News

ಪುರಿ ರಥೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂ

23 June, 2020 11:30 AM IST By:

ಕೊರೋನಾ ನಿಯಂತ್ರಣದ ಮಾರ್ಗದರ್ಶಿ ಸೂತ್ರಗಳ ಪಾಲನೆ ಜತೆಗೆ ಹಲವು ನಿರ್ಬಂಧಗಳನ್ನು  ವಿಧಿಸುವ ಮೂಲಕ ಸುಪ್ರೀಂ ಕೋರ್ಟ್ ಕೊನೆಗೂ ಮಂಗಳವಾರದಿಂದ ಆರಂಭವಾಗಲಿರುವ ವಾರ್ಷಿಕ ಪುರಿ ಜಗನ್ನಾಥ ರಥಯಾತ್ರೆಗೆ ಅನುಮತಿನ ನೀಡಿದೆ.

 ರಥೋತ್ಸವವು ಮಂಗಳವಾರ (ಜೂನ್‌ 23) ಆರಂಭವಾಗಲಿದ್ದು, ಜುಲೈ 1ರವರೆಗೆ ನಡೆಯಲಿದೆ. ಪುರಿ ಜಗನ್ನಾಥನ ರಥಯಾತ್ರೆ ರದ್ದು ತೀರ್ಪನ್ನು ಪುನರ್‌ಪರಿಶೀಲಿಸಿರುವ ಸುಪ್ರೀಂ ಕೋರ್ಟ್‌ ಸೋಮವಾರ ಷರತ್ತುಬದ್ಧ ಅನುಮತಿ ನೀಡಿದೆ.

ಕೋವಿಡ್ ಹಿನ್ನೆಲೆಯಲ್ಲಿ ಈ ಮೊದಲು ಸುಪ್ರೀಂ ಕೋರ್ಟ್‌ ರಥಯಾತ್ರೆಗೆ ತಡೆ ನೀಡಿತ್ತು. ಕೇಂದ್ರ ಸರಕಾರ, ಒಡಿಶಾ ರಾಜ್ಯ ಸರಕಾರಗಳ ಮೇಲ್ಮನವಿ ಪರಿಶೀಲಿಸಿದ ಮುಖ್ಯ ನ್ಯಾ. ಎಸ್‌.ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ರಥಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡಿದೆ. ಇದು ಕೋಟ್ಯಂತರ ಜನರ ನಂಬಿಕೆಯ ವಿಷಯ. ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಯನ್ನು ನಿಲ್ಲಿಸಬಾರದು. ಜಗನ್ನಾಥ ಮೂರ್ತಿ ಮಂದಿರದಿಂದ ಹೊರಬಂದು ರಥ ಎಳೆಯದಿದ್ದರೆ ಸಂಪ್ರದಾಯದ ಪ್ರಕಾರ ಮತ್ತೆ 12 ವರ್ಷ ಹೊರಬರುವಂತಿಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದ್ದರು.

ಷರತ್ತುಗಳು:

 ಟಿವಿ ಮೂಲಕ ಭಕ್ತರಿಗೆ ರಥಯಾತ್ರೆಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಅರ್ಚಕರು, ರಥ ಎಳೆಯುವವರು ಸಹಿತ ಮೂರು ರಥಗಳ ಉತ್ಸವದಲ್ಲಿ ತಲಾ 500 ಮಂದಿಯಂತೆ 1,500 ಮಂದಿ ಮಾತ್ರ ಭಾಗವಹಿಸಬಹುದು. ಕರೋನಾ ಪರೀಕ್ಷೆ ನಡೆಸಿ ಕೊರೊನಾ ನೆಗೆಟಿವ್‌ ಎಂದು ದೃಢಪಟ್ಟವರು ಮಾತ್ರ ಪಾಲ್ಗೊಳ್ಳಬೇಕು. ರಥಯಾತ್ರೆಯ ದಿನಗಳಲ್ಲಿ ಪುರಿ ನಗರದಲ್ಲಿ ಕರ್ಫ್ಯೂ ಹೇರಬೇಕು.

ಹೇಗಿರುತ್ತದೆ ರಥಯಾತ್ರೆ:

ಆಷಾಢ ಮಾಸದಲ್ಲಿ ರಥಯಾತ್ರೆ ನಡೆಯತ್ತದೆ. ಜಗನ್ನಾಥ, ಬಾಲಭದ್ರ ಹಾಗೂ ಸುಭದ್ರಾ ದೇವಿಯ ಮೂರು ಬೃಹತ್ ಮರದ ರಥಗಳನ್ನು ನಿರ್ಮಿಸಿ 9 ದಿನಗಳ ಉತ್ಸವದಲ್ಲಿ ಸಾವಿರಾರು ಭಕ್ತರು ಅವುಗಳನ್ನು ನಿತ್ಯ ಎರಡು ಬಾರಿ 3 ಕಿ.ಮೀ. ಅಂತರದಲ್ಲಿ ಎಳೆಯುವುದು ಸಂಪ್ರದಾಯ. ಜಗನ್ನಾಥ ರಥವು 45 ಅಡಿ ಎತ್ತರವಿರುತ್ತದೆ. ಮೂರು ರಥಗಳ ನಿರ್ಮಾಣಕ್ಕೆ 2 ಎರಡು ತಿಂಗಳ ಸಿದ್ದತೆ ನಡೆಯುತ್ತದೆ. ಭಾರತೀಯ ಪುರಾತತ್ವ ಇಲಾಖೆಯು ಈ ತ್ರಿವಳಿ ರಥಗಳು ಅತ್ಯಂತ ಸುರಕ್ಷಿತ ಎಂದು ಖಾತ್ರಿ ಪಡೆಸಿದ ನಂತರವು ರಥ ಎಳೆಯಲಾಗುತ್ತದೆ.ರಥಯಾತ್ರೆಯು 10 ರಿಂದ 12 ದಿನ ನಡೆಯುತ್ತದೆ. ಜೂನ್ 23 ರಿಂದ ಜುಲೈ 1ರವರೆಗೆ ನಡೆಸಲು ನಿರ್ಧರಿಸಲಾಗಿದೆ.