News

ಕರ್ನಾಟಕ ಸರ್ಕಾರದಿಂದ ಇನ್ನು ಮುಂದೆ ರೈತರಿಗೆ ನೆರೆ ಪರಿಹಾರ ಧನ ರಿಲೀಸ್ ಆಗಲಿದೆ!

10 December, 2021 11:22 AM IST By: Ashok Jotawar
Farm Loss

ಕರ್ನಾಟಕ ಸರ್ಕಾರದಿಂದ 681.90 ರೂ ಕೋಟಿಯಷ್ಟು ಪರಿಹಾರ ಧನವನ್ನು ನೀಡಲಾಗುತ್ತಿದೆ.

ಪತ್ರಿಕಾಘೋಷ್ಟಿಯಲ್ಲಿ ಆರ್. ಅಶೋಕ್ (ಕಂದಾಯ ಸಚಿವರು ಕರ್ನಾಟಕ) ಹೇಳಿದರು. ಸುಮಾರು 3 ತಿಂಗಳಿಂದ ಕರ್ನಾಟಕ ಸರ್ಕಾರವು 10.62 ಲಕ್ಷ ರೈತರಿಗೆ 681.90 ರೂ. ಕೋಟಿಯಷ್ಟು ಪರಿಹಾರ ಬಿಡುಗಡೆ ಮಾಡಲಾಗಿದೆ  ಎಂದು  ಪತ್ರಿಕಾಘೋಷ್ಠಿಯಲ್ಲಿ ವಿವರಿಸಿದರು.

ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದ 2-3 ದಿನದೊಳಗಡೇನೇ ಪರಿಹಾರ ಧನವನ್ನು ಸಂತ್ರಸ್ತರ ಖಾತೆ ಗೆ ತಲುಪಿಸಲಾಗಿತ್ತಿದೆಯಂದು  ಕಂದಾಯ ಸಚಿವ ಆರ್.ಆಶೋಕ್ ರವರು ತಿಳಿಸಿದ್ದಾರೆ. ಮತ್ತು ಇದು ಭಾರತದ ಮೊದಲ ಸರ್ಕಾರ, ಕಡಿಮೆ ದಿನದಲ್ಲೇ ಸಂತ್ರಸ್ತರಿಗೆ ಪರಿಹಾರವನ್ನು ನೀಡುತ್ತಿದೆಯಂದು  ಹೇಳಿದರು. ಕಂದಾಯ ಸಚಿವರಾದ ಆರ್ ಅಶೋಕ್ ರವರು ಹಿಂದಿನ ಸರ್ಕಾರಗಳ ಮೇಲೆ ಕಟಾಕ್ಷ ಮಾಡುತ್ತ, ಹೇಳಿದರು 'ಹಿಂದೆ ಸಂತ್ರಸ್ತರು ತಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ 6 ತಿಂಗಳಿಂದ 1 ವರ್ಷ ಹಿಡಿಯುತಿತ್ತು ಸರ್ಕಾರಗಳಿಗೆ ಪರಿಹಾರ ಧನವನ್ನು ನೀಡಲು'. ಇನ್ನು ಸಾಕಷ್ಟು ಜನ ರೈತರು ತಮ್ಮ ಪರಿಹಾರಕ್ಕಾಗಿ ಪರಿಹಾರ ನಿಧಿ ಯೋಜನೆಯ ಪೋರ್ಟಲ್ಗೆ ಆನ್ಲೈನ್ ಅರ್ಜಿ ಗಳನ್ನೂ ಸಲ್ಲಿಸುತಿದ್ದರೆಂದು ಹೇಳಿದರು.

ಇನ್ನು 1,281 ರೂ ಕೋಟಿ ಯಷ್ಟು ಪರಿಹಾರ ಧನದ ಮನವಿ ಬಂದಿದೆಯಂದು ಆರ್. ಅಶೋಕ ರವರು ತಿಳಿಸಿದರು.ಈಗಿನ ಪರಿಹಾರದ ವಿಷಯಕ್ಕೆ ಬಂದಾಗ ಸುಮಾರು 681 ರೂ. ಕೋಟಿ ಯಷ್ಟು ಹಣ ವನ್ನು 10  ಲಕ್ಷ ಜನರಲ್ಲಿ ಬಿಡುಗಡೆ ಮಾಡಲಾಗಿದೆಯಂದು ಖುದ್ದಾಗಿ ಕರ್ನಾಟಕದ ಕಂದಾಯ ಮಂತ್ರಿ ಹೇಳಿದ್ದಾರೆ. ಇದನ್ನು  ಭಾಗಿಸಿ ನೋಡಿದರೆ ಸುಮಾರು 6,810 ರೂ ಗಳಷ್ಟು ಪರಿಹಾರ ಪ್ರತಿ ಯೊಬ್ಬ ಪೀಡಿತನಿಗೆ ದೊರಕಿದೆ.

ಪ್ರಶ್ನೆ ಯಂದರೆ ಕೇವಲ 6,810 ರೂ. ಗಳಲ್ಲಿ ಒಬ್ಬ ಸಂತ್ರಾಸತನ ನೋವು ಪರಿಹಾರ ವಾಗುವುದೇ?ಎಂದು. ಏಕೆಂದರೆ ಈಗಿನ ಮಾರುಕಟ್ಟೆಯಲ್ಲಿ ಎಲ್ಲ ಪಧಾರ್ಥಗಳ ಬೆಲೆಗಳು ಗಗನಕ್ಕೆ ಮುಟ್ಟಿವೆ.ಸರ್ಕಾರದಿಂದ ಪರಿಹಾರ ಪಡೆಯಲು ರೈತ ತನ್ನ ಪ್ರವಾಹದಿಂದ ನಾಶವಾದ ಹೊಲದ ಭಾವ ಚಿತ್ರ ಮತ್ತು ಅವನ ಖುದ್ದು  ಮಾಹಿತಿ ಜೊತೆಗೆ ಆನ್ಲೈನ್ ಸೆಂಟರ್ ಗಳಲ್ಲಿ ನೋಂದಾಯಿಸುವುದು. ಇದೆಲ್ಲ ಸುಮಾರು 4 -5 ದಿನದ ಕೆಲಸ ಇರುತ್ತೆ ಮತ್ತು ಇದೆಲ್ಲ ಸೌಲಭ್ಯಗಳು ಕೆಲವೊಂದು  ಹಳ್ಳಿಗಳಲ್ಲಿ ಇರುವದಿಲ್ಲ. ಮತ್ತೆ ಆ ರೈತ ಈ ಎಲ್ಲ ಪ್ರಮಾಣ ಪತ್ರವನ್ನು ತಗೆದುಕೊಂಡು ಪಟ್ಟಣಗಳ ಬಳಿ ಬರಬೇಕು. ಇದೆಲ್ಲ ಮಾಡುವಲ್ಲಿ ಸುಮಾರು ಆ ಒಬ್ಬ ರೈತನ ಖರ್ಚು 2 -3 ಸಾವಿರ ರೂ. ಗಳಷ್ಟು. ಮತ್ತು ಅವನ ಶ್ರಮ ಬೇರೆ ಗುಣಿಸಿದರೆ ಈ ಪರಿಹಾರ ಧನ ಸಾಕಾಗುತ್ತದೆಯೇ? ನೀವೆ ಹೇಳಿ ಓದುಗರೇ.

ಇನ್ನಷ್ಟು ಓದಿರಿ:ಹೊಲದಲ್ಲಿ ಮೀನುಗರಿಕೆ! ಅದು ಹೇಗೆ ?

ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?

ಸಿಲೆಂಡರ್ ಪ್ಪೋ ಸಿಲೆಂಡರ್! ಸಣ್ಣ ಸಣ್ಣ ಸಿಲೆಂಡರ್, ಪುಟ್ಟ ಪುಟ್ಟ ಗ್ಯಾಸ್ ಸಿಲೆಂಡರ್!

40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್!