News

ರಾಜ್ಯ ಸರ್ಕಾರದ ಮಹತ್ವದ ಆದೇಶ; ಸರ್ಕಾರಿ ನೌಕರರ ಎರಡನೆ ಪತ್ನಿ- ಮಕ್ಕಳಿಗೂ ಸಿಗಲಿದೆ ಅನುಕಂಪದ ನೌಕರಿ!

01 May, 2022 2:01 PM IST By: Kalmesh T
The children of the second wife of government employees also get sympathy Job

ಇಲ್ಲಿದೆ ರಾಜ್ಯ ಸರ್ಕಾರ ಮಹತ್ವದ ಆದೇಶ. ಸಾರ್ವಜನಿಕರೆ ಗಮನಿಸಿ, ಈಗ ಸರ್ಕಾರಿ ನೌಕರರ ಎರಡನೆ ಪತ್ನಿಯ ಮಕ್ಕಳಿಗೂ ದೊರೆಯಲಿದೆ ಅನುಕಂಪದ ಆಧಾರದ ಮೇಲಿನ ನೌಕರಿ.

ಹೌದು! ಸರ್ಕಾರಿ ನೌಕರನ 2 ನೇ ಪತ್ನಿ ಅಥವಾ ನಂತರದ ಪತ್ನಿಯಿಂದ ಜನಿಸಿದ ಮಕ್ಕಳನ್ನು ಸಹ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿರಿ:

ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳನ್ನು ಕೂಡಿ ಹಾಕಿದ ರೈತರು!

ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ಅನ್ವಯ ಸರ್ಕಾರಿ ನೌಕರರು ಸೇವೆಯಲ್ಲಿ ಇರುವಾಗ ಮೃತಪಟ್ಟರೆ ಅವರನ್ನು ಅವಲಂಬಿಸಿ ಬದುಕುತ್ತಿರುವವರಲ್ಲಿ ಅರ್ಹರಾದ ಒಬ್ಬರಿಗೆ ನಿಯಮಗಳಲ್ಲಿ ನಿಗದಿಪಡಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬಹುದಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಸರ್ಕಾರದ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಎಚ್ಚರ ಕರ್ನಾಟಕ! ಹಕ್ಕಿಜ್ವರ; ಲೆಕ್ಕ ತಪ್ಪಿದರೆ ಕಾದಿದೆ ಆಪತ್ತು!

2022 ರ ಫೆ.24 ರಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಸರ್ಕಾರಿ ನೌಕರನ ಎರಡನೇ ಪತ್ನಿಯಿಂದ ಜನಿಸಿದ ಮಕ್ಕಳು ಎನ್ನುವ ಕಾರಣಕ್ಕೆ ಮಕ್ಕಳಲ್ಲಿ ತಾರತಮ್ಯ ಮಾಡುವುದು ಭಾರತದ ಸಂವಿಧಾನದ ಅನುಚ್ಛೇದ 16(2) ರ ಉಲ್ಲಂಘನೆಯಾಗುತ್ತದೆ.

ಹಾಗಾಗಿ ಇಂತಹ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಪರಿಗಣಿಸದೇ ಇರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ನ್ಯಾಯಾಲಯದ ಈ ಅಭಿಪ್ರಾಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.

ಇನ್ನು ಮುಂದೆ ಸರ್ಕಾರದ ಅನುಕಂಪದ ಆಧಾರದ ನೌಕರಿಯನ್ನು ಪಡೆಯುವಾಗ ಯಾವುದೇ ಬೇಧ ಭಾವ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!