ತಮಿಳುನಾಡು ರಾಜ್ಯದಲ್ಲಿಯೂ ಚುನಾವಣೆ ಪೂರ್ವದಲ್ಲಿ ಅಲ್ಲಿನ ಸರ್ಕಾರ ರೈತರ ಸಾಲಮನ್ನಾ ಘೋಷಿಸಿತ್ತು. ಘೋಷಣೆಯಂತೆ ತಮಿಳುನಾಡಿನ ಮುಖ್ಯಮಂತ್ರಿ ಕೆ. ಪಳನಿಸ್ವಾಮಿಯವರು ಶನಿವಾರ ಒಂಬತ್ತು ರೈತರ ಸಾಲಮನ್ನಾ ಮಾಡಿದ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಚುನಾವಣೆ ಪೂರ್ವದಲ್ಲಿ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಸೇರಿದಂತೆ ಇತರ ಘೋಷಣೆಗಳನ್ನು ಮಾಡುತ್ತಾರೆ. ಆದರೆ ತಮಿಳುನಾಡಿನ ಸರ್ಕಾರ ಚುನಾವಣೆ ಪೂರ್ವದಲ್ಲಿಯೇ ಸಾಲಮನ್ನಾ ಘೋಷಣೆ ಮಾಡಿದ ಸಾಲಮನ್ನಾ ಪ್ರಕ್ರಿಯೆ ಈಗಾಗಲೇ ಆರಂಭಿಸಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ12,100 ಕೋಟಿ ಮೊತ್ತದ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಫೆಬ್ರವರಿ 5 ರಂದು ತಮಿಳುನಾಡು ಸರ್ಕಾರ ಘೋಷಿ ಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಶನಿವಾರ ಒಂಬತ್ತು ರೈತರಿಗೆ ಸಾಲ ಮನ್ನಾ ಮಾಡಿದ ಪ್ರಮಾಣಪತ್ರಗಳನ್ನು ನೀಡಿದ್ದಾರೆ.
ಈ ಪ್ರಮಾಣಪತ್ರದಲ್ಲಿ ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲವನ್ನು 2021ರ ಜನವರಿ 31ರಂದು ಮನ್ನಾ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ ತಮಿನಾಡಿನಲ್ಲಿ ಸಾಲ ಪಡೆದ ರೈತರು ಸಂತಸದಲ್ಲಿದ್ದಾರೆ. ಇದು ವಿರೋಧ ಪಕ್ಷದವರಿಗೆ ನುಂಗಲಾರದ ತುತ್ತಾಗಿದೆ.
ಫೆಬ್ರುವರಿ 5ರಂದು ಮುಖ್ಯಮಂತ್ರಿ ಪಳನಿಸ್ವಾಮಿ ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ 12,100 ಕೋಟಿ ಮೊತ್ತದ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಇದರಿಂದ ರಾಜ್ಯದ 16.43 ಲಕ್ಷ ರೈತರಿಗೆ ಲಾಭವಾಗಲಿದೆ. ಇದು ಚುನಾವಣಾ ವರ್ಷವಾಗಿರುವುದರಿಂದ ಈ ಸಾಲಮನ್ನಾವನ್ನು ವಿಶೇಷವಾಗಿ ಪರಿಗಣಿಸಲಾಗಿದೆ.