News

ತಮಿಳುನಾಡಿನಲ್ಲಿ ನಟ ಕಮಲ್ ಹಾಸನ್ ಗೆ ಕೂದಲೆಳೆ ಅಂತರದ ಸೋಲು

03 May, 2021 8:32 AM IST By:
Film Actor Kamal Hasan

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮಿಳು ಪ್ರಖ್ಯಾತ ನಟ ಕಮಲ್ ಹಾಸನ್ ಸ್ಥಾಪಿತ ಹೊಸ ಪಕ್ಷ ಮಕ್ಕಳ್ ನಿಧಿಮಯಂ  ಪಕ್ಷ ಸ್ಥಾಪಿಸಿ ತಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ತಮಿಳುನಾಡು ರಾಜಕಾರಣದಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸ ಮೂಡಿಸಿದ್ದ ನಟ ಕಮಲ್ ಹಾಸನ್ ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದು, ಕೂದಲೆಳೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಸೋಲು ಕಂಡಿದ್ದಾರೆ.

ಸ್ವತಃ ಕಮಲ್ ಹಾಸನ್ ಸೇರಿದಂತೆ ಪಕ್ಷದ ಯಾವೊಬ್ಬ ಅಭ್ಯರ್ಥಿ ಸಹ ಚುನಾವಣೆಯಲ್ಲಿ ಗೆಲವು ಸಾಧಿಸಿಲ್ಲ. ತಮಿಳುನಾಡಿನ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ನಟ ಕಮಲ್ ಹಾಸನ್ ಅವರು ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸನ್ ವಿರುದ್ಧ ಕೇವಲ 1500ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. ಆರಂಭದಲ್ಲಿ 2000 ಮತಗಳ ಅಂತರದ ಮುನ್ನಡೆ ಸಾಧಿಸಿದ್ದ ಕಮಲ್  ಹಾಸನ್ ಬಳಿಕ ತೀವ್ರ ಜಿದ್ದಾಜಿದ್ದಿನಿಂದಾಗಿ ಹಿನ್ನಡೆ ಅನುಭವಿಸಿದರು. ಅಂತಿಮ ಸುತ್ತಿನವರೆಗೂ ಮುನ್ನಡೆಯಲ್ಲಿದ್ದ ಕಮಲ್ ಹಾಸನ್ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದರಾದರೂ ಅಂತಿಮವಾಗಿ ಅವರೂ ಸೋಲು ಕಂಡಿದ್ದಾರೆ
ಅಂತಿಮ ಮತ ಎಣಿಕೆ ಮುಗಿದಾಗ ಕಮಲ್ ಹಾಸನ್ 49,561 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸ್ 50,798 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 1237 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಮಯೂರ ಜಯಕುಮಾರ್ 41,081 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಕೊಯಮತ್ತೂರು ದಕ್ಷಿಣ ಕ್ಷೇತ್ರವನ್ನು 2008 ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರಚಿಸಲಾಗಿತ್ತು. ಈ ಕ್ಷೇತ್ರವು ಎಐಎಡಿಎಂಕೆ ಪಕ್ಷದ ಆರ್ ದೊರೈಸಾಮಿ ಅವರ ಸ್ವಕ್ಷೇತ್ರವಾಗಿದ್ದು, 2011 ರಲ್ಲಿ ದೊರೈಸ್ವಾಮಿ ಅವರು ಇದೇ ಕ್ಷೇತ್ರದಿಂದ ಮೊದಲು ಶಾಸಕರಾಗಿ ಆಯ್ಕೆಯಾಗಿದ್ದರು. 2016 ರಲ್ಲಿ ಎಐಎಡಿಎಂಕೆ ಅಮ್ಮನ್  ಕೆ ಅರ್ಜುನನ್ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 

'ಮಕ್ಕಳ್ ನಿಧಿ ಮಯಂ' ಪಕ್ಷವು 2019 ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಸ್ಪರ್ಧಿಸಿತ್ತು ಆದರೆ ಆಗಲೂ ಯಾವೊಬ್ಬ ಅಭ್ಯರ್ಥಿಯೂ ಸಹ ಜಯ ಸಾಧಿಸಿರಲಿಲ್ಲ. ಈಗ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಸೀಟಾದರೂ ಗೆಲ್ಲುವ ನಿರೀಕ್ಷೆ ಇದೆಯೆಂದು ಕಮಲ್ ಹಾಸನ್ ಹೇಳಿದ್ದರು ಆದರೆ ಅದೂ ಸುಳ್ಳಾಗಿದೆ.