯೂ, ಮಾತೈ ಅವರ ಬೆಂಬಲಿಗರಿಂದ ಈ ದಾಳಿಯನ್ನು ಚಿತ್ರಿÃಕರಿಸಲಾಯಿತು ಮತ್ತು ಈ ಘಟನೆಯು ಅಂತಾರಾಷ್ಟಿçÃಯ ಆಕ್ರೊÃಶವನ್ನು ಕೆರಳಿಸಿತು. ನೈರೋಬಿಯಾದ್ಯಂತ ವಿದ್ಯಾರ್ಥಿ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನೆಗಳು ೧೯೯೯ರಆಗಸ್ಟ್ರವರೆಗೂ ಮುಂದುವರೆದವು. ಅನಂತರಸಾರ್ವಜನಿಕಭೂಮಿ ಹಂಚಿಕೆಯನ್ನು ನಿಷೇಧಿಸಲಾಗಿದೆಎಂದು ಘೋಷಿಸಿದರು.
೨೦೦೧ರಲ್ಲಿ ಸರ್ಕಾರ ಮತ್ತೆ ಸಾರ್ವಜನಿಕ ಕಾಡು ಕರೂರಾ ಅರಣ್ಯದ ಭೂಮಿಯನ್ನು ಹಂಚಿಕೆ ಮಾಡಲು ಯೋಚಿಸಿತು. ಇದನ್ನು ನಿಷೇಧಿಸಿ ಎಂದು೨೦೦೧ರ ಮಾರ್ಚ್ ೭ರಂದು ಅರ್ಜಿ ಸಲ್ಲಿಸಿದಾಗ ಮಾತೈ ಅವರನ್ನು ಮತ್ತೊಮ್ಮೆ ಬಂಧಿಸಲಾಯಿತು. ಮರುದಿನ, ಇದು ಅಂತಾರಾಷ್ಟಿçÃಯ ಪ್ರತಿಭಟನೆ ಎಂದು ಜನಪ್ರಿಯತೆ ಪಡೆದುಕೊಂಡ ನಂತರ ಮಾತೈ ಅನ್ನು ಆರೋಪಿಸದೆ, ಬಿಡುಗಡೆಗೊಳಿಸಿದರು.
೨೦೦೧ರ ಜುಲೈ ೭ರಂದು, ಸಬ ಸಬಾ ದಿನಾಚರಣೆಯ ಸ್ಮರಣಾರ್ಥವಾಗಿ ನೈರೋಬಿಯ ಉಹುರು ಪಾರ್ಕಿನಲ್ಲಿ ಸ್ವಾತಂತ್ರö್ಯ ಕಾರ್ನರ್ ನಲ್ಲಿಗಿಡಗಳನ್ನುನೆಟ್ಟ ನಂತರ ಮಾತೈ ಮತ್ತೊಮ್ಮೆ ಬಂಧಿಸಿ ಬಿಡುಗಡೆ ಮಾಡಲಾಯಿತು.ಜನವರಿ ೨೦೦೨ ಮಾತೈ ಯಾಲೆವಿಶ್ವವಿದ್ಯಾನಿಲಯದ ಅರಣ್ಯ ಮತ್ತು ಪರಿಸರ ಅಧ್ಯಯನಗಳ ಸಂರಕ್ಷಣೆಗಾಗಿ ‘ಡೊರೊಥಿ ಮ್ಯಾಕ್ಕ÷್ಲ ಸ್ಕಿಯ ಫೆಲೋ’ ಆಗಿ ಬೋಧನೆಗೆ ಮರಳಿದರು. ಜೂನ್ ೨೦೦೨ರವರೆಗೆ ಹಸಿರುಬೆಲ್ಟ್ ಚಳುವಳಿಯ ಕೆಲಸದ ಮೇಲೆ ಕೇಂದ್ರಿÃಕರಿಸಿದ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಭೋದಿಸಿದರು.
ಕೀನ್ಯಾಗೆ ಹಿಂತಿರುಗಿದ ನಂತರ, ಮಾತೈ ೨೦೦೨ರ ಚುನಾವಣೆಯಲ್ಲಿ ಮತ್ತೆ ಸಂಸತ್ತಿನ ಚುನಾವಣೆಯಲ್ಲಿ ಸ್ಫರ್ಧಿಸಿದರು. ಈ ಬಾರಿ ರಾಷ್ಟಿçÃಯ ರೇನ್ಬೊà ಒಕ್ಕೂಟದ ಅಭ್ಯರ್ಥಿಯಾಗಿ, ಆಡಳಿತ ಪಕ್ಷದ ಕೀನ್ಯಾ ಆಫ್ರಿಕಾದ ರಾಷ್ಟಿçÃಯ ಒಕ್ಕೂಟವನ್ನು ಸೋಲಿಸಿತು ಮತ್ತು ಮಾತೈ ಶೇಕಡಾ ೯೮ರಷ್ಟು ಅಂತರದಿಂದ ಅತಿದೊಡ್ಡ ಜಯಗಳಿಸಿದರು. ೨೦೦೩ರ ಜನವರಿಯಲ್ಲಿ, ಅವರುಸಚಿವಾಲಯದ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಹಾಯಕ ಮಂತ್ರಿಯಾಗಿ ನೇಮಕಗೊಂಡರು ಮತ್ತು ನವೆಂಬರ್ ೨೦೦೫ರವರೆಗೂ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಹಸಿರುಬೆಲ್ಟ್ ಚಳುವಳಿಯಿಂದ ರೂಪಿಸಲ್ಪಟ್ಟ ಸಂರಕ್ಷಣಾ ವೇದಿಕೆಗೆ ಅಭ್ಯರ್ಥಿಗಳನ್ನು ಅನುವು ಮಾಡಿಕೊಡಲು ಅವರು ೨೦೦೩ರಲ್ಲಿ ಕೀನ್ಯಾದ ಮಜಿಂಗೈರಾ ಗ್ರಿÃನ್ ಪಾರ್ಟಿಯನ್ನು ಸ್ಥಾಪಿಸಿದರು. ಇದು ಆಫ್ರಿಕಾದ ಹಸಿರು ಪಕ್ಷಗಳ ಒಕ್ಕೂಟ ಮತ್ತು ಗ್ಲೊÃಬಲ್ ಗ್ರಿÃನ್‌ನ ಸದಸ್ಯ.
"ಸಮರ್ಥನೀಯ ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ಶಾಂತಿಗಾಗಿ ಕೊಡುಗೆ" ನೀಡಿದ್ದಕ್ಕಾಗಿ ವಾಂಗಾರಿ ಮಾತೈಗೆ ೨೦೦೪ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ನಾರ್ವೆಯ ನೊಬೆಲ್ ಸಮಿತಿಯ ಅಂದಿನ ಅಧ್ಯಕ್ಷೆ ಓಲೆ ಡನ್ಬೊÃಲ್ಟ್ ಮಾಜೋಸ್ ಅವರು ಅಕ್ಟೊÃಬರ್ ೮ರಂದು ಈ ಸಿಹಿಸುದ್ದಿಯ ಬಗ್ಗೆ ಕರೆ ಮಾಡಿ ತಿಳಿಸಿದರು. ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಅವರು ಆಫ್ರಿಕಾದಮೊದಲ ಮಹಿಳೆ ಮತ್ತು ಮೊದಲ ಪರಿಸರವಾದಿಯಾಗಿದ್ದರು.ಕೀನ್ಯಾ ದಬ್ಬಾಳಿಕೆಯ ಆಡಳಿತಕ್ಕೆ ವಿರುದ್ಧವಾಗಿ ಮಾತೈ ಧೈರ್ಯದಿಂದ ನಿಂತರು. ಅವರ ವಿಶಿಷ್ಟ ಸ್ವರೂಪದ ಕ್ರಮಗಳು ರಾಜಕೀಯ ದಬ್ಬಾಳಿಕೆ-ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯವಾಗಿ ಗಮನ ಸೆಳೆಯಿತು.ಹಾಗೆಯೇ,ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಡಿ ಅನೇಕರಿಗೆ ಮಾದರಿಯಾದರು.ಮತ್ತು ವಿಶೇಷವಾಗಿ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಲು ಪ್ರೊÃತ್ಸಾಹಿಸಿದರು.
೨೮ ಮಾರ್ಚ್ ೨೦೦೫ರಂದು, ಆಫ್ರಿಕಾದ ಒಕ್ಕೂಟದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕ÷್ಕೃತಿಕ ಸಲಹಾ ಮಂಡಳಿಯಅಧ್ಯಕ್ಷರಾಗಿ ಮಾತೈ ಆಯ್ಕೆಯಾದರು ಮತ್ತು ಕಾಂಗೋ ಜಲಾನಯನ ಅರಣ್ಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಉದ್ದೆÃಶಕ್ಕಾಗಿ ರಾಯಭಾರಿಯಾಗಿ ನೇಮಕಗೊಂಡರು. ೨೦೦೬ರಲ್ಲಿ ಚಳಿಗಾಲದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಎಂಟು ಧ್ವಜ-ಧಾರಕಗಳಲ್ಲಿ ಒಬ್ಬರಾಗಿದ್ದರು. ಮೇ ೨೧, ೨೦೦೬ರಂದು, ಅವರಿಗೆ ಗೌರವಾನ್ವಿತ ಡಾಕ್ಟರೇಟ್ ನೀಡಲಾಯಿತು. ನವೆಂಬರ್ ೨೦೦೬ರಲ್ಲಿ ಅವರು ಯುನೈಟೆಡ್ ನೇಷನ್ಸ್ ಬಿಲಿಯನ್ ಟ್ರಿÃ ಕ್ಯಾಂಪಸ್‌ಗೆಮುಂದಾಳತ್ವ ವಹಿಸಿದರು.
ಜೂನ್ ೨೦೦೯ರಲ್ಲಿ, ಮಾತೈ ಅವರನ್ನು “ಮೊದಲ ಶಾಂತಿ ವೀರರಲ್ಲಿ ಒಬ್ಬರು” ಎಂದು ಹೆಸರಿಸಲಾಯಿತು. ೨೦೧೧ರಲ್ಲಿ ಆಕೆಯ ಮರಣದವರೆಗೂ, ಮಥಾಯ್ ಆಫ್ರಿಕಾದ ಶ್ರೆÃಷ್ಠ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು. ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾತೈರವರು ೨೫ ಸೆಪ್ಟೆಂಬರ್ ೨೦೧೧ರಂದು ವಿಧಿವಶರಾದರು. ಅನಂತರ ೨೦೧೨ರಲ್ಲಿ ಅಂತರಾಷ್ಟಿçÃಯ ಅರಣ್ಯ ವಿಚಾರಗಳ ಕುರಿತು ೧೪ ಸಂಘಟನೆಗಳು, ಕಾರ್ಯದರ್ಶಿಗಳು ಮತ್ತು ಸಂಸ್ಥೆಗಳ ಅಂತಾರಾಷ್ಟಿçÃಯ ಒಕ್ಕೂಟವು ವಾಂಗಾರಿ ಮಾತೈ ಅವರ ಹೆಸರಿನಲ್ಲಿ ವಾಂಗಾರಿ ಮಾತೈ ಅರಣ್ಯ ಚಾಂಪಿಯನ್ ಅಂತಾರಾಷ್ಟಿçÃಯ ಪ್ರಶಸ್ತಿಯನ್ನು ಪ್ರಾರಂಭಿಸಿದರು. ಆ ವರ್ಷದಲ್ಲಿ ನಾರಾಯಣ್ ಕಾಜಿ ಶ್ರೆಸ್ತಾ ವಿಜೇತರಾಗಿದ್ದರು. ಪಿಟ್ಸ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ವಾಂಗಾರಿ ಮಾತೈ ನೆನಪಿಗಾಗಿ ೨.೭ ಎಕರೆ ಸುಮದಾಯ ತೋಟವನ್ನು ನಿರ್ಮಿಸಿದ್ದಾರೆ. ಇಂತಹ ದಿಟ್ಟತನದಿಂದ ಪರಿಸರದ ಅದರಲ್ಲೂ ಅರಣ್ಯದ ಉಳಿವಿಗಾಗಿ ಹೋರಾಡುವಂತಹ ವ್ಯಕ್ತಿಗಳು ಪ್ರತೀ ದೇಶದಲ್ಲಿಯೂಮುಂದೆ ಬಂದರೆ ಕಾಡು ನಾಶವಾಗುವುದಿಲ್ಲ, ಕಾಡ ನಾಶವಾಗದಿದ್ದರೆ ಮಾಲಿನ್ಯ ಉಂಟಾಗುವುದಿಲ್ಲ. ಮಾಲಿನ್ಯವಿಲ್ಲದಿದ್ದರೆ, ಮನುಷ್ಯರು ಅತಿ ಹೆಚ್ಚಿನ ದೇಹದ ತೊಂದರೆಗೆ ಒಳಗಾಗುವುದಿಲ್ಲ. ಆದ್ದರಿಂದ ಹಸಿರೇ ಉಸಿರು. ಕಾಡು ಬೆಳೆಸಿ ನಾಡನ್ನು ಉಳಿಸಿರಿ.
ಕಾಡು ಸಂರಕ್ಷಿಸಿ ನೊಬೆಲ್ ಪ್ರಶಸ್ತಿ ಗೆದ್ದ ಪರಿಸರವಾದಿ ಡಾ. ವಾಂಗಾರಿ ಮಾತೈ
24 July, 2019 1:54 PM IST