News

Rice Export Ban: ಅಮೆರಿಕಾದಲ್ಲಿ ಅಕ್ಕಿಗೆ ಹಾಹಾಕಾರ ಸೃಷ್ಟಿ: ಭಾರತದಲ್ಲಿನ ಈ ಬೆಳವಣಿಗೆಯೇ ಕಾರಣ!

24 July, 2023 11:35 AM IST By: Hitesh
The creation of rice in America: this development in India is the reason!

ಅಮೆರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅಕ್ಕಿಯ ಕೊರತೆ ಎದುರಾಗಿದ್ದು, ಜನ ಅಕ್ಕಿಯನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.

ಅಮೆರಿಕಾದ ಸೂಪರ್‌ ಮಾರ್ಕೆಟ್‌ಗಳ ಮುಂದೆ ಸರತಿ ಸಾಲಿನಲ್ಲಿ ಜನ ನಿಲ್ಲುತ್ತಿದ್ದು, ಒಬ್ಬರಿಗೆ ಒಂದು ಚೀಲ ಅಕ್ಕಿ ಮಾತ್ರ ನೀಡಲಾಗುವುದು

ಎಂದು ಅಲ್ಲಿನ ಸ್ಟೋರ್‌ಗಳು ಬೋರ್ಡ್‌ ಹಾಕಿಕೊಂಡಿವೆ. ವಿಶ್ವದಾದ್ಯಂತ ಇಂದು ಅಕ್ಕಿ ಪೂರೈಕೆಯಲ್ಲಿ ಏರಿಳಿತವಾಗುತ್ತಿದ್ದು,

ಇದಕ್ಕೆ ಭಾರತದಲ್ಲಿನ ಕೆಲವು ನಿರ್ದಿಷ್ಟ ಬದಲಾವಣೆಗಳು ಕಾರಣವಾಗಿದೆ.

 ವಿಶ್ವ ಮಟ್ಟದಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಅಂದರೆ 2022 ಮತ್ತು 2023ನೇ ಸಾಲಿನಲ್ಲಿ ಬರೋಬ್ಬರಿ 8.7 ದಶಲಕ್ಷ ಟನ್ ಪ್ರಮಾಣದ ಅಕ್ಕಿ  

ಉತ್ಪಾದನೆ ಕುಸಿತ ಕಂಡಿದೆ. ಹೀಗಾಗಿ, ಇಂದು ವಿಶ್ವಮಟ್ಟದಲ್ಲಿ ಅಕ್ಕಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ.

ಇದು ಪರೋಕ್ಷವಾಗಿ ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಕ್ಕಿ ಉತ್ಪಾದನೆ ಕುಸಿತ: ಭಾರತದ ಪಾತ್ರವೇನು

ವಿಶ್ವದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಇಳಿಕೆ ಆಗುತ್ತಿರುವುದಕ್ಕೆ ಪರೋಕ್ಷವಾಗಿ ಭಾರವೂ ಕಾರಣವಾಗಿದೆ ಎಂದೇ ಹೇಳಬಹುದು.

ಭಾರತವು ವಿಶ್ವಕ್ಕೆ ಹೆಚ್ಚು ಪ್ರಮಾಣದಲ್ಲಿ ಅಕ್ಕಿಯನ್ನು ಪೂರೈಕೆ ಮಾಡುತ್ತದೆ.   

ಚೀನಾದ ನಂತರದಲ್ಲಿ ವಿಶ್ವಕ್ಕೆ ಹೆಚ್ಚು ಅಕ್ಕಿ ಪೂರೈಕೆಯು ಭಾರತದಿಂದಲೇ ಆಗುತ್ತದೆ.

ಆದರೆ, ಈ ಬಾರಿ ಕಳೆದ 20 ವರ್ಷಗಳಲ್ಲೇ ಅಕ್ಕಿಯ ಉತ್ಪಾದನೆಯು ಕುಸಿತ ಕಂಡಿದ್ದು, ಅಕ್ಕಿಗೆ ಹಾಹಾಕಾರ ಸೃಷ್ಟಿಯಾಗುತ್ತಿದೆ.

ಹೀಗಾಗಿ, ಬಾಸುಮತಿ ಮತ್ತು ಕುಚಲಕ್ಕಿಯನ್ನು ಹೊರತುಪಡಿಸಿ ಉಳಿದ ಯಾವುದೇ ಮಾದರಿಯ

ಅಕ್ಕಿಗಳನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರವು ನಿರ್ಬಂಧ ವಿಧಿಸಿದೆ. ಇದರಿಂದಾಗಿ ಅಕ್ಕಿ ಬೆಲೆ ಹೆಚ್ಚಳವಾಗುತ್ತಿದೆ.

ಅಕ್ಕಿ ಬೆಲೆ ಹೆಚ್ಚಳಕ್ಕೆ ಕಾರಣವೇನು ?

ಭಾರತವು ವಿಶ್ವಕ್ಕೆ ಅಕ್ಕಿಯನ್ನು ಭಾರೀ ಪ್ರಮಾಣದಲ್ಲಿ ಅಂದರೆ ಶೇ 40ರಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡುತ್ತದೆ.

ಆದರೆ, ಇದೀಗ ಭಾರತದಲ್ಲೇ ಉತ್ಪಾದನೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿರುವುದು

ವಿಶ್ವಕ್ಕೆ ಅಕ್ಕಿ ಪೂರೈಕೆ ಮಾಡುವುದು ಅಂದರೆ ರಫ್ತು ಮಾಡುವ ಪ್ರಮಾಣದಲ್ಲಿ ಇಳಿಕೆ ಆಗಿದೆ.  

ಎಲ್ ನಿನೊ ಪ್ರಭಾವದಿಂದಾಗಿ ಮಳೆ ಕೊರತೆ ಉಂಟಾಗಿತ್ತು.

ಇದಕ್ಕೂ ಮುನ್ನ ಬಂದ ಸಾಂಕ್ರಾಮಿಕ ರೋಗ ಜಗತ್ತನ್ನೇ ಹೈರಾಣಾಗಿಸಿತ್ತು.

ಇದಾದ ನಂತರದಲ್ಲಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕ ತಾಪಮಾನದಲ್ಲಿ

ಆಗಿರುವ ಹಲವು ಬದಲಾವಣೆಗಳು ಅಕ್ಕಿ ಉತ್ಪಾದನೆಯಲ್ಲಿ ಕುಸಿತವಾಗುವಂತಾಗಿದೆ. 

ವಿಶ್ವದಲ್ಲೇ ಅಕ್ಕಿ ಪೂರೈಕೆಯಲ್ಲಿ ಭಾರತವು ಶೇ 40ರಷ್ಟು ಪಾಲನ್ನು ಹೊಂದಿದೆ.

ಹೀಗಾಗಿ ಅಕ್ಕಿ ಆಮದು ಮೇಲೆ ಅವಂಬನೆ ಆಗಿರುವ ದೇಶಗಳಲ್ಲಿ ಇದೀಗ ಅಕ್ಕಿಗೆ ಹಾಹಾಕಾರ ಸೃಷ್ಟಿ ಆಗಿದೆ.  

ಅಫ್ರಿಕಾದ ರಾಷ್ಟ್ರಗಳು, ಟರ್ಕಿ, ಸಿರಿಯಾ, ಪಾಕಿಸ್ತಾನಕ್ಕೂ ಅಕ್ಕಿಯ ಅಭಾವ ತೀವ್ರವಾಗಿ ಬಾಧಿಸಲಿದೆ ಎನ್ನಲಾಗಿದೆ.

ಈಗಾಗಲೇ ಪಾಕಿಸ್ತಾನ ಆರ್ಥಿಕವಾಗಿ ಕುಸಿದಿದ್ದು, ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.  

ಅಕ್ಕಿಯ ನುಚ್ಚು ರಫ್ತಿಗೂ ಭಾರತ ನಿರ್ಬಂಧ ವಿಧಿಸಿದೆ ಇದರೊಂದಿಗೆ ರಫ್ತು ಮೇಲಿನ ತೆರಿಗೆಯನ್ನು ಶೇ 20ರಷ್ಟು ಹೆಚ್ಚಳ ಮಾಡಲಾಗಿದೆ.

ಈ ಮೂಲಕ   ಭಾರತವು ವಾರ್ಷಿಕ 10.3 ದಶಲಕ್ಷ ಟನ್‌ನಷ್ಟು ಅಕ್ಕಿಯನ್ನು ರಫ್ತು ಮಾಡುತ್ತದೆ. 

ವಿಯೆಟ್ನಾಂ, ಥಾಯ್ಲೆಂಡ್, ಪಾಕಿಸ್ತಾನ ಹಾಗೂ ಅಮೆರಿಕಾದಂತಹ ರಾಷ್ಟ್ರಗಳು ಸಹ ಅಕ್ಕಿ ರಫ್ತು ಮಾಡುತ್ತಿತ್ತು.

ಬದಲಾದ ಪರಿಸ್ಥಿತಿಯಲ್ಲಿ ಇದೀಗ ಈ ರಾಷ್ಟ್ರಗಳಲ್ಲೂ ಅಕ್ಕಿಯ ದಾಸ್ತಾನು ಇಲ್ಲದಂತಾಗಿದೆ ಎಂದು ಹೇಳಲಾಗಿದೆ.  

ಇನ್ನು ಗಂಭೀರವಾದ ವಿಷಯವೆಂದರೆ, ಭಾರತದಲ್ಲಿ ಅಕ್ಕಿಯ ಬೆಲೆ ಶೇ 14ರಿಂದ 15ರಷ್ಟು ಹೆಚ್ಚಾಗಿದೆ.

ಗೋಧಿ ಹಾಗೂ ಸಕ್ಕರೆ ರಫ್ತು ಪ್ರಮಾಣವನ್ನು ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಯೂ ಬೆಲೆ ಹೆಚ್ಚಳವಾಗಲಿದೆ ಎನ್ನಲಾಗಿದೆ. 

Rain Today ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದುವರಿದ ಧಾರಾಕಾರ ಮಳೆ!