News

ಗುಡ್‌ನ್ಯೂಸ್‌: ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸುವುದಾಗಿ ಹೈಕೋರ್ಟ್‌ಗೆ ಸರ್ಕಾರ ಮನವಿ! 50 ಕೋಟಿ ಅನುದಾನ ಮೀಸಲು..

24 June, 2022 11:35 AM IST By: Kalmesh T
The government appeals to the High Court to start a cow school in every district

ಗೋ ಪ್ರೇಮಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಇನ್ಮುಂದೆ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸುವುದಾಗಿ ಹೈಕೋರ್ಟ್‌ಗೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.

ಇದನ್ನೂ ಓದಿರಿ: 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೆ?

ಈ ವರ್ಷದ ಡಿಸೆಂಬರ್ ವೇಳೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಗೋಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿದೆ.

ಈ ಸಂಬಂಧವಾಗಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು ಎಂದು ತಿಳಿದು ಬಂದಿದೆ.

ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ; ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಅರ್ಜಿ ಸಲ್ಲಿಕೆ ಹೇಗೆ?

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ‘ಹೆಚ್ಚುವರಿಯಾಗಿ 70 ಗೋಶಾಲೆಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದೆ ಎನ್ನುವುದನ್ನು ವಿವರಿಸಿ, ಯಾವ ತಿಂಗಳಲ್ಲಿ, ಯಾವ ಜಿಲ್ಲೆಯಲ್ಲಿ ಗೋಶಾಲೆ ಕಾರ್ಯಾರಂಭ ಮಾಡಲಿವೆ ಎಂಬ ವಿವರವಾದ ವೇಳಾಪಟ್ಟಿಯನ್ನು ಸಲ್ಲಿಸಿದರು.

ಹೊಸ 70 ಗೋಶಾಲೆಗಳ ನಿರ್ಮಾಣಕ್ಕೆ ₹20 ಕೋಟಿ ಅನುದಾನ, ಕಾಮಗಾರಿ ಚಾಲ್ತಿಯಲ್ಲಿರುವ ಗೋಶಾಲೆಗಳಿಗೆ ₹15 ಕೋಟಿ ಅನುದಾನ ಸೇರಿದಂತೆ ಗೋಶಾಲೆಗಳ ಸ್ಥಾಪನೆಗೆ ಒಟ್ಟು ₹50 ಕೋಟಿ ಅನುದಾನ ಮೀಸಲಿಡಲಾಗಿದೆʼ ಎಂದರು.

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..