ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು, ಚಿನ್ನ ಖರೀದಿದಾರರಲ್ಲಿ ಖುಷಿ ಮೂಡಿಸಿದೆ.
ಭಾರತದಲ್ಲಿ ಯಾವುದೇ ಶುಭ ಸಮಾರಂಭಗಳಿರಲಿ ಆಭರಣ ಧರಿಸುವವರ ಸಂಖ್ಯೆ ಕಡಿಮೆಯೇನಿಲ್ಲ.
ಶುಭ ಸಮಾಂಭಗಳು ಇರುವ ಸಂಖ್ಯೆಗಿಂತ ಆಭರಣ ಪ್ರಿಯರ ಸಂಖ್ಯೆ ಹೆಚ್ಚಿದೆ.
ಈ ಹಿನ್ನಲೆ ಚಿನ್ನಾಭರಣಗಳ ಖರೀದಿ ಕೂಡ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇರುತ್ತದೆ .
ಕಳೆದ 2 ವಾರದಿಂದ ಚಿನ್ನ ಬೆಳ್ಳಿಯ ದರ ಏರುಪೇರಾಗುತ್ತಿದೆ.
ಒಂದು ವಾರದಲ್ಲಿ 4 ದಿನ ಚಿನ್ನದ ದರ ಗಗನಕ್ಕೇರಿದರೆ, ಇನ್ನು 2-3 ದಿನ ಕುಸಿತಗೊಳ್ಳುತ್ತದೆ.
ಆದರೆ, ಚಿನ್ನ ಖರೀದಿದಾರರ ಆಸಕ್ತಿ ಕುಗ್ಗುವುದಿಲ್ಲ.
ದೇಶಿಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕಳೆದ ದಿನಕ್ಕೆ ಹೋಲಿಸಿದರೆ ಇಂದು ಕೊಂಚ ಇಳಿಕೆ ಕಂಡಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲೂ ಚಿನ್ನ ಹಾಗೂ ಬೆಳ್ಳಿ ದರಗಳ ಬೆಲೆ ಇಳಿಕೆಯಾಗಿದೆ .
ಇಂದು ಮಾರುಕಟ್ಟೆಯ ಪರಿಸ್ಥಿತಿ ಅವಲೋಕಿಸಿದರೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆಯು 5,945 ರೂ. ದಾಖಲಾಗಿದೆ.
Ration Card- Aadhar Card ರೇಷನ್, ಪ್ಯಾನ್- ಆಧಾರ್ ಜೋಡಣೆ ಎರಡರ ಅವಧಿ ವಿಸ್ತರಣೆ!
ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಚಿನ್ನದ ದರ ಕೊಂಚ ಕಡಿಮೆ ಆಗಿದೆ.
ಮಂಗಳವಾರ ಚಿನ್ನದ ಬೆಲೆ 5,969 ರೂ. ಆಗಿತ್ತು. ಅಂದರೆ ಒಂದೇ ದಿನದಲ್ಲಿ 24 ರೂ. ಇಳಿಕೆ ಕಂಡುಬಂದಿದೆ.
ಅದರಂತೆ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ ನ 24 ಕ್ಯಾರಟ್ ಚಿನ್ನದ ಬೆಲೆ 5,950 ರೂ. ಆಗಿತ್ತು .
ಮಂಗಳವಾರ ಚಿನ್ನದ ಬೆಲೆ 5,978 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 28 ರೂ. ಇಳಿಕೆ ಕಂಡುಬಂದಿದೆ.
ಪ್ಯಾನ್- ಆಧಾರ್ ಕಾರ್ಡ್ ಅಷ್ಟೇ ಅಲ್ಲ ರೇಷನ್ ಕಾರ್ಡ್‌ನೊಂದಿಗೂ ಜೋಡಣೆ ಮಾಡಬೇಕು!
ಈಚೆಗೆ ಅಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು.
ಇನ್ನು ಬೆಂಗಳೂರಿನಲ್ಲಿ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 54,550 ರೂ. ಆಗಿದ್ದು,
ಮಂಗಳವಾರ ಚಿನ್ನದ ಬೆಲೆ 54,800 ರೂ. ಆಗಿತ್ತು ಅಂದರೆ ಒಂದು ದಿನದಲ್ಲಿ 250 ರೂ. ಇಳಿಕೆ ಕಂಡುಬಂದಿದೆ.
ಇನ್ನು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 59,500 ರೂ. ಆಗಿದೆ.
ಮಂಗಳವಾರ ಬಂಗಾರದ ಬೆಲೆ 59,780 ರೂ. ಆಗಿತ್ತು.
ಅಂದರೆ ಒಂದು ದಿನದಲ್ಲಿ 280 ರೂ. ಇಳಿಕೆ ಕಂಡುಬಂದಿದೆ.
ಪ್ಯಾನ್‌ಗೆ ಆಧಾರ್ ಜೋಡಣೆ: ಪರಿಶೀಲನೆ ಮಾಡುವುದು ಹೇಗೆ ?
ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರವನ್ನು ನೋಡುವುದಾದರೆ..(10 ಗ್ರಾಂ)
ನವದೆಹಲಿ: 54,650 ರೂ.(22 ಕ್ಯಾರಟ್) ಮತ್ತು 59,600 ರೂ. (24 ಕ್ಯಾರಟ್)
ಮುಂಬೈ: 54,500 ರೂ.(22 ಕ್ಯಾರಟ್) ಮತ್ತು 59,450 ರೂ. (24 ಕ್ಯಾರಟ್)
ಕೋಲ್ಕತ್ತಾ: 54,500 ರೂ.(22 ಕ್ಯಾರಟ್) ಮತ್ತು 59,450 ರೂ. (24 ಕ್ಯಾರಟ್
ಚೆನ್ನೈ: 55,100 ರೂ.(22 ಕ್ಯಾರಟ್) ಮತ್ತು 60,110 ರೂ. (24 ಕ್ಯಾರಟ್)
ಹೈದರಾಬಾದ್: 54,500 ರೂ.(22 ಕ್ಯಾರಟ್) ಮತ್ತು 59,450 ರೂ. (24 ಕ್ಯಾರಟ್)
ಇನ್ನುದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 73,000 ರೂ. ಆಗಿದ್ದು, ಮಂಗಳವಾರ ಒಂದು ಕೆಜಿ ಬೆಳ್ಳಿ ಬೆಲೆ 73,300 ರೂ.ಇತ್ತು.
ಕೇವಲ ಒಂದು ದಿನದಲ್ಲಿ 300 ರೂ. ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಬೆಲೆ 75,700 ರೂ. ಆಗಿದೆ. ಮಂಗಳವಾರ ಒಂದು ಕೆಜಿ ಬೆಳ್ಳಿ ಬೆಲೆ 76,000 ರೂ. ಆಗಿತ್ತು.
ಅಂದರೆ ಒಂದು ದಿನದಲ್ಲಿ 300 ರೂ. ಇಳಿಕೆ ಕಂಡುಬಂದಿದೆ. ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ..
ನವದೆಹಲಿ: 73,000 ರೂ. (ಒಂದು ಕೆಜಿ)
ಮುಂಬೈ: 73,000 ರೂ. (ಒಂದು ಕೆಜಿ)
ಕೋಲ್ಕತ್ತಾ: 73,000 ರೂ. (ಒಂದು ಕೆಜಿ)
ಚೆನ್ನೈ: 75,700 ರೂ. (ಒಂದು ಕೆಜಿ)
ಹೈದರಾಬಾದ್: 75,700 ರೂ. (ಒಂದು ಕೆಜಿ)
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ಇಂದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.