ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲಿ ಏನೇನೋ ಅಚ್ಚರಿಯ ಘಟನೆಗಳು ನಡೆದು ಹೋಗುತ್ವೆ. ಶಾರ್ಟ್ಸ್, ರೀಲ್ಸ್ ಜಮಾನಾದಲ್ಲಿ ವೀವ್ಸ್ ಲೈಕ್ ಕಾಮೆಂಟ್‌ಗಳದ್ದೆ ಕಾರುಬಾರು. ಇನ್ನು ಇವುಗಳು ಸಾಕಷ್ಟು ಜನರಿಗೆ ಆದಾಯದ ಮೂಲಗಳಾಗಿವೆ.
ಟಿಕ್‌ಟಾಕ್ ರೀಲ್ಸ್ ಗಳಂತಹ ತರಹೇವಾರಿ ವೇದಿಕೆಗಳ ಮೂಲಕ ಕೋಟ್ಯಾಂತರ ರೂಪಾಯಿ ಗಳಿಸುತ್ತಿರುವವರನ್ನು ನಾವು ಇಂದಿನ ಜಗತ್ತಿನಲ್ಲಿ ಕಾಣುತ್ತಿದ್ದೇವೆ. ಇದರಲ್ಲಿ ಇನ್ನು ಕೆಲವರು ತಾವು ದಿಢೀರ್ ಫೇಮಸ್ ಆಗಿ ಸೆಲೆಬ್ರಿಟಿ ಆಗ್ಬೇಕು ಅನ್ನೋ ತವಕದಲ್ಲಿ ಏನೇನೋ ಸರ್ಕಸ್ ಮಾಡಿ ಫಜೀತಿಗೆ ಸಿಕ್ಕಿ ಹಾಕಿಕೊಳ್ತಾರೆ. ಇದೆಲ್ಲದರ ನಡುವೆ ರೀಲ್ಸ್ ಮಾಡಲು ಹೋಗಿ ಶಿಕ್ಷಕಿಯೊಬ್ಬರು ಸಭ್ಯತೆ ಹಾಗೂ ಕೆಲವು ಸಾಮಾಜಿಕ ಎಲ್ಲೆಯನ್ನು ಮೀರಿ ಕೆಲಸದಿಂದ ವಜಾಗೊಂಡಿದ್ದಾರೆ.
ಏನಿದು ಪ್ರಕರಣ..?
ವಿದ್ಯಾರ್ಥಿಗಳೊಂದಿಗೆ ಇಂಗ್ಲೀಷ್ ಪಾಠ ಮಾಡುವ ಶಿಕ್ಷಕಿ ಟಿಕ್‌ಟಾಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಕ್ಕೆ, ಅವರನ್ನು ಕೆಲಸದಿಂದ ವಜಾ ಮಾಡಿರುವ ಘಟನೆ ಬ್ರೇಜಿಲ್‌ನಲ್ಲಿ ವರದಿಯಾಗಿದೆ. ಸಿಬೆಲ್ಲಿ ಫೇರೇರಾ ಎಂಬ ಶಿಕ್ಷಕಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ಟಿವ್ ಇದ್ದು ಅವರು ಮಿಲಯನ್ ಗಟ್ಟಲೇ ಫಾಲೋವರ್ಸ್‌ಗಳನ್ನ ಕೂಡ ಹೊಂದಿದ್ದಾರೆ. ಅವರ ಪ್ರತಿಯೊಂದು ವಿಡಿಯೋ ಕೂಡ ಲಕ್ಷಾಂತರ ವೀವ್ಸ್‌ಗಳನ್ನು ಪಡೆದುಕೊಂಡಿವೆ.
ಆದಾಯದ ಮೂಲ..!
ತಾನು ಶಿಕ್ಷಕಿಯಾಗಿ ಗಳಿಸುತ್ತಿರುವದಕ್ಕಿಂತ ಸೋಷಿಯಲ್ ಮೀಡಿಯಾಗಳಿಂದ ಬರುವ ಆದಾಯ ಹೆಚ್ಚಾಗಿದೆ. ಇದುನ ನನ್ನ ಪ್ರಮುಖ ಆದಾಯದ ಮೂಲವಾಗಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಕ್ಲಾಸ್‌ರೂಮನಲ್ಲಿ ಪಠ್ಯವನ್ನು ಅರ್ಥೈಸಲು ನೃತ್ಯ, ಹಾಗೂ ಇತರ ಸಂವಹನ ಸಾಧನಗಳ ಮೂಲಕ ಸರಳವಾಗಿ ಅರ್ಥೈಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳನ್ನು ಓದಿನಲ್ಲಿ ಕೇಂದ್ರಿಕರಿಸಲು ಇದು ಅನುವು ಮಾಡಿಕೊಡುತ್ತದೆ ಎಂಬುದು ಅವರ ಅಭಿಪ್ರಾಯ.
ಈ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಶಿಕ್ಷಕಿಯನ್ನು ಯಾವಾಗ ವಜಾಗೊಳಿಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಇಂಗ್ಲೀಷ್ ಶಿಕ್ಷಕಿ ಬ್ರೆಜಿಲ್‌ನ ಫೆಡರಲ್ ಯೂನಿವರ್ಸಿಟಿ ಆಫ್ ಲಾವ್ರಾಸ್‌ನಿಂದ ಜೀವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ ಎಂದು ವರದಿಯಾಗಿವೆ.