ದೇಶದಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನೇಕ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುತ್ತವೆ. ಇವುಗಳ ಅಡಿಯಲ್ಲಿ ದೇಶದ ಬಡವರು, ನಿರ್ಗತಿಕರು ಮತ್ತು ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಸದ್ಯ ದೇಶದ ರಾಜಧಾನಿ ದೆಹಲಿ ಸರ್ಕಾರವು ಕೂಡ ಸಾರ್ವಜನಿಕರಿಗಾಗಿ ಅನೇಕ ವಿಶೇಷ ಯೋಜನೆಗಳನ್ನು ರೂಪಿಸಿದೆ. ಇಂದು ನಾವು ಹೆಣ್ಣು ಮಗಳಿಗೆ ಸರ್ಕಾರದಿಂದ ಸಂಪೂರ್ಣ 11,000 ರೂಪಾಯಿಗಳನ್ನು ನೀಡುವ ಸರ್ಕಾರಿ ಯೋಜನೆಯ ಬಗ್ಗೆಈ ಲೇಖನದಲ್ಲಿ ತಿಳಿಸುತ್ತೇವೆ.
ಏನಿದು ಲಾಡ್ಲಿ ಯೋಜನೆ?
ದೆಹಲಿ ಸರ್ಕಾರ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಲಾಡ್ಲಿ ಹೆಸರಿನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಸರ್ಕಾರವು ಹಣ್ಣು ಮಗುವಿಗೆ 5 ಸಾವಿರದಿಂದ ಹಿಡಿದು 11 ಸಾವಿರದ ವರೆಗೆ ಆರ್ಥಿಕ ನೆರವನ್ನು ಒದಗಿಸುವ ಸೌಲಭ್ಯವನ್ನು ನೀಡುತ್ತಿದೆ. ಈ ಯೋಜನೆಯನ್ನು 2008ರಲ್ಲಯೇ ಜಾರಿಗೆ ತಂದಿದ್ದು, ಸಾಕಷ್ಟು ಜನಪ್ರಿಯವಾದ ಯೋಜನೆಗಳಲ್ಲಿ ಇದು ಕೂಡಾ ಒಂದಾಗಿದೆ. ಇನ್ನು ಈ ಯೋಜನೆಗೆ ಆನ್‌ಲೈನ್ ಹಾಗೂ ಆಪ್‌ಲೈನ್ ಮೂಡ್‌ನಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುದು.
11000 ರೂ.ವರೆಗೆ ಆರ್ಥಿಕ ಸಹಾಯ
ಈ ಸರ್ಕಾರದ ಯೋಜನೆಯಡಿಯಲ್ಲಿ ಮಗುವಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. 5000 ರೂ.ನಿಂದ 11000 ರೂ.ವರೆಗೆ ಹಣ ಸಿಗಲಿದ್ದು, ಹೆಣ್ಣು ಮಗು ಹತ್ತನೇ ತರಗತಿ ಉತ್ತೀರ್ಣರಾದ ನಂತರ ಅಥವಾ ಹೆಣ್ಣು ಮಗುವಿಗೆ 18 ವರ್ಷ ವಯಸ್ಸಾಗಿದ್ದರೆ, ಆಕೆ ಮೆಚ್ಯೂರಿಟಿ ಮೊತ್ತಕ್ಕೆ ಕ್ಲೈಮ್ ಮಾಡಬಹುದು.
ಅರ್ಜಿ ಸಲ್ಲಿಸುವುದು ಹೇಗೆ-
ದೆಹಲಿಯ ಖಾಯಂ ನಿವಾಸಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಹರು
ಹೆಣ್ಣು ಮಗುವಿನ ಕುಟುಂಬದ ವಾರ್ಷಿಕ ಆದಾಯ ₹ 100000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸುವ ಹುಡುಗಿ ದೆಹಲಿಯಲ್ಲಿ ಜನಿಸಿರಬೇಕು.
ಒಂದು ಕುಟುಂಬದ 2 ಹೆಣ್ಣು ಮಕ್ಕಳು ಮಾತ್ರ ಯೋಜನೆಯ ಲಾಭ ಪಡೆಯಬಹುದು.
ಇದಲ್ಲದೇ ಮಗಳ ಹೆಸರನ್ನು ಮಾನ್ಯತೆ ಪಡೆದ ಶಾಲೆಯಲ್ಲಿ ನೋಂದಾಯಿಸಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ
,ಹೆಣ್ಣು ಮಗುವಿನ ಪೋಷಕರ ಆಧಾರ್ ಕಾರ್ಡ್ ಅಗತ್ಯವಿದೆ. ಇದಲ್ಲದೆ ಆದಾಯ ಪ್ರಮಾಣ ಪತ್ರ, ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಹೆಣ್ಣು ಮಗುವಿನೊಂದಿಗೆ ಪೋಷಕರ ಭಾವಚಿತ್ರ, ಕಳೆದ 3 ವರ್ಷಗಳ ವಾಸಸ್ಥಳ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಪಾಸ್‌ಬುಕ್ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ
ನೀವು ಮೊದಲು ಅಧಿಕೃತ ವೆಬ್‌ಸೈಟ್ ಗೆ ಹೋಗಬೇಕು. ಈಗ ಮುಖಪುಟ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಮುಖಪುಟದಲ್ಲಿ, ನೀವು ದೆಹಲಿ ಲಾಡ್ಲಿ ಸ್ಕೀಮ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನೀವು ದೆಹಲಿ ಲಾಡ್ಲಿ ಸ್ಕೀಮ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ನೀವು ಅರ್ಜಿ ನಮೂನೆಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು.