News

2020ರಲ್ಲಿ ನಮ್ಮನ್ನಗಲಿದ ದಿಗ್ಗಜರು, ಬನ್ನಿ ಒಮ್ಮೆ ಹಿಂತಿರುಗಿ ನೋಡೋಣ

27 December, 2020 7:21 AM IST By:
 2020 ಈ ವರ್ಷ ನಾವು ಅನೇಕ ದಿಗ್ಗಜರನ್ನು ಕಳೆದುಕೊಂಡಿದ್ದೇವೆ, ಮುಂಚೆಯಿಂದಲೇ ಕೋರೋಣ ಹೊತ್ತುಬಂದ ಈ ವರ್ಷದಲ್ಲಿ ನಾವು ಅನೇಕ ದಿಗ್ಗಜರನ್ನು ಕಳೆದುಕೊಂಡೆವು, ಬನ್ನಿ ಒಮ್ಮೆ ಹಿಂತಿರುಗಿ ನೋಡಿ ನಾವು ಕಳೆದುಕೊಂಡವರನ್ನು ನೆನೆಸಿಕೊಳ್ಳೋಣ.
1. ಇರ್ಫಾನ್ ಖಾನ್
ಬಾಲಿವುಡ್ ಕಂಡಂತಹ ಒಬ್ಬ ಅತ್ಯುತ್ತಮ ನಟರಾಗಿದ್ದವರು ವರ್ಷ ಕಳೆದುಕೊಂಡೆವು, ನ್ಯೂರೋಎಂಡೋಕ್ರೈನ್ ಗೆಡ್ಡೆಯನ್ನು ಪತ್ತೆಹಚ್ಚಿದ ಎರಡು ವರ್ಷಗಳ ನಂತರ ನಿಧನರಾದರು. ಏಪ್ರಿಲ್ 29, 2020 ರಂದು ನಿಧನರಾದರು 
2. ರಿಷಿ ಕಪೂರ್
 ಇರ್ಫಾನ್ ಖಾನ್ ಅವರು ತೀರಿಕೊಂಡ  ಒಂದು ದಿನದ ನಂತರ ಬಾಲಿವುಡ್ನ ಮತ್ತೊಂದು ನಕ್ಷತ್ರವೇ ಉರುಳಿ ಹೋಯಿತು, ಅದು ಬೇರೆ ಯಾರು ಅಲ್ಲ ಬಾಲಿವುಡ್ನ ರಿಷಿ ಕಪೂರ್, ಇವರು ಕೂಡ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಏಪ್ರಿಲ್ 30, 2020 ರಂದು ನಿಧನರಾದರು 
3 ಸುಶಾಂತ್ ಸಿಂಗ್ ರಜಪೂತ 
 ಬಾಲಿವುಡ್ ನ ಯುವ ಪ್ರತಿಭೆ ಹಾಗೂ ಬಾಲಿವುಡ್ ನ ಮುಂದಿನ ಒಬ್ಬ ಅತ್ಯುತ್ತಮ ನಟ ಎಂದೇ ಹೆಸರುವಾಸಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಎಳೆಯ ವಯಸ್ಸಿನಲ್ಲಿ ಅಂದರೆ ಕೇವಲ 34 ವಯಸ್ಸಿಗೆ ತಮ್ಮ ಜೀವನ ಯಾತ್ರೆಯನ್ನು ಮುಗಿಸಿದರು. ಅವರ ಸಾವಿಗೆ ಇನ್ನೂ ನಿಜವಾದ ಕಾರಣ ಹೊರಬಂದಿಲ್ಲ.ಇವರು 2020 ರ ಜೂನ್ 14 ರಂದು ನಿಧನರಾದರು.
4.ಪಂಡಿತ್ ಜಸರಾಜ್
 ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದಂತಹ ಪಂಡಿತ್ ಬಸರಾಜ ಅವರನ್ನು ಕೂಡ ನಾವು ಈ ವರ್ಷ ಕಳೆದುಕೊಂಡೆವು, ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದರು, ಇವರು ಆಗಸ್ಟ್ 17, 2020 ರಂದು ನಿಧನರಾದರು.
5 ಚಾಡ್ವಿಕ್ ಬೋಸ್‌ಮನ್
ಬ್ಲ್ಯಾಕ್ ಪ್ಯಾಂಥರ್' ನಲ್ಲಿ ಕಿಂಗ್ ಟಿ ಚಲ್ಲಾ ಪಾತ್ರವನ್ನು ನಿರ್ವಹಿಸಿದ ಚಾಡ್ವಿಕ್ ಬೋಸ್ಮನ್, ಲಾಸ್ ಏಂಜಲೀಸ್ನಲ್ಲಿ ಕೊಲೊನ್ ಕ್ಯಾನ್ಸರ್ನೊಂದಿಗೆ ನಾಲ್ಕು ವರ್ಷಗಳ ಯುದ್ಧದ ನಂತರ ನಿಧನರಾದರು.ಇವರು ಆಗಸ್ಟ್ 28, 2020 ರಂದು ನಿಧನರಾದರು.
6.ಪ್ರಣಬ್ ಮುಖರ್ಜಿ
 ಭಾರತ ದೇಶದ ಮಾಜಿ ರಾಷ್ಟ್ರಪತಿಗಳಾದ ಅಂತಹ ಪ್ರಣಬ್ ಮುಖರ್ಜಿಯವರು ತಮ್ಮ 84ನೇ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು, ಆಗಸ್ಟ್ 31 2020 ರಂದು ದೀರ್ಘ ಅನಾರೋಗ್ಯದ ಕಾರಣದಿಂದಾಗಿ ತೀರಿಕೊಂಡರು.
7.ಎಸ್ಪಿ ಬಾಲಸುಬ್ರಹ್ಮಣ್ಯಂ 
 ಸಂಗೀತ ಲೋಕದಲ್ಲಿ ತಮ್ಮದೇ ಆದಂತಹ ಒಂದು ಹೆಸರನ್ನು ಗಳಿಸಿದ್ದ ಅಂತಹ ಖ್ಯಾತ ಗಾಯಕರಾದ ಅಂತಹ ಎಸ್ ಪಿ ಬಾಲಸುಬ್ರಮಣ್ಯ ಅವರನ್ನು ಈ ವರ್ಷ ಕಳೆದುಕೊಂಡೆವು. ಇವರು ಮೂಲತಃ ಕನ್ನಡದವರಾಗಿ ಇಲ್ಲದಿದ್ದರೂ ಕೂಡ ಅವರ ಹಾಡುಗಳು ಭಾವನೆಗಳ ಮೂಲಕ ಪ್ರತಿಯೊಬ್ಬರ ಕನ್ನಡಿಗರ ಮನವನ್ನು ಮುಟ್ಟುತಿದ್ದರು. ಇವರು ಸೆಪ್ಟೆಂಬರ್ 25, 2020 ರಂದು ನಿಧನರಾದರು. 
8. ಚಿರಂಜೀವಿ ಸರ್ಜಾ
 ಕನ್ನಡ ಚಿತ್ರರಂಗದ ಒಬ್ಬ ಅದ್ಭುತ ನಟರಾದ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಮ್ಮನ್ನೆಲ್ಲ ಅಗಲಿದರು, ತಮ್ಮ ಹೆಂಡತಿ ಗರ್ಭಿಣಿಯಾಗಿರುವಾಗ ಅವರು ತೀರಿಕೊಂಡಿದ್ದು ಮತ್ತೊಂದು ದುಃಖಕರ ಸಂಗತಿ ಎಂದು ಹೇಳಬಹುದು, ಅವರು ತೀರಿಕೊಂಡ ನಂತರ ಅವರ ಮಗು ಹುಟ್ಟಿದ್ದು ತಂದೆಯನ್ನು ನೋಡಲು ಅದಕ್ಕೆ ಅವಕಾಶ ಸಿಗಲಿಲ್ಲ, ಚಿರಂಜೀವಿ ಸರ್ಜಾ ಅವರು ಇಳಿವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು.

ಇವರಷ್ಟೇ ಅಲ್ಲ 2020ರಲ್ಲಿ ನಾವು ಇನ್ನೂ ಅನೇಕ ದಿಗ್ಗಜರನ್ನು ಕಳೆದುಕೊಂಡಿದ್ದೇವೆ, ಅವರನ್ನು ಸ್ಮರಿಸುತ್ತಾ ಈ ಒಂದು ಲೇಖನವನ್ನು ಇಲ್ಲಿಗೆ ಮುಗಿಸೋಣ.