News

ಬೋರವೆಲ್ ಕೊರೆಸಲು ಈ ಯೋಜನೆಯಡಿ  ಸರ್ಕಾರವೇ ನಿಮಗೆ ನೀಡುತ್ತೆ ದುಡ್ಡು

25 May, 2022 3:54 PM IST By: Maltesh
Borewell

ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಹರಿಯುವ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ನೆಲದಡಿಯಲ್ಲಿ ಕೊಳವೆಬಾವಿಯನ್ನು ಕೊರೆದು, ನಂತರ ನೀರು ಸಂಗ್ರಹಿಸಲು ಟ್ಯಾಂಕ್‌ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನುಒದಗಿಸಲಾಗುತ್ತದೆ.

ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿAದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆಬಾವಿ ಕೊರೆಯಿಸಿ ಅದಕ್ಕೆ ನಿಗಮದಿಂದ ಪಂಪ್‌ಸೆಟ್‌ನ್ನು ಅಳವಡಿಸಲಾಗುವುದು. ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ.1.50 ಲಕ್ಷವಾಗಿದೆ.

ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯ ಉದ್ದೇಶ

ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯ ಮುಖ್ಯ ಉದ್ದೇಶವೆಂದರೆ ರೈತರಿಗೆ ಬೋರ್‌ವೆಲ್‌ಗಳನ್ನು ಕೊರೆಯುವ ಮೂಲಕ ಅಥವಾ ತೆರೆದ ಬಾವಿಗಳನ್ನು ತೋಡಿದ ನಂತರ ಪಂಪ್‌ಸೆಟ್‌ಗಳು ಮತ್ತು ಪರಿಕರಗಳನ್ನು ಅಳವಡಿಸುವ ಮೂಲಕ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು. ಈ ಯೋಜನೆಯು ರೈತರಿಗೆ ಸರಿಯಾದ ನೀರಾವರಿ ಸೌಲಭ್ಯವನ್ನು ಖಚಿತಪಡಿಸುತ್ತದೆ.

Atal Pension Yojana: 4 ಕೋಟಿಗೂ ಹೆಚ್ಚು ಜನರಿಗೆ ಲಾಭವಾದ ಈ ಯೋಜನೆಯ ಲಾಭ ನೀವು ಪಡೆದಿದ್ದೀರಾ?

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಈಗ ರೈತರು ಕೊಳವೆಬಾವಿಗಳನ್ನು ಅಳವಡಿಸಲು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿಲ್ಲ. ಅವರು ಈ ಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಇದು ಸಾಕಷ್ಟು ಸಮಯ ಮತ್ತು ಹಣವನ್ನು ಉಳಿಸುತ್ತದೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ. ಇದಲ್ಲದೆ, ಈ ಯೋಜನೆಯು ಬೆಳೆಗಳ ಗುಣಮಟ್ಟವನ್ನು ಸುಧಾರಿಸುತ್ತದೆ.

ಯಾರಿಗೆ ಯೋಜನೆ ಅನ್ವಯವಾಗುತ್ತದೆ..?

ಈ ಯೋಜನೆಯಡಿಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಾಪ್ತಿಗೆ ಬರುವ ಆದಿಜಾಂಬವ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ದೇವರಾಜು ಅರಸು ಅಭಿವೃದ್ಧಿ ನಿಗಮ ಸೇರಿದಂತೆ ಒಟ್ಟು 8 ನಿಗಮಗಳು.

Breaking News: ಗ್ರಾಹಕರ ಹಕ್ಕುಗಳ ಉಲ್ಲಂಘನೆ; Ola ಮತ್ತು Uber ಗೆ ನೋಟಿಸ್‌..!

Subsidy: ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರಿಗೆ ಸಿಗಲಿದೆ ₹27000 ಸಹಾಯಧನ..!

ಯೋಜನೆಯಡಿ, ನೈಸರ್ಗಿಕವಾಗಿ ನದಿ, ತೊರೆ, ನಾಲೆಗಳ ಅಕ್ಕಪಕ್ಕದಲ್ಲಿರುವ ಪರಿಶಿಷ್ಟ ಪಂಗಡದ ಕನಿಷ್ಟ 3 ಸಣ್ಣ ಮತ್ತು ಅತಿ ಸಣ್ಣ ರೈತರುಗಳ ಜಮೀನುಗಳಿಗೆ ಪಂಪ್ಸೆಟ್ ಮತ್ತು ಪೈಪ್ಲೈನ್  ಅಳವಡಿಸಿ ಉಚಿತವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು.

ಅಗತ್ಯವಾದ ದಾಖಲೆಗಳು

ಯೋಜನಾ ವರದಿ

ಜಾತಿ ಪ್ರಮಾಣ ಪತ್ರ

ಆದಾಯ ಪ್ರಮಾಣಪತ್ರ

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಶೇ.14% ರಷ್ಟು ತುಟ್ಟಿಭತ್ಯೆ ಹೆಚ್ಚಳ..!

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

ಆಧಾರ್ ಕಾರ್ಡ್

ಬಿಪಿಎಲ್ ಕಾರ್ಡ್

ಇತ್ತೀಚಿನ RTC

ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರ

ಬ್ಯಾಂಕ್ ಪಾಸ್ ಬುಕ್ ನ ಪ್ರತಿ

ಭೂ ಕಂದಾಯ ಪಾವತಿಸಿದ ರಸೀದಿ

ಸ್ವಯಂ ಘೋಷಣೆ ರೂಪ