News

ನ. 25 ರಂದು ತಾರಸಿ ತೋಟಗಾರಿಕೆ ತರಬೇತಿಯಲ್ಲಿ ಭಾಗವಹಿಸಲು ಕರೆ

23 November, 2020 9:56 AM IST By:

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಬೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ನ. 25ರಂದು ಬೆಳಿಗ್ಗೆ 10ಗಂಟೆಗೆ ತಾರಸಿ ತೋಟಗಾರಿಕೆ ಬಗ್ಗೆ ಒಳಾಂಗಣ ತರಬೇತಿ ಆಯೋಜಿಸಲಾಗಿದೆ. ‌

ತಾರಸಿ ತೋಟದ ನಿರ್ವಹಣೆ ಕುರಿತು ಸಮಗ್ರವಾಗಿ ತಿಳಿಸಿಕೊಡಲಾಗುತ್ತದೆ. ಆಸಕ್ತಿಯುಳ್ಳ ಜಿಲ್ಲೆಯ ಜನರು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ 99807 97956, 95382 21427 ಸಂಪರ್ಕಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಇಂದಿನಿಂದ ಆನ್‌ಲೈನ್‌ ತರಬೇತಿ

 ‘ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ’ ವಿಷಯ ಕುರಿತಂತೆ ನ.23ರಿಂದ ಮೂರು ತಿಂಗಳ ಅವಧಿಯಲ್ಲಿನ ಪ್ರತಿ ಸೋಮವಾರವೂ ಕೃಷಿ ಸಂವಹನ ವೇದಿಕೆಯು, ರೈತ ಸಮೂಹಕ್ಕೆ ಆನ್‌ಲೈನ್‌ ತರಬೇತಿ ನೀಡಲಿದೆ ಎಂದು ಮೈಸೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದ್ದಾರೆ.

ಲಾಕ್‌ಡೌನ್ ಅವಧಿಯಿಂದಲೂ ರೈತರಿಗೆ ಆನ್‌ಲೈನ್‌ ತರಬೇತಿ ನೀಡಲಾಗುತ್ತಿದೆ. ರೈತರು ಸುಸ್ಥಿರ ಕೃಷಿ ನಡೆಸಲು ಅನುಕೂಲವಾಗುವಂತೆ 12 ಸರಣಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂಮ್‌ ಮೀಟಿಂಗ್ ಆ್ಯಪ್ ಮೂಲಕ ತರಬೇತಿ ನಡೆಯಲಿದ್ದು https:/us02web.zoom.us/j/86287988697 ಲಿಂಕ್ ಮೂಲಕ ತರಬೇತಿಯಲ್ಲಿ ಭಾಗವಹಿಸಬಹುದು. ಫೇಸ್‌ಬುಕ್ ಪೇಜ್‌ನಲ್ಲೂ ಲೈವ್ ವೀಕ್ಷಿಸಬಹುದು ಎಂದು ಅವರು ಮಾಹಿತಿ ನೀಡಿದರು.