News

ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್‌! ಅಚ್ಚರಿಯಾದರೂ ಇದೂ ಸತ್ಯ..

04 July, 2022 5:33 PM IST By: Kalmesh T
The mayor of Mexico who married a crocodile!

ಏನಪ್ಪ ಯಾರಾದರೂ ಮೊಸಳೆಯನ್ನ ಮದುವೆ ಆಗ್ತಾರಾ ಅಂತ ನಿಮಗೆಲ್ಲ ಅಚ್ಚರಿ ಅಥವಾ ಸಂಶೈ ಆಗ್ತ ಇರಬಹುದು. ಆದರೆ ಇದು ನಿಜ. ಇಲ್ಲಿದೆ ಈ ಕುರಿತು ಸಂಪೂರ್ಣ ವಿವರ.

ಇದನ್ನೂ ಓದಿರಿ: ಹಸುವಿನ ಸಗಣಿಯಿಂದ ಆಭರಣ ತಯಾರಿಸಿ ಆದಾಯ ಗಳಿಸುತ್ತಿರುವ ಸ್ವಾವಲಂಬಿ ಮಹಿಳೆಯರು! ಹೇಗೆ ಗೊತ್ತೆ?

ಮೆಕ್ಸಿಕೋದಲ್ಲಿ ಮೇಯರ್ ಮೊಸಳೆಯನ್ನೇ ವಿವಾಹವಾಗಿದ್ದಾರೆ. ಅಚ್ಚರಿಯಾದರೂ ಇದು ನಿಜ. ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ವರ್ಣರಂಜಿತ ಸಮಾರಂಭದಲ್ಲಿ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾರೆ. 

ಈ ಮದುವೆ ಸಮಾರಂಭಕ್ಕೆ ಅನೇಕರು ಸಾಕ್ಷಿಯಾಗಿದ್ದು, ನೃತ್ಯ ಮತ್ತು ಸಂಗೀತ ಮೊಳಗಿದಾಗ ಮೇಯರ್ ಮೊಸಳೆಗೆ ಕಿಸ್ ಮಾಡಿದ್ದಾರೆ. ಈ ವಿಶಿಷ್ಠ ವಿವಾಹಕ್ಕೆ ಮಹತ್ವದ ಉದ್ದೇಶವಿದೆ.

ಸಂಪ್ರದಾಯದ ಪ್ರಕಾರ ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಿ, ಬೆಳೆ ಬೆಳೆಯಬೇಕಿದ್ದರೆ ಪ್ರಕೃತಿಯ ವರದಾನದ ಅಗತ್ಯವಿದೆ.

ಹೀಗಾಗಿ ಅಲ್ಲಿನ ಸ್ಥಳೀಯ ನಾಯಕರು ಮೊಸಳೆಯನ್ನು ವಿವಾಹವಾಗುವ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

ಈ ವೇಳೆ ಮೊಸಳೆ ಕಚ್ಚದಿರಲಿ ಎಂದು ಅದರ ಬಾಯಿಗೆ ಹಗ್ಗ ಕಟ್ಟಲಾಗಿತ್ತು. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು ಎಂದು ಹೇಳಲಾಗಿದೆ.

ಪುಟ್ಟ ರಾಜಕುಮಾರಿ ಅಂತಾ ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ. ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವಾಗುವುದನ್ನು ಮಾನವ ಮತ್ತು ದೈವಿಕ ಬಾಂಧವ್ಯದ ಸಂಕೇತವೆಂಬ ನಂಬಿಕೆ ಅಲ್ಲಿ ರೂಢಿಯಲ್ಲಿದೆಯಂತೆ.

ಮದುವೆ ವೇಳೆ ಸ್ಥಳೀಯರು ವಧು ಮೊಸಳೆಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.

#ರೈತರೊಬ್ಬರಿಂದ ಬೀಜರಹಿತ ಕಲ್ಲಂಗಡಿ ಕೃಷಿ ಪ್ರಯೋಗ! ವಿದೇಶದಿಂದ ನೋಡಲು ಬಂದ ಸಂಶೋಧಕರು!

ಸ್ಯಾನ್ ಪೆಡ್ರೊ ಹ್ಯುಮೆಲುಲಾದಲ್ಲಿನ ಹಳೆಯ ಆಚರಣೆಯು ಈಗ ಕ್ಯಾಥೊಲಿಕ್ ಆಧ್ಯಾತ್ಮಿಕತೆಯೊಂದಿಗೆ ಬೆರೆತಿದೆ. ಮೊಸಳೆಗೆ ಬಿಳಿ ಮದುವೆಯ ಡ್ರೆಸ್ ಜೊತೆಗೆ ಇತರ ವರ್ಣರಂಜಿತ ಉಡುಪುಗಳಲ್ಲಿ ಧರಿಸಿ ಅದ್ದೂರಿ ಸಮಾರಂಭ ನಡೆಸಲಾಗುತ್ತದೆ. 

ನನ್ನ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲದ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ಈ ಆಚರಣೆಯಿಂದ ತುಂಬಾ ಸಂತೋಷವಾಗಿದೆಎಂದು ವಿವಾಹ ಆಯೋಜಿಸಿದ್ದ ದೇವಮಾತೆ ಎಂದು ಕರೆಸಿಕೊಳ್ಳುವ ಎಲಿಯಾ ಎಡಿತ್ ಆಗ್ವಿಲರ್ ಹೇಳಿದ್ದಾರೆ.